ಮುಂಬೈ: ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ ಸಂಬಂಧ ಅಧಿಕಾರಿಗಳ ಮುಂದೆ ಆರೋಪಿ ಸಚಿನ್ ವಾಜೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ತಾನೇ ಬಾಂಬ್ ಇಟ್ಟು ತಾನೇ ಪ್ರಕರಣ ಭೇದಿಸುವ ಸಂಚು ರೂಪಿಸಿದ್ದೆ. ಈ ಮುಖಾಂತರ ಇದರಲ್ಲಿ ಯಶಸ್ವಿಯಾಗುವ ಮೂಲಕ ಸೂಪರ್ ಕಾಪ್ ಆಗಲು ಬಯಸಿದ್ದೆ ಎಂದು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ತನಿಖಾಧಿಕಾರಿಗಳ ಮುಂದೆ ಆರೋಪಿ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಂಬಂಧ ಎನ್ಐಎ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಸಚಿನ್ ವಾಜೆ ಅವರ ಮತ್ತೊಂದು ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, ಪ್ರಕರಣಕ್ಕೆ ಹೊರ ತಿರುವು ಸಿಗುತ್ತಿದೆ.
ಸಿಸಿಟಿವಿಯಲ್ಲಿ, ಸಚಿನ್ ವಾಜೆ ಪಂಚತಾರಾ ಹೋಟೆಲ್‌ಗೆ ಒಳಗೆ ಹೋಗಿದ್ದಾರೆ. ಈ ವೇಳೆ ಅವರ ಬಳಿ ಒಂದು ಚೀಲ ಇದ್ದು, ಅದು ಸ್ಕ್ಯಾನ್ ಆಗಿದೆ. ಅದರಲ್ಲಿ ಹಣ ಇದ್ದಿರಬಹುದಾದ ಅನುಮಾನವನ್ನು ತಿನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ತಪ್ಪೊಪ್ಪಿಕೊಂಡಿದ್ದ ವಾಜೆ:
ಸ್ಫೋಟಕ ಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸ್ಕಾರ್ಪಿಯೊ ಕಾರಿನಲ್ಲಿ ಬೆದರಿಕೆ ಪತ್ರ ಮತ್ತು ಸ್ಫೋಟಕ ವಸ್ತುಗಳನ್ನಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧದ ಹೆಚ್ಚಿನ ಓದಿಗೆ ಈ ಲಿಂಕ್ ಕ್ಲಿಕ್ ಮಾಡಿ: ಸ್ಕಾರ್ಪಿಯೊ ಕಾರಿನಲ್ಲಿ ಬೆದರಿಕೆ ಪತ್ರ, ಸ್ಫೋಟಕ ವಸ್ತುಗಳು ಇಟ್ಟಿರುವುದರ ಬಗ್ಗೆ ಸಚಿನ್ ವಾಜೆ ತಪ್ಪೊಪ್ಪಿಗೆ: ಎನ್ಐಎ ಮೂಲ