ETV Bharat / bharat

ಬೆಳಗಿನ ಉಪಹಾರ ನೀಡಲಿಲ್ಲ ಎಂದು ಸೊಸೆಯನ್ನೇ ಗುಂಡಿಕ್ಕಿ ಕೊಂದ ಮಾವ! - ಸೊಸೆಯನ್ನೇ ಗುಂಡಿಕ್ಕಿ ಕೊಂದ ಮಾವ

ಉಪಹಾರ ನೀಡಲಿಲ್ಲ ಎಂದು ಸೊಸೆ ಮೇಲೆ ಆಕ್ರೋಶಗೊಂಡಿರುವ ಮಾವ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

Daughter-in-law shot dead by septuagenarian

author img

By

Published : Apr 15, 2022, 6:39 PM IST

ಥಾಣೆ(ಮಹಾರಾಷ್ಟ್ರ): ಬೆಳಗಿನ ಜಾವ ಉಪಹಾರ ನೀಡಲಿಲ್ಲ ಎಂಬ ಕಾರಣಕ್ಕಾಗಿ 76 ವರ್ಷದ ವ್ಯಕ್ತಿಯೋರ್ವ ತನ್ನ ಸೊಸೆಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆಯ ರಾಬೋಡಿ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೀಮಾ ಪಾಟೀಲ್​ ಎಂದು ಗುರುತಿಸಲಾಗಿದೆ.

ನಿನ್ನೆ ಬೆಳಗ್ಗೆ 11:30ರ ವೇಳೆ ಈ ಘಟನೆ ನಡೆದಿದೆ. ಮಾವನಿಗೆ ಟೀ ನೀಡಿದ್ದ ಸೀಮಾ ತದನಂತರ ಉಪಹಾರ ನೀಡಲಿಲ್ಲ ಎಂದು ಕುಪಿತಗೊಂಡ ಕಾಶಿನಾಥ್(76) ಈ ರೀತಿಯಾಗಿ ನಡೆದುಕೊಂಡಿದ್ದಾನೆ. ಬೆಳಗಿನ ಹೊತ್ತಲ್ಲಿ ಸೊಸೆ ಮತ್ತು ಮಾವನ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿತ್ತೆಂದು ತಿಳಿದು ಬಂದಿದೆ.

ಇದನ್ನೂ ಓದಿ: 1 ಫೋಟೋ 5 ತಲೆಮಾರು: 'ಇಂಥ ಕುಟುಂಬವನ್ನು ಭಾರತದಲ್ಲೂ ನೋಡುವಾಸೆ'- ಆನಂದ್ ಮಹಿಂದ್ರಾ

ಮಹಿಳೆಯ ಮೇಲೆ ಗುಂಡು ಹಾರಿಸುತ್ತಿದ್ದಂತೆ ಆಕೆ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ತಡರಾತ್ರಿ ಮೃತಪಟ್ಟಿದ್ದಾಳೆ. ಘಟನೆಯ ಬೆನ್ನಲ್ಲೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ರಾಬೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.