ETV Bharat / bharat

ಮೈಸೂರು ಮೂಲದ ಯುವತಿಯನ್ನು ಪತಿಯ ಜೊತೆ ಒಗ್ಗೂಡಿಸಿದ ಗುಜರಾತ್​ನ ಅಭಯಂ ಸಂಸ್ಥೆ - ಗುಜರಾತ್ ಸರ್ಕಾರದ '181 ಅಭಯಂ' ತಂಡ ಆ

ಗುಜರಾತ್​ನ ಪಾಲನ್ಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಮೈಸೂರು ಮೂಲದ ವಿಶೇಷಚೇತನ ಮಹಿಳೆಯನ್ನು '181 ಅಭಯಂ' ತಂಡ ಆಕೆಯ ಪತಿಯ ಬಳಿಗೆ ಸೇರಿಸಿದೆ.

ABHAYAM REUNITED A DEAF AND DUMB WOMAN WITH HER HUSBAND IN  gujrat
ಮೈಸೂರು ಮೂಲದ ಯುವತಿಯನ್ನು ಪತಿಯ ಜೊತೆ ಒಗ್ಗೂಡಿಸಿದ ಗುಜರಾತ್​ನ ಅಭಯಂ ಸಂಸ್ಥೆ
author img

By

Published : Apr 14, 2022, 9:07 AM IST

ಪಾಲನ್ಪುರ(ಗುಜರಾತ್): ಕರ್ನಾಟಕ ಮೂಲದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಗುಜರಾತ್ ಸರ್ಕಾರದ '181 ಅಭಯಂ' ತಂಡ ಆಕೆಯ ಪತಿಯ ಬಳಿಗೆ ಸೇರಿಸಿರುವ ಘಟನೆ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಪಾಲನ್ಪುರ ರೈಲ್ವೆ ನಿಲ್ದಾಣದಲ್ಲಿ ವಿಶೇಷ ಚೇತನ ಮಹಿಳೆ ಪಾಲನ್ಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ಕುರಿತು ದೂರವಾಣಿ ಕರೆ ಸ್ವೀಕರಿಸಿದ '181 ಅಭಯಂ' ಸ್ಥಳಕ್ಕೆ ಧಾವಿಸಿದೆ. ನಂತರ ಯುವತಿಯ ಜೊತೆ ಅಭಯಂ ತಂಡದ ಸದಸ್ಯರು ಮಾತುಕತೆ ನಡೆಸಲು ಮುಂದಾಗಿದ್ದು, ಈ ವೇಳೆಗೆ ಆಕೆಗೆ ಮಾತು ಬರುವುದಿಲ್ಲ ಮತ್ತು ಕಿವಿ ಕೇಳಿಸುವುದಿಲ್ಲ ಎಂದು ಗೊತ್ತಾಗಿದೆ.

ಅಭಯಂ ಕೌನ್ಸಿಲರ್ ಜಿನಾಲ್​ಬೆನ್ ಪರ್ಮಾರ್ ಮತ್ತು ಮಹಿಳಾ ಪೊಲೀಸರು ಆಕೆಯನ್ನು ಅಭಯಂ ಪ್ರಧಾನ ಕಚೇರಿಗೆ ಕರೆದೊಯ್ದಿದ್ದಾರೆ. ನಂತರ ಮತ್ತಷ್ಟು ವಿವರ ಕೇಳಿದಾಗ ಯುವತಿ ಕನ್ನಡದಲ್ಲಿ ವಿಳಾಸದ ಜೊತೆಗೆ ಕೆಲವೊಂದು ಮಾಹಿತಿಯನ್ನು ಬರೆದಿದ್ದಾಳೆ. ಆಕೆ ಮೈಸೂರಿನವರಾಗಿದ್ದು, ಇದರ ಜೊತೆಗೆ ತಾನು ಫೇಸ್​ಬುಕ್ ಮೂಲಕ ಪರಿಚಯವಾದ ಓರ್ವ ಯುವಕನನ್ನು ವಿವಾಹವಾಗಿರುವುದಾಗಿ ತಿಳಿದುಬಂದಿದೆ. ಫೇಸ್​ಬುಕ್​ನಲ್ಲಿ ಪರಿಚಯವಾದ ನಂತರ ಆಕೆಯ ರೀತಿಯಲ್ಲೇ ವಿಶೇಷಚೇತನನಾಗಿದ್ದ ಯುವನಕೋರ್ವ ಮೈಸೂರಿಗೆ ಬಂದು, ಆಕೆಯನ್ನು ಬನಸ್ಕಾಂತಕ್ಕೆ ಕರೆದುಕೊಂಡು ಹೋಗಿ, ಪಾಲನ್ಪುರ ಪಾತಾಳೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದನು.

ನಂತರ ಆಕೆಯನ್ನು ಯುವಕ ತನ್ನ ಮನೆಗೆ ಕರೆದುಕೊಂಡು ಹೋಗಿದ್ದು, ಕೆಲವು ದಿನಗಳ ನಂತರ ಕ್ಷುಲ್ಲಕ ಕಾರಣಗಳಿಂದಾಗಿ ಜಗಳವಾಗಿದೆ. ಈ ವೇಳೆ ಮುನಿಸಿಕೊಂಡ ಆಕೆ ಬನಸ್ಕಾಂತ ರೈಲು ನಿಲ್ದಾಣಕ್ಕೆ ಬಂದಿದ್ದಾಳೆ. ಈ ವಿಷಯ ತಿಳಿದ ಅಭಯಂ ಸಂಸ್ಥೆಯ ಸಿಬ್ಬಂದಿ ಯುವಕನನ್ನು ಕಚೇರಿಗೆ ಕರೆಸಿಕೊಂಡು ಕೌನ್ಸೆಲಿಂಗ್ ಮಾಡಿದ್ದು, ದಂಪತಿಯನ್ನು ಒಗ್ಗೂಡಿಸಿದ್ದಾರೆ.

ಇದನ್ನೂ ಓದಿ: ಪತ್ನಿಯ ಶೀಲದ ಮೇಲೆ ಶಂಕೆ; 4 ವರ್ಷ ಗೃಹಬಂಧನದಲ್ಲಿಟ್ಟ ಗಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.