ETV Bharat / bharat

SC/ST ಸಮುದಾಯದ ಕಟ್​ಆಫ್ ಅಂಕ ಕಡಿತಗೊಳಿಸುವಂತೆ ದೆಹಲಿ ವಿವಿಗೆ ಪತ್ರ ಬರೆದ ಎಎಪಿ ಸಚಿವರು - ಸಾಮಾಜಿ ಕಲ್ಯಾಣ ಸಚಿವ ರಾಜ್​ ಕುಮಾರ್​ ಆನಂದ್

ಈ ಹಿಂದೆ ಬಾಕಿ ಉಳಿದ ಸೀಟುಗಳ ಭರ್ತಿಗೆ ಕಟ್​​ ಆಫ್​ ಅಂಕಗಳನ್ನು ಕಡಿತಗೊಳಿಸಲಾಗುತ್ತಿತ್ತು. ಆದರೆ, ಈ ಬಾರಿ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಮತ್ತೆ ಮುಂದುವರೆಸುವಂತೆ ಮನವಿ ಸಲ್ಲಿಸಲಾಗಿದೆ.

ಪರಿಶಿಷ್ಟ ಸಮುದಾಯದ ಕಟ್​ಆಫ್ ಅಂಕ ಕಡಿತಗೊಳಿಸುವಂತೆ ದೆಹಲಿ ವಿವಿಗೆ ಪತ್ರ ಬರೆದ ಎಎಪಿ ಸಚಿವರು
aap-minister-has-written-to-delhi-university-to-reduce-the-cutoff-marks-for-scheduled-community
author img

By

Published : Jan 21, 2023, 10:31 AM IST

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕಟ್​ ಆಫ್​ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಸಲ್ಲಿಸಿ ದೆಹಲಿ ಸಾಮಾಜ ಕಲ್ಯಾಣ ಸಚಿವ ರಾಜ್​ ಕುಮಾರ್​ ಆನಂದ್​, ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೋ. ಯೋಗೇಶ್​ ಸಿಂಗ್​ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ, ದೆಹಲಿ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಮೀಸಲಾತಿ ಸೀಟುಗಳಲ್ಲಿ 6 ಸಾವಿರ ಹಾಗೇ ಉಳಿದಿದೆ. ವಿಶ್ವವಿದ್ಯಾಲದಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಆಧಾರದ ಮೇಲೆ ದೆಹಲಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಮುಂದೆ ಬರುವಂತೆ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು.

ಹಿಂದಿನ ವರ್ಷಗಳಲ್ಲಿ, ದೆಹಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯಲು ಎಸ್‌ಸಿ ವಿದ್ಯಾರ್ಥಿಗಳಿಗೆ ಕಟ್ - ಆಫ್ ಅಂಕಗಳಿಂದ ವಿನಾಯಿತಿ ನೀಡಲಾಗುತ್ತಿತ್ತು. ಈಗ ವಿಶ್ವವಿದ್ಯಾನಿಲಯದಲ್ಲಿ ಎಲ್ಲ ಸೀಟುಗಳು ಭರ್ತಿಯಾಗಿದ್ದು, ಪರಿಶಿಷ್ಟ ಸಮುದಾಯದ ಸೀಟುಗಳು ಖಾಲಿ ಉಳಿದಿದ್ದರೆ ದೆಹಲಿ ವಿಶ್ವವಿದ್ಯಾಲಯವು ಕಟ್ - ಆಫ್ ಅಂಕಗಳನ್ನು ಕಡಿಮೆ ಮಾಡುತ್ತಿತ್ತು.

ಆದರೆ, ಈ ವರ್ಷ ಸಿಯುಇಟಿಯಲ್ಲಿನ ಮಾರ್ಕ್ ಅಥವಾ ರ್ಯಾಂಕ್​ ಆಧಾರತದ ಮೇಲೆ ದಾಖಲಾತಿ ಪ್ರಕ್ರಿಯೆ ಅನುಸರಿಸಲಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುವಂತೆ ಆಗಿದೆ. ಈ ಹಿನ್ನೆಲೆ ಈ ವಿಚಾರದ ಕುರಿತು ಮರು ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ. ದಯವಿಟ್ಟು ಎಸ್‌ಸಿ ವಿದ್ಯಾರ್ಥಿಗಳಿಗೆ ಕಟ್ - ಆಫ್ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಮೂಲಕ ದಾಖಲಾತಿ ಪ್ರಕ್ರಿಯೆಯನ್ನು ಸಡಿಲಗೊಳಿಸುವಂತೆ ಕೋರಿಕೊಳ್ಳುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಸೀಟುಗಳು ಭರ್ತಿಯಾದ ಬಳಿಕವೂ ಪರಿಶಿಷ್ಟ ಸಮುದಾಯದ ಸೀಟುಗಳು ಹಾಗೇ ಖಾಲಿ ಉಳಿದಿದ್ದರೆ, ದೆಹಲಿ ವಿಶ್ವವಿದ್ಯಾಲಯ ಕಟ್​ ಆಫ್​ ಅಂಕವನ್ನು ಕಡಿತಗೊಳಿಸುತ್ತಿತ್ತು. ಆದರೆ, ಈ ಭಾರಿ ಈ ಮಾನದಂಡಗಳನ್ನು ಅನುಸರಿಸುತ್ತಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಕೂಡ ಈ ಸಂಬಂಧ ಮನವಿ ಮಾಡಿದ್ದು, ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಕಟ್ - ಆಫ್ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ದೆಹಲಿ ವಿಶ್ವವಿದ್ಯಾಲಯ ಮುಂದಾಗಬೇಕು. ಈ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಬೇಕು ಎಂದಿದ್ದರು.

ದೆಹಲಿ ವಿಶ್ವವಿದ್ಯಾಲದಲ್ಲಿ 5000 ಸ್ನಾತಕೋತ್ತರ ಪದವಿ ಸೀಟುಗಳು ಖಾಲಿ ಇದೆ. ವಿವಿಧ ಪದವಿ ಪೂರ್ವ ಕೋರ್ಸ್‌ಗಳಲ್ಲಿ ಒಟ್ಟು 70,000 ಸೀಟುಗಳನ್ನು ಭರ್ತಿಯಾಗದೇ ಹಾಗೇ ಉಳಿದಿದೆ. ಈ ಕುರಿತು ಪಿಟಿಐಗೆ ಮಾತನಾಡಿರುವ ಯೋಗೇಶ್​ ಸಿಂಗ್​​, ಹೆಚ್ಚು ಬೇಡಿಕೆ ಇಲ್ಲದೇ ಕೋರ್ಸ್​ಗಳಲ್ಲಿ ಮಾತ್ರ ಸೀಟುಗಳು ಖಾಲಿ ಉಳಿದಿವೆ ಎಂಬುದು ನನಗೆ ತಿಳಿದಿದೆ. ಈ ಸೀಟುಗಳು ಭರ್ತಿಯಾಗುವ ನಿಟ್ಟಿನಲ್ಲಿ ನಾವು ಕ್ರಮಕ್ಕೆ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಈಗಾಗಲೇ ಮೊದಲ ಸೆಮಿಸ್ಟರ್​ ಮುಗಿಯುವ ಹಂತಕ್ಕೆ ಬಂದಿದ್ದು, ಈ ಹಂತದಲ್ಲಿ ಮತ್ತೆ ದಾಖಲತಾತಿ ಪ್ರಕ್ರಿಯೆಯನ್ನು ಪುನಃ ಆರಂಭಿಸಲು ಸಾಧ್ಯವಿಲ್ಲ ಎಂದು ದೆಹಲಿ ಉಪ ಕುಲಪತಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 'ಮೌನಿ ಅಮಾವಾಸ್ಯೆ' ಹಿನ್ನೆಲೆ ವಾರಾಣಸಿಯಲ್ಲಿ ಭಕ್ತರಿಂದ ಪೂಜೆ: ವಿಡಿಯೋ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.