ETV Bharat / bharat

Divorce ಘೋಷಿಸಿದ ಅಮೀರ್​ಖಾನ್​-ಕಿರಣ್​ ರಾವ್​.. 15 ವರ್ಷದ ದಾಂಪತ್ಯಕ್ಕೆ ಫುಲ್​ ಸ್ಟಾಪ್​! - Actor Aamir Khan

ನಟ ಅಮೀರ್​ಖಾನ್​ ಮತ್ತು ಪತ್ನಿ ಕಿರಣ್​ ರಾವ್ ಪರಸ್ಪರ​ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಜಂಟಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಅಮೀರ್​ಖಾನ್​-ಕಿರಣ್​ರಾವ್
ಅಮೀರ್​ಖಾನ್​-ಕಿರಣ್​ರಾವ್
author img

By

Published : Jul 3, 2021, 12:06 PM IST

Updated : Jul 3, 2021, 2:10 PM IST

ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಅವರ ಪತ್ನಿ, ಚಿತ್ರ ನಿರ್ಮಾಪಕಿ ಕಿರಣ್​ ರಾವ್​ ವಿಚ್ಛೇದನ ಪಡೆಯುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ನಾವಿಬ್ಬರು ಪರಸ್ಪರ ಗಂಡ-ಹೆಂಡತಿಯಾಗಿರಲ್ಲ. ಆದರೆ, ಮಗನಿಗೆ ಪೋಷಕರಾಗಿ ಇರುತ್ತೇವೆ ಎಂದಿದ್ದಾರೆ.

  • Actor Aamir Khan and his wife Kiran Rao, in a joint statement announce divorce after 15 years of marriage.

    The couple said, "We would like to begin a new chapter in our lives - no longer as husband and wife, but as co-parents and family for each other." pic.twitter.com/gnQd2UPLTZ

    — ANI (@ANI) July 3, 2021 " class="align-text-top noRightClick twitterSection" data=" ">

ಈ 15 ವರ್ಷಗಳಲ್ಲಿ ಪರಸ್ಪರ ನೋವು-ನಲಿವುಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಕೂಡಿದೆ. ಆದರೆ, ನಾವೀಗ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ ಎಂದಿದ್ದಾರೆ.

ನಾವು ಕೆಲ ದಿನಗಳಿಂದ ಪ್ರತ್ಯೇಕವಾಗಿದ್ದೆವು. ಅದನ್ನು ಔಪಚಾರಿಕಗೊಳಿಸಲು ಈಗ ಮುಂದಾಗಿದ್ದೇವೆ. ನಮ್ಮ ಮಗ ಆಜಾದ್​ಗೆ ನಾವಿಬ್ಬರು ಪೋಷಕರಾಗಿದ್ದು, ಒಟ್ಟಿಗೆ ಪೋಷಿಸುತ್ತೇವೆ. ನಮ್ಮ ನಿರ್ಧಾರಕ್ಕೆ ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರಿಗೂ ಧನ್ಯವಾದಗಳು. ನಮ್ಮ ಈ ವಿಚ್ಛೇದನವನ್ನು ದಾಂಪತ್ಯದ ಅಂತ್ಯವಾಗಿ ನೋಡದೆ, ಹೊಸ ಪ್ರಯಾಣದ ಆರಂಭವಾಗಿ ನೋಡುತ್ತೀರಿ ಎಂದು ಭಾವಿಸಿದ್ದೇವೆ ಎಂದಿದ್ದಾರೆ.

Last Updated : Jul 3, 2021, 2:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.