ರುದ್ರಪುರ(ಉತ್ತರಾಖಂಡ): ಕಟ್ಟಿಕೊಂಡ ಹೆಂಡತಿಯನ್ನು ಕೊಲೆಗೈದಿರುವ ಗಂಡ ತದನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಘಟನೆ ಉತ್ತರಾಖಂಡ್ನ ರುದ್ರಪುರದಲ್ಲಿ ನಡೆದಿದೆ.
ಹೆಂಡತಿಯ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ವ್ಯಕ್ತಿ ಕೊತ್ವಾಲಿ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾನೆ. ಇದರಿಂದ ತಬ್ಬಿಬ್ಬಾದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯ ಮನೆಗೆ ತೆರಳಿ ಹಾಸಿಗೆ ಮೇಲೆ ಬಿದ್ದಿದ್ದ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಫರಾ (26) ಜೊತೆ ಮಶ್ರೂಫ್ ಮದುವೆ ಮಾಡಿಕೊಂಡಿದ್ದ. ಆದರೆ, ವರದಕ್ಷಿಣೆಗಾಗಿ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದನಂತೆ. ಇದೇ ವಿಚಾರವಾಗಿ ಅನೇಕ ಸಲ ಜಗಳ ಸಹ ನಡೆದಿದೆ. ಬುಧವಾರ ರಾತ್ರಿ ಊಟ ಮಾಡಿ ಇಬ್ಬರೂ ಕೊಠಡಿಯಲ್ಲಿ ಮಲಗಿದ್ದರು. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದರ ಬೆನ್ನಲ್ಲೇ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಇದನ್ನೂ ಓದಿ: ರೈತರು ವರ್ಷಪೂರ್ತಿ ಪ್ರತಿಭಟನೆಗೆ ಕುಳಿತಿದ್ರು, ಪ್ರಧಾನಿಗೆ 15 ನಿಮಿಷ ಕಾಯಲು ಆಗಲಿಲ್ಲ: ಸಿಧು