ETV Bharat / bharat

ಕೇವಲ 950 ರೂಪಾಯಿ ಸಾಲ ಮರುಪಾವತಿಸದ್ದಕ್ಕೆ ಯುವಕನ ಮೇಲೆ ಆ್ಯಸಿಡ್​ ದಾಳಿ

ಬಿಹಾರದ ಸುಪೌಲ್​ನಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಯುವಕ ಸಾಲ ಮಾಡಿ ಗಾಂಜಾ ಮತ್ತು ಮದ್ಯವನ್ನು ಸೇವಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇದಕ್ಕೆ ಹಣ ನೀಡದ್ದಕ್ಕೆ ದುಷ್ಕರ್ಮಿಗಳು ಆತನ ಮೇಲೆ ಆ್ಯಸಿಡ್ ಎರಚಿದ್ದಾರೆ.

author img

By

Published : Nov 2, 2022, 7:31 PM IST

ಯುವಕನ ಮೇಲೆ ಆ್ಯಸಿಡ್​ ದಾಳಿ
ಯುವಕನ ಮೇಲೆ ಆ್ಯಸಿಡ್​ ದಾಳಿ

ಸುಪೌಲ್ (ಬಿಹಾರ): ಸಾಲದ ಹಣವನ್ನು ವ್ಯಕ್ತಿಯೊಬ್ಬರು ಮರುಪಾವತಿಸಿಲ್ಲ ಎಂಬ ಕಾರಣಕ್ಕೆ, ಕೆಲ ಯುವಕರು ಆತನ ಮೇಲೆ ಆ್ಯಸಿಡ್​​ ದಾಳಿ ನಡೆಸಿರುವ ಘಟನೆ ಬಿಹಾರದ ಸುಪೌಲ್​ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲೆಯ ಸದರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಲ ಮರುಪಾವತಿಸದಕ್ಕೆ ಯುವಕನ ಮೇಲೆ ಆ್ಯಸಿಡ್​ ದಾಳಿ

ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲೆಯ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳು ಅರ್ಜುನ್ ಮುಖಿ ಮೇಲೆ ಅದೇ ಗ್ರಾಮದ ಗಣೇಶ ಸ್ವರ್ಣಕರ್ ಹಾಗೂ ಅವರ ಪುತ್ರಿ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 950 ರೂಪಾಯಿ ಸಾಲವನ್ನು ಸಂತ್ರಸ್ತ ಯುವಕ ಪಡೆದಿದ್ದ. ಈ ಹಣವನ್ನು ಕೊಡದಿದ್ದಕ್ಕೆ ಆ್ಯಸಿಡ್​ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.

ಗಾಯಾಳು ಅರ್ಜುನ್ ಮುಖಿಯವರನ್ನು ಕುಟುಂಬಸ್ಥರು ಮೊದಲು ಚಿಕಿತ್ಸೆಗಾಗಿ ಕಿಶನ್ ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಪ್ರಥಮ ಚಿಕಿತ್ಸೆಯ ನಂತರ, ಅವರನ್ನು ಸುಪಾಲ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಕಿಶನ್‌ಪುರ ಠಾಣೆಯ ಪೊಲೀಸರು ಸದರ್‌ ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತ ಯುವಕನ ಹೇಳಿಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಬಾಲಕಿ ಜಾರ್ಖಂಡ್​ನಿಂದ ದೆಹಲಿಗೆ ಏರ್​ಲಿಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.