ETV Bharat / bharat

ಈಗಲೇ ಕಾರ್ಯನಿರ್ವಹಿಸಿ, ರೋಗವನ್ನು ಕೊನೆಗೊಳಿಸಿ: 'ವಿಶ್ವ ಕುಷ್ಠರೋಗ ದಿನ 2023'ರ ಘೋಷ ವಾಕ್ಯ - ಅಂತರರಾಷ್ಟ್ರೀಯ ಕುಷ್ಠರೋಗ ದಿನ

ವಿಶ್ವ ಕುಷ್ಠರೋಗ ದಿನ 2023: ಕುಷ್ಠರೋಗ ಮತ್ತು ಅದರ ಚಿಕಿತ್ಸೆಯ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲು ಮತ್ತು ಕುಷ್ಠ ರೋಗಿಗಳ ಉನ್ನತಿಗಾಗಿ ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರದಂದು 'ಅಂತಾರಾಷ್ಟ್ರೀಯ ಕುಷ್ಠರೋಗ ದಿನ'ವನ್ನು ಆಚರಿಸಲಾಗುತ್ತದೆ.

Representative image
ಸಾಂದರ್ಭಿಕ ಚಿತ್ರ
author img

By

Published : Jan 29, 2023, 5:57 AM IST

ಹೈದರಾಬಾದ್: ನಮ್ಮ ದೇಶ ಕುಷ್ಠರೋಗದ ವಿಚಾರವಾಗಿ ಸಾಮಾಜಿಕ ಕಳಂಕವನ್ನು ಹೊಂದಿದೆ. ಇದು ವಾಸಿಯಾಗಬಹುದಾದ ಕಾಯಿಲೆಯಾಗಿದ್ದರೂ, ಅರಿವಿನ ಕೊರತೆಯಿಂದ ಜನರು ಇದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಇದರಿಂದ ಬಳಲುತ್ತಿರುವ ಜನರು ಸಾಮಾಜಿಕ ತಾರತಮ್ಯವನ್ನು ಎದುರಿಸಬೇಕಾಗಿದೆ. ಅಂತಹ ಸಂದರ್ಭಗಳಲ್ಲಿ, 'ವಿಶ್ವ ಕುಷ್ಠರೋಗ ದಿನ' ಈ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲು ನೆರವಾಗಿದೆ.

ಗಾಂಧೀಜಿ ಪುಣ್ಯತಿಥಿ ದಿನ ಆಚರಣೆ: ಜನವರಿ ತಿಂಗಳ ಕೊನೆಯ ಭಾನುವಾರದಂದು ಕುಷ್ಠರೋಗದಿಂದ ಬಳಲುತ್ತಿರುವ ಜನರ ಬಗ್ಗೆ ಕರುಣೆ ಹೊಂದಿದ್ದ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಷ್ಠರೋಗ ದಿನ ಆಚರಿಸಲಾಗುತ್ತದೆ. ಮಹಾತ್ಮ ಗಾಂಧಿಯವರು ಕುಷ್ಠರೋಗಿಗಳ ಅಭಿವೃದ್ಧಿಗೆ ಶ್ರಮಿಸಿದರು. ಅವರಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸಿದರು ಮತ್ತು ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಈ ಬಾರಿಯ ಘೋಷ ವಾಕ್ಯ?: ದೇಶದಲ್ಲಿ ಈ ರೋಗದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲು ಸರ್ಕಾರ ಮತ್ತು ಸರ್ಕಾರೇತರ ಮಟ್ಟದಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ ಈ ರೋಗದ ಬಗೆಗಿನ ಜನರ ಮನೋಭಾವದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2023ರ ಜನವರಿ 29 ರ ಭಾನುವಾರದಂದು "ಈಗಲೇ ಕಾರ್ಯನಿರ್ವಹಿಸಿ, ಕುಷ್ಠರೋಗವನ್ನು ಕೊನೆಗೊಳಿಸಿ" ಎಂಬ ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತದೆ. ಜನಸಾಮಾನ್ಯರಿಗೆ ಕೆಲವು ಉದ್ದೇಶಗಳನ್ನು ತಿಳಿಸಲು ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ಅವುಗಳು ಈ ಕೆಳಗಿನಂತಿವೆ..

ನಿರ್ಮೂಲನೆ ಸಾಧ್ಯ: ಪ್ರಸರಣವನ್ನು ನಿಲ್ಲಿಸಲು ಮತ್ತು ಈ ರೋಗವನ್ನು ಸೋಲಿಸಲು ನಾವು ಶಕ್ತಿ ಮತ್ತು ಸಾಧನಗಳನ್ನು ಹೊಂದಿದ್ದೇವೆ.

ಈಗಲೇ ಕಾರ್ಯನಿರ್ವಹಿಸಿ: ಕುಷ್ಠರೋಗವನ್ನು ಕೊನೆಗೊಳಿಸಲು ನಮಗೆ ಸಂಪನ್ಮೂಲಗಳು ಮತ್ತು ಬದ್ಧತೆಯ ಅಗತ್ಯವಿದೆ. ಕುಷ್ಠರೋಗ ನಿರ್ಮೂಲನೆಗೆ ಆದ್ಯತೆ ನೀಡಿ.

ಚಿಕಿತ್ಸೆ ಪಡೆಯಿರಿ: ಕುಷ್ಠರೋಗವನ್ನು ತಡೆಗಟ್ಟಬಹುದು ಮತ್ತು ಚಿಕಿತ್ಸೆ ನೀಡಬಹುದಾಗಿದೆ. ಕುಷ್ಠರೋಗದಿಂದ ಬಳಲುವುದು ಅನಗತ್ಯ.

ವಿಶ್ವ ಕುಷ್ಠರೋಗ ದಿನದ ಗುರಿ: 1954ರಲ್ಲಿ ಫ್ರೆಂಚ್ ಪತ್ರಕರ್ತ ಮತ್ತು ಕಾರ್ಯಕರ್ತ ರೌಲ್ ಫೋಲೆರೆಯು ಎರಡು ಗುರಿಗಳನ್ನು ತಿಳಿಸಿದರು. ಮೊದಲನೆಯದಾಗಿ, ಕುಷ್ಠರೋಗದಿಂದ ಬಾಧಿತರಾದ ಜನರ ಸಮಾನ ಚಿಕಿತ್ಸೆಗಾಗಿ ಪ್ರತಿಪಾದಿಸುವುದು ಮತ್ತು ಎರಡನೆಯದಾಗಿ, ರೋಗದ ಸುತ್ತಲಿನ ಹಳೆಯ ತಪ್ಪು ಕಲ್ಪನೆಗಳನ್ನು ಸರಿಪಡಿಸುವ ಮೂಲಕ ಕುಷ್ಠರೋಗದ ಬಗ್ಗೆ ಸಾರ್ವಜನಿಕರಿಗೆ ಮರು-ಶಿಕ್ಷಣ ನೀಡುವುದು.

ದೇಶದಲ್ಲಿ 94.75 ಪ್ರತಿಶತ ರೋಗಿಗಳು ಗುಣಮುಖ: ಭಾರತದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮಗಳ ಅಡಿಯಲ್ಲಿ ಈ ರೋಗದ ಬಗ್ಗೆ ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. 2005ರಲ್ಲಿ ಭಾರತವನ್ನು ಅಧಿಕೃತವಾಗಿ 'ಕುಷ್ಠರೋಗ ಮುಕ್ತ' ಎಂದು ಘೋಷಿಸಲಾಗಿದ್ದರೂ, ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕುಷ್ಠರೋಗ ಪ್ರಕರಣಗಳು ವರದಿಯಾಗಿವೆ.

ಆದರೆ ಜನಸಾಮಾನ್ಯರಿಗೆ ಚಿಕಿತ್ಸೆ ಲಭ್ಯವಾಗುವುದು ಮತ್ತು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸೌಲಭ್ಯಗಳು ಮತ್ತು ಪ್ರಯತ್ನಗಳಿಂದಾಗಿ ಅದರ ರೋಗಿಗಳ ಸಂಪೂರ್ಣ ಚೇತರಿಕೆಯ ಅಂಕಿಅಂಶಗಳಲ್ಲಿ ನಿರಂತರ ಏರಿಕೆಯಾಗುತ್ತಿರುವುದು ತೃಪ್ತಿಕರ ವಿಷಯ. 2020-2021ರ NLEP(ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ) ವರದಿಯ ಪ್ರಕಾರ, ಭಾರತದಲ್ಲಿ 94.75 ಪ್ರತಿಶತ ರೋಗಿಗಳು ಗುಣಮುಖರಾಗಿದ್ದಾರೆ.

ಜಾಗತಿಕ ಅಂಕಿ-ಅಂಶ: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2030ರ ವೇಳೆಗೆ 120 ದೇಶಗಳಲ್ಲಿ ಹೊಸ ಕುಷ್ಠರೋಗ ಪ್ರಕರಣಗಳನ್ನು ಶೂನ್ಯಕ್ಕೆ ತರುವ ಗುರಿ ಹೊಂದಿದೆ. ಕೋವಿಡ್​ 19 ಗಿಂತ ಮೊದಲು, ಜಾಗತಿಕವಾಗಿ ಪ್ರತಿ ವರ್ಷ ಸುಮಾರು 2,00,000 ಜನರು ಕುಷ್ಠರೋಗದಿಂದ ಬಳಲುತ್ತಿದ್ದರು ಎಂದು ವರದಿಯು ಹೇಳುತ್ತದೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ, ಕುಷ್ಠರೋಗದ ರೋಗಿಗಳು ತಮ್ಮ ಚಿಕಿತ್ಸೆಯಲ್ಲಿ ಅಡೆತಡೆಗಳನ್ನು ಎದುರಿಸಬೇಕಾಯಿತು. ವಿಶ್ವ ಆರೋಗ್ಯ ಸಂಸ್ಥೆ(WHO)ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಸುಮಾರು 2,08,000 ಜನರು ಕುಷ್ಠರೋಗದಿಂದ ಬಳಲುತ್ತಿದ್ದಾರೆ. ಮತ್ತು ಲಕ್ಷಾಂತರ ಜನರು ಕುಷ್ಠರೋಗ-ಸಂಬಂಧಿತ ಅಂಗವೈಕಲ್ಯಗಳೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿದ್ದಾರೆ.

ಏನಿದು ಕುಷ್ಠರೋಗ?: ದೆಹಲಿಯ ಚರ್ಮರೋಗ ತಜ್ಞ ಡಾ. ಸೂರಜ್ ಭಾರ್ತಿ ಅವರು, "ಕುಷ್ಠರೋಗವು ದೀರ್ಘಕಾಲದ ಸಾಂಕ್ರಾಮಿಕ ಕಾಯಿಲೆಯಾಗಿದೆ ಎಂದು ವಿವರಿಸುತ್ತಾರೆ. ಇದನ್ನು 'ಹ್ಯಾನ್ಸೆನ್ಸ್ ಡಿಸೀಸ್' ಅಥವಾ 'ಹ್ಯಾನ್ಸೆನಿಯಾಸಿಸ್' ಎಂದೂ ಕರೆಯುತ್ತಾರೆ. ಈ ರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಅಥವಾ ಮೈಕೋಬ್ಯಾಕ್ಟೀರಿಯಂ ಲೆಪ್ರೊಮಾಟೋಸಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಬಹಳ ನಿಧಾನವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದರ ಲಕ್ಷಣಗಳು ಕಾಣಿಸಿಕೊಳ್ಳಲು 20 ವರ್ಷಗಳವರೆಗೆ ತೆಗೆದುಕೊಳ್ಳಬಹುದು" ಎಂದು ವಿವರಿಸಿದ್ದಾರೆ.

ಕುಷ್ಠರೋಗವು ಹೆಚ್ಚು ಸಾಂಕ್ರಾಮಿಕ ರೋಗವಲ್ಲ ಮತ್ತು ಅದರ ನಿರ್ವಹಣೆ ಮತ್ತು ರೋಗನಿರ್ಣಯವು ಸಕಾಲಿಕ ಚಿಕಿತ್ಸೆಯಿಂದ ಸಂಪೂರ್ಣವಾಗಿ ಸಾಧ್ಯ ಎಂದು ಅವರು ವಿವರಿಸುತ್ತಾರೆ. ಸಕಾಲದಲ್ಲಿ ಕುಷ್ಠರೋಗ ಪತ್ತೆಯಾದರೆ 6 ರಿಂದ 12 ತಿಂಗಳೊಳಗೆ ಬಹುತೇಕ ಪ್ರಕರಣಗಳನ್ನು ಗುಣಪಡಿಸಬಹುದು ಎಂದು ವಿವರಿಸುತ್ತಾರೆ. ಆದರೆ ಈ ರೋಗದ ಪತ್ತೆ ಅಥವಾ ಚಿಕಿತ್ಸೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯವು ರೋಗಿಗಳಲ್ಲಿ ಗಂಭೀರವಾದ ದೀರ್ಘಕಾಲದ ನರ ಹಾನಿಗೆ ಕಾರಣವಾಗಬಹುದು ಎಂದು ಡಾ. ಸೂರಜ್ ಭಾರ್ತಿ ಹೇಳಿದ್ದಾರೆ.

ರೋಗಲಕ್ಷಣಗಳು: ಚರ್ಮದ ಮೇಲೆ ತಿಳಿ ಬಣ್ಣದ ತೇಪೆಗಳು. ಕೆಲವೊಮ್ಮೆ ರೋಗ ಪೀಡಿತ ಚರ್ಮವು ನಿಶ್ಚೇಷ್ಟಿತವಾಗಬಹುದು. ರೋಗ ಭಾದಿತ ಪ್ರದೇಶದಲ್ಲಿ ಚರ್ಮದ ದಪ್ಪವಾಗುವುದು ಅಥವಾ ಆ ಪ್ರದೇಶದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಸ್ನಾಯು ದೌರ್ಬಲ್ಯ ಅಥವಾ ಪಾರ್ಶ್ವವಾಯು, ವಿಶೇಷವಾಗಿ ಕೈ ಮತ್ತು ಕಾಲುಗಳಲ್ಲಿ. ಕಣ್ಣಿನ ಸಮಸ್ಯೆಗಳು ಅಥವಾ ಕೆಲವೊಮ್ಮೆ ಕುರುಡುತನ, ಇತ್ಯಾದಿ..

ಸಾರ್ವಜನಿಕರಲ್ಲಿ ಜಾಗೃತಿ: ವಿಶ್ವ ಕುಷ್ಠರೋಗ ದಿನದಂದು, ಸರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದರೊಂದಿಗೆ, ಅನೇಕ ಸಂಸ್ಥೆಗಳು ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆ, ನಿರ್ವಹಣೆ, ಸಂಶೋಧನೆ ಮತ್ತು ಉನ್ನತಿಗೆ ಹಣವನ್ನು ಸಂಗ್ರಹಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದಲ್ಲದೆ, ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ರೋಗದಿಂದ ಬಳಲುತ್ತಿರುವವರಿಗೆ ಪುನರ್ವಸತಿ ಕಲ್ಪಿಸಲು ರ‍್ಯಾಲಿ ಮತ್ತು ಕಾರ್ಯಾಗಾರಗಳನ್ನು ಸಹ ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ಕುಷ್ಠರೋಗ ದಿನ : ನೀವು ಅರಿತುಕೊಳ್ಳಬೇಕಾದ ಮೂಲಭೂತ ಅಂಶಗಳಿಷ್ಟು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.