ಲಖನೌ (ಉತ್ತರ ಪ್ರದೇಶ): 2022 ರ ಉತ್ತರಪ್ರದೇಶ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) 100 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿ ಬಳಿಕ ಮಾತನಾಡಿದ ಆಪ್ ಪಕ್ಷದ ಶಾಸಕ ಸಂಜಯ್ ಸಿಂಗ್, ಇದೇ ಪಟ್ಟಿ ಅಂತಿಮವಲ್ಲ. ಯಾವುದೇ ಅಭ್ಯರ್ಥಿ ಪಕ್ಷದ ಮಾನದಂಡಗಳನ್ನು ಅನುಸರಿಸದಿದ್ದರೆ ಅವರ ಟಿಕೆಟ್ ರದ್ದುಗೊಳಿಸುತ್ತೇವೆ ಎಂದರು.
ಅಭ್ಯರ್ಥಿಗಳು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದರೆ ಪಕ್ಷವು ಪ್ರಸ್ತಾವಿತ ಪಟ್ಟಿಯೊಂದಿಗೆ ಮುಂದುವರಿಯುತ್ತದೆ. ರಾಜ್ಯದಲ್ಲಿ 403 ವಿಧಾನಸಭಾ ಸ್ಥಾನಗಳಲ್ಲಿಯೂ ಪಕ್ಷ ಸ್ಪರ್ಧಿಸಲಿದೆ ಎಂದು ಸಿಂಗ್ ಹೇಳಿದರು.
ಜಾತಿ ಸಮೀಕರಣದ ಕುರಿತು, ಪ್ರಸ್ತುತ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಈ ಪಟ್ಟಿಯಲ್ಲಿರುವ 35 ಅಭ್ಯರ್ಥಿಗಳು ಹಿಂದುಳಿದ ವರ್ಗಗಗಳಿಗೆ ಸೇರಿದವರಾಗಿದ್ದಾರೆ. ಬ್ರಾಹ್ಮಣ ವರ್ಗದಿಂದ 20 ಅಭ್ಯರ್ಥಿಗಳು, ಮುಸ್ಲಿಂ ವರ್ಗದಿಂದ 5, ಮತ್ತು ದಲಿತ ವರ್ಗದಿಂದ 16 ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಕ್ಷದ ಪ್ರಣಾಳಿಕೆಯ ಪ್ರಕಾರ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರ ಸಮಾವೇಶದ 8ನೇ ಆವೃತ್ತಿ ಇಂದಿನಿಂದ ಆರಂಭ
ಅಲ್ಲದೇ, ತಮ್ಮ ಪಕ್ಷದ ಅಭ್ಯರ್ಥಿಯಿಂದ ಯಾವುದೇ ಅರ್ಜಿ ಶುಲ್ಕವನ್ನು ಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ರು.