ರಾಜಣ್ಣ ಸಿರಿಸಿಲ್ಲ (ತೆಲಂಗಾಣ) : ಬೀದಿ ಬದಿ ವ್ಯಾಪಾರಿಗಳು ಚಿಕನ್ ಸೆಂಟರ್ ಮಾಲೀಕ ಮತ್ತು ಇತರ ಒಂಬತ್ತು ಜನರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಪುರಸಭೆ ವ್ಯಾಪ್ತಿಯ ತಿಪ್ಪಾಪುರ ಗ್ರಾಮದಲ್ಲಿ ಈ ಘಟನೆ ಜರುಗಿದೆ.
ತಿಪ್ಪಾಪುರ ಗ್ರಾಮದಲ್ಲಿ ವಾಸವಾಗಿರುವ ಹರೀಶ್ ಚಿಕನ್ ಸೆಂಟರ್ ಮಾಲೀಕನ ಬಳಿ ಸಪ್ತಗಿರಿ ಕಾಲೋನಿಯ ಕೆಲವು ಬೀದಿ ವ್ಯಾಪಾರಿಗಳು ಬಂದು ಕೋಳಿ ಮಾಂಸ ಖರೀದಿಸಿ ಹೋಗಿದ್ದಾರೆ. ನಂತರ ಅದನ್ನು ತಿಂದು ಬಂದು ಕೋಳಿ ಮಾಂಸ ಗುಣಮಟ್ಟದಿಂದ ಕೂಡಿಲ್ಲ ಎಂದು ದೂರಿದ್ದಾರೆ. ಆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಇದನ್ನೂ ಓದಿ: ಎಲ್ಲಿವರೆಗೆ ಒಲೆ ಉರಿಯುತ್ತಿರುತ್ತದೆಯೋ ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಿರುತ್ತೆ; ಸಿಎಂ
ಇದರಿಂದ ಆಕ್ರೋಶಗೊಂಡ ಬೀದಿ ಬದಿ ವ್ಯಾಪಾರಿಗಳು, ಕೋಳಿ ಅಂಗಡಿ ಮಾಲೀಕ ಹರೀಶ್ ಹಾಗೂ ಇತರರ ಮೇಲೆ ಆ್ಯಸಿಡ್ ಎರಚಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕರೀಂನಗರ ಆಸ್ಪತ್ರೆಗೆ ರವಾನಿಸಲಾಗಿದೆ.
ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡೂ ಕಡೆಯವರ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವೇಮುಲವಾಡ ಪಟ್ಟಣ ಸಿಐ ವೆಂಕಟೇಶ್ ಮಾಹಿತಿ ನೀಡಿದ್ದಾರೆ.