ETV Bharat / bharat

5 ಕೆಜಿ ಮಾವಿನಹಣ್ಣಿಗಾಗಿ ಬಿಹಾರದಲ್ಲಿ ವ್ಯಕ್ತಿಯ ಮೇಲೆ ಆ್ಯಸಿಡ್​ ದಾಳಿ!

ಸಹೋದರರು ಆಸ್ತಿಗಾಗಿ ಕಿತ್ತಾಡುವುದನ್ನು ನೋಡಿದ್ದೇವೆ. ಆದರೆ, ಬಿಹಾರದ ಗೋಪಾಲ್​ಗಂಜ್​ನಲ್ಲಿ ಕೇವಲ 5 ಕೆಜಿ ಮಾವಿನ ಹಣ್ಣಿಗಾಗಿ ಜಗಳವಾಡಿ ಆ್ಯಸಿಡ್​ ದಾಳಿ ನಡೆಸಲಾಗಿದೆ.

5 ಕೆಜಿ ಮಾವಿನಹಣ್ಣಿಗಾಗಿ ಬಿಹಾರದಲ್ಲಿ ವ್ಯಕ್ತಿಯ ಮೇಲೆ ಆ್ಯಸಿಡ್​ ದಾಳಿ!
5 ಕೆಜಿ ಮಾವಿನಹಣ್ಣಿಗಾಗಿ ಬಿಹಾರದಲ್ಲಿ ವ್ಯಕ್ತಿಯ ಮೇಲೆ ಆ್ಯಸಿಡ್​ ದಾಳಿ!
author img

By

Published : Jul 2, 2022, 9:11 AM IST

ಗೋಪಾಲಗಂಜ್(ಬಿಹಾರ): 5 ಕೆಜಿ ಮಾವಿನಹಣ್ಣಿಗಾಗಿ ಸಹೋದರರಿಬ್ಬರ ಮಧ್ಯೆ ನಡೆದ ಜಗಳದಲ್ಲಿ ಆ್ಯಸಿಡ್​ ದಾಳಿ ನಡೆಸಲಾಗಿದೆ. ಇದರಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಪಾಲ್​ಗಂಜ್​ನ ಹಮೀದ್‌ಪುರ ನಿವಾಸಿಗಳಾದ ದ್ವಿಜೇಂದ್ರ ತಿವಾರಿ ಮತ್ತು ರಾಜೇಶ್ ತಿವಾರಿ ನಡುವೆ ಮಾವಿನ ಹಣ್ಣಿಗಾಗಿ ಕಿತ್ತಾಟ ನಡೆದಿದೆ. ಈ ವೇಳೆ ರಾಜೇಶ್​ ತಿವಾರಿ ದ್ವಿಜೇಂದ್ರರ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾನೆ.

ಕೆಲ ದಿನಗಳ ಹಿಂದೆ ಮಾವಿನ ತೋಟದಲ್ಲಿ ಹಣ್ಣುಗಳನ್ನು ಇಳಿಸಲಾಗಿತ್ತು. ಈ ವೇಳೆ, ಇಬ್ಬರಿಗೂ ಸಂಬಂಧಿಸಿದ ಮರಗಳಲ್ಲಿ ಹಣ್ಣುಗಳನ್ನು ಕೀಳಲಾಗಿದೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಅದೂ ಕೇವಲ 5 ಕೆಜಿ ಮಾವಿನ ಹಣ್ಣಿಗಾಗಿ ಕಿತ್ತಾಡಿದ್ದಾರೆ. ಈ ವೇಳೆ ನಡೆದ ವಾಗ್ವಾದದಲ್ಲಿ ರಾಜೇಶ್​ ತಿವಾರಿ ದ್ವಿಜೇಂದ್ರನ ಮೇಲೆ ಆ್ಯಸಿಡ್​ ಎರಚಿದ್ದಾರೆ.

ತೀವ್ರ ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದ ಸಂತ್ರಸ್ತನನ್ನು ಕುಟುಂಬಸ್ಥರು ಗೋಪಾಲ್​ಗಂಜ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್​ ದಾಳಿಯಿಂದಾಗಿ ಕೂದಲು ಮತ್ತು ಮುಖ, ಅರ್ಧ ದೇಹ ಸುಟ್ಟು ಹೋಗಿದೆ.

ಓದಿ: ಪ್ರವಾದಿ ವಿರುದ್ಧ ಅವಹೇಳನ ಆರೋಪ: ಪಾಕಿಸ್ತಾನದಲ್ಲಿ ಸ್ಯಾಮ್​ಸಂಗ್​ ಕಚೇರಿ ಧ್ವಂಸ, 20 ಸಿಬ್ಬಂದಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.