ETV Bharat / bharat

ಅಂಡಮಾನ್​ ನಿಕೋಬಾರ್​ ದ್ವೀಪಗಳ ಬಳಿ ವಾಯುಭಾರ ಕುಸಿತ: ಚಂಡಮಾರುತ ಅಪ್ಪಳಿಸುವ ಸಾಧ್ಯತೆ - air pressure

ಅಂಡಮಾನ್​ ಮತ್ತು ನಿಕೋಬಾರ್​​ ದ್ವೀಪಗಳ ಸಮೀಪ ವಾಯುಭಾರ ಕುಸಿತವಾಗಿದ್ದು, ಆಗ್ನೇಯ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

low pressure drop
ವಾಯುಭಾರ ಕುಸಿತ
author img

By PTI

Published : Nov 28, 2023, 11:45 AM IST

ಭುವನೇಶ್ವರ(ಒಡಿಶಾ): ಅಂಡಮಾನ್​ ಮತ್ತು ನಿಕೋಬಾರ್​​ ದ್ವೀಪ ಸಮೂಹಗಳ ಬಳಿ ವಾಯುಭಾರ ಕುಸಿತವಾಗಿರುವ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.

  • A low pressure area formed over south Andaman Sea & adj Malacca Strait at 0830 IST of today. Likely to move WNWwards and intensify into a Depression over SE BoB around 29th Nov. Thereafter, to move NWwards and intensify further into a CS over SE BoB during subsequent 48 hrs. pic.twitter.com/tvNhrjMZmf

    — India Meteorological Department (@Indiametdept) November 27, 2023 " class="align-text-top noRightClick twitterSection" data=" ">

ಸೋಮವಾರ ಬೆಳಿಗ್ಗೆ 8.30 ರವರೆಗೆ ದೊರೆತ ದತ್ತಾಂಶದ ಆಧಾರದ ಮೇಲೆ ಹವಾಮಾನ ಇಲಾಖೆಯು ಪ್ರಕಟಣೆಯ ಮೂಲಕ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಮಲಕ್ಕಾ ಜಲಸಂಧಿ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದೆ. ಇದರಿಂದಾಗಿ ನವೆಂಬರ್​ 29 (ನಾಳೆ) ವೇಳೆಗೆ ಮಾರುತವು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಲಿದೆ. ಬಳಿಕ ಇದು ವಾಯುವ್ಯಕ್ಕೆ ಚಲಿಸುವ ಸಾಧ್ಯತೆ ಇದೆ. ಹಾಗೆಯೇ ನಂತರದ 48 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದೆ.

ಇದನ್ನೂ ಓದಿ: ಲಾಹೋರ್‌ ಜಗತ್ತಿನಲ್ಲೇ ಅತಿ ಹೆಚ್ಚು ಮಲಿನ ನಗರ​​; ಇನ್ನೂ ಸುಧಾರಿಸದ ದೆಹಲಿ ವಾಯು ಗುಣಮಟ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.