ETV Bharat / bharat

ತೆಲುಗು ನಟ ಜೂನಿಯರ್​ ಎನ್​ಟಿಆರ್​ನ ಭೇಟಿ ಮಾಡಿದ​​ ಅಮಿತ್​ ಶಾ.. ಬಿಜಿಪಿ ಸೇರ್ತಾರ ತಾರಕ್ - ಬಿಜಿಪಿ ಸೇರ್ತಾರ ತಾರಕ್

ಮುನುಗೋಡು ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ತೆಲುಗು ನಟ ಜೂನಿಯರ್​ ಎನ್​ಟಿಆರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.

home-minister-amit-shah
ತೆಲುಗು ನಟ ಜೂನಿಯರ್​ ಎನ್​ಟಿಆರ್​​ ಅಮಿತ್​ ಶಾ ಭೇಟಿ
author img

By

Published : Aug 22, 2022, 7:45 AM IST

ಹೈದರಾಬಾದ್​: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಉಪಚುನಾವಣೆ ಸಮರ ಜೋರಾಗಿದೆ. ಆಡಳಿತರೂಢ ಟಿಆರ್​ಎಸ್​ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪ್ರಚಾರ ನಡೆಯುತ್ತಿದೆ. ನಿನ್ನೆ ಚುನಾವಣಾ ಪ್ರಚಾರಕ್ಕಾಗಿ ಹೈದ್ರಾಬಾದ್​ಗೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್​ ಶಾ ಅವರು ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್​ನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಗೃಹ ಸಚಿವ ಅಮಿತ್ ಶಾ ಮತ್ತು ಜೂನಿಯರ್​ ಎನ್‌ಟಿಆರ್ ಶಂಶಾಬಾದ್‌ನ ನೊವಾಟೆಲ್ ಹೋಟೆಲ್‌ನಲ್ಲಿ ಭೇಟಿ ಮಾಡಿದರು. ಈ ವೇಳೆ ರಾಜಕೀಯದ ಕುರಿತಾಗಿ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ.

  • Had a good interaction with a very talented actor and the gem of our Telugu cinema, Jr NTR in Hyderabad.

    అత్యంత ప్రతిభావంతుడైన నటుడు మరియు మన తెలుగు సినిమా తారక రత్నం అయిన జూనియర్ ఎన్టీఆర్‌తో ఈ రోజు హైదరాబాద్‌లో కలిసి మాట్లాడటం చాలా ఆనందంగా అనిపించింది.@tarak9999 pic.twitter.com/FyXuXCM0bZ

    — Amit Shah (@AmitShah) August 21, 2022 " class="align-text-top noRightClick twitterSection" data=" ">

ಬಿಜಿಪಿ ಸೇರ್ತಾರ ತಾರಕ್?: ಇನ್ನು ಅಮಿತ್​ ಶಾ ಅವರು ಮಾತುಕತೆಯ ವೇಳೆ ಎನ್​ಟಿಆರ್​ನ್ನು ಪಕ್ಷಕ್ಕೆ ಆಹ್ವಾನಿಸಿದರು ಎಂದು ತಿಳಿದುಬಂದಿದೆ. ಈ ಹಿಂದಿನ ಚುನಾವಣೆಯಲ್ಲಿ ಖ್ಯಾತ ನಟ ತಾರಕ್​ ಟಿಡಿಪಿ ಪರ ಪ್ರಚಾರ ನಡೆಸಿದ್ದರು. ಬಳಿಕ ಅವರು ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಅಮಿತ್​ ಶಾ ಅವರು ಯುವ ನಟನನ್ನು ಬಿಜೆಪಿಗೆ ಕರೆತರುವ ಒಲವು ಹೊಂದಿದ್ದು, ನಿನ್ನೆಯ ಭೇಟಿಯಲ್ಲಿ ಇದು ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.

ಇಬ್ಬರು ಸಂಧಿಸಿದ ಫೋಟೋಗಳನ್ನು ಟ್ವೀಟ್​ ಮಾಡಿರುವ ಅಮಿತ್​ ಶಾ, "ತೆಲುಗಿನ ಅತ್ಯಂತ ಪ್ರತಿಭಾನ್ವಿತ ನಟ ಜೂನಿಯರ್​ ಎನ್​ಟಿಆರ್​ ಅವರನ್ನು ಹೈದರಾಬಾದ್​ನಲ್ಲಿ ಭೇಟಿ ಮಾಡಿರುವುದು ಸಂತಸ ತಂದಿದೆ" ಎಂದು ಬರೆದುಕೊಂಡಿದ್ದಾರೆ.

ಓದಿ: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ.. ಕೆಸಿಆರ್​ ವಿರುದ್ಧ ಅಮಿತ್​ ಶಾ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.