ಬಾಢ್ಮೇರ್(ರಾಜಸ್ಥಾನ): ಎಸ್‌ಯುವಿ ಕಾರು ಮತ್ತು ಟ್ರಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದರುವ ಘಟನೆ ಜಿಲ್ಲೆಯ ಗುಡಮಲಾನಿ ಮೆಗಾ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
![Accident In barmer on Gudamalani Megaway head on collision 8 members of a family died ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ರಾಜಸ್ಥಾನದಲ್ಲಿ ಒಂದೇ ಕುಟುಂಬದವರು ರಸ್ತೆ ಅಪಘಾತದಲ್ಲಿ ಸಾವು ಬಾರ್ಮರ್ದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು ನೋವು ರಾಜಸ್ಥಾನ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/rj-bmr-01-accdant-avb-rjc10210_07062022080522_0706f_1654569322_966.jpg)
ಶೋಕಕ್ಕೆ ತಿರುಗಿದ ಸಂತಸ: ಮಾಹಿತಿ ಪ್ರಕಾರ ಜಲೋರ್ ಜಿಲ್ಲೆಯ ಸಂಚೋರ್‌ನಲ್ಲಿ ನೆಲೆಸಿರುವ ಒಂದೇ ಕುಟುಂಬದವರು ನಿನ್ನೆ ರಾತ್ರಿ ಎಸ್‌ಯುವಿ ಕಾರಿನಲ್ಲಿ ಗುಡಮಲಾನಿಯಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಈ ವೇಳೆ ಮಾರ್ಗಮಧ್ಯೆ ಎಸ್‌ಯುವಿ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಇದರಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಗುಡಮಲಾನಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸಂಚೋರ್‌ಗೆ ರವಾನಿಸಲಾಗಿದೆ.
![Accident In barmer on Gudamalani Megaway head on collision 8 members of a family died ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ರಾಜಸ್ಥಾನದಲ್ಲಿ ಒಂದೇ ಕುಟುಂಬದವರು ರಸ್ತೆ ಅಪಘಾತದಲ್ಲಿ ಸಾವು ಬಾರ್ಮರ್ದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು ನೋವು ರಾಜಸ್ಥಾನ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/rj-bmr-01-accdant-avb-rjc10210_07062022080522_0706f_1654569322_558.jpg)
ಓದಿ: ನಿಯಂತ್ರಣ ತಪ್ಪಿದ ಕಾರು : ಮೂರು ಬೈಕ್ಗಳಿಗೆ ಡಿಕ್ಕಿ, ಓರ್ವ ಸಾವು
ಘಟನೆ ಕುರಿತು ಮಾಹಿತಿ ಪಡೆದ ಗುಡಮಲಾನಿ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
![Accident In barmer on Gudamalani Megaway head on collision 8 members of a family died ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ರಾಜಸ್ಥಾನದಲ್ಲಿ ಒಂದೇ ಕುಟುಂಬದವರು ರಸ್ತೆ ಅಪಘಾತದಲ್ಲಿ ಸಾವು ಬಾರ್ಮರ್ದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು ನೋವು ರಾಜಸ್ಥಾನ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/rj-bmr-01-accdant-avb-rjc10210_07062022080522_0706f_1654569322_936.jpg)