ನವದೆಹಲಿ: ರಾಜಧಾನಿ ದೆಹಲಿಯ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 104, ಕಾಂಗ್ರೆಸ್ 9 ಮತ್ತು ಸ್ವತಂತ್ರ ಅಭ್ಯರ್ಥಿಗಳು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣಾ ಫಲಿತಾಂಶ ಹಲವೆಡೆ ಅಚ್ಚರಿಯ ಫಲಿತಾಂಶ ನೀಡಿದೆ. ಅನೇಕ ಹಿರಿಯ ನಾಯಕರ ಕ್ಷೇತ್ರಗಳಲ್ಲಿ ಅವರು ಪ್ರತಿನಿಧಿಸುವ ಪಕ್ಷದ ಸ್ಥಿತಿ ದಯನೀಯವಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ದೆಹಲಿಯ ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ ತೃಪ್ತಿಕರವಾಗಿಲ್ಲ. ಇಲ್ಲಿನ ಐದು ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷ ಹೇಗೋ ಒಂದು ಸ್ಥಾನವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕೇವಲ 311 ಮತಗಳಿಂದ ಗೆದ್ದ ಎಎಪಿ ಅಭ್ಯರ್ಥಿ: ಓಖ್ಲಾ ವಿಧಾನಸಭಾ ಕ್ಷೇತ್ರದ 5 ವಾರ್ಡ್‌ಗಳಾದ 185 ಮದನ್‌ಪುರ ಖಾದರ್ ಪೂರ್ವ, 186 ಮದನ್‌ಪುರ ಖಾದರ್ ಪಶ್ಚಿಮ, 187 ಸರಿತಾ ವಿಹಾರ್, 188 ಅಬುಲ್ ಫಜಲ್ ಎನ್‌ಕ್ಲೇವ್ ಮತ್ತು 189 ಜಾಕಿರ್ ನಗರ ವಾರ್ಡ್ಗಳ ಮತ ಎಣಿಕೆ ದೆಹಲಿ ಆಗ್ನೇಯ ಜಿಲ್ಲೆಯ ಮೀರಾಬಾಯಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾರಾಣಿ ಬಾಗ್‌ನಲ್ಲಿ ನಡೆಯಿತು. ಇದರಲ್ಲಿ 186 ಮದನ್‌ಪುರ ಖಾದರ್ ಪಶ್ಚಿಮ, 187 ಸರಿತಾ ವಿಹಾರದಿಂದ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮದನ್‌ಪುರ ಖಾದರ್ ವೆಸ್ಟ್‌ನಿಂದ ಬಿಜೆಪಿಯ ಬ್ರಹ್ಮಸಿಂಗ್ ಗೆಲುವು ಸಾಧಿಸಿದ್ದಾರೆ. ಸರಿತಾ ವಿಹಾರ್ ವಾರ್ಡ್‌ನಿಂದ ಬಿಜೆಪಿಯ ನೀತು ಗೆಲುವು ಸಾಧಿಸಿದ್ದಾರೆ.
ಅದೇ ಮುಸ್ಲಿಂ ಪ್ರಾಬಲ್ಯದ 188 ಅಬುಲ್ ಫಜಲ್ ಎನ್‌ಕ್ಲೇವ್ ಮತ್ತು 189 ಜಾಕಿರ್ ನಗರ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬುಲ್ ಫಜಲ್, ಅರಿಬಾ ಖಾನ್ ಗೆಲುವು ಸಾಧಿಸಿದರೆ, ಜಾಕಿರ್ ನಗರದಿಂದ ಕಾಂಗ್ರೆಸ್ ಅಭ್ಯರ್ಥಿ ನಾಜಿಯಾ ದಾನಿಶ್ ಗೆಲುವು ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷವು 185 ಮದನ್‌ಪುರ ಖಾದರ್ ಪೂರ್ವದಿಂದ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಲ್ಲಿಂದ ಆಮ್ ಆದ್ಮಿ ಪಕ್ಷದ ಪ್ರವೀಣ್ ಕುಮಾರ್ ಬಿಜೆಪಿ ಅಭ್ಯರ್ಥಿ ಲೇಖ್ರಾಜ್ ಸಿಂಗ್ ಅವರನ್ನು ಕೇವಲ 311 ಮತಗಳಿಂದ ಸೋಲಿಸಿದ್ದಾರೆ.
ಅತಿ ಹೆಚ್ಚು ಮತ ಸಿಕ್ಕಿವೆ ಎಂದ ಅಮಾನತುಲ್ಲಾ ಖಾನ್: ಓಖ್ಲಾ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವು ಗರಿಷ್ಠ ಸಂಖ್ಯೆಯ ಮತಗಳನ್ನು ಪಡೆದಿದೆ. ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ ಎಂದು ಓಖ್ಲಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಹೇಳಿದ್ದಾರೆ. ಈ ವಿಧಾನಸಭೆ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಗರಿಷ್ಠ 62 ಸಾವಿರದ 369 ಮತಗಳನ್ನು ಪಡೆದರೆ, ಕಾಂಗ್ರೆಸ್ 40 ಸಾವಿರದ 418 ಮತ, ಬಿಜೆಪಿ 41 ಸಾವಿರದ 386 ಮತ, ಎಂಐಎಂ 11 ಸಾವಿರದ 566 ಮತಗಳನ್ನು ಪಡೆದಿದೆ.
2017 ಕ್ಕೆ ಹೋಲಿಸಿದರೆ ಕಡಿಮೆ ಮತದಾನ: ರಾಜಧಾನಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನ 250 ವಾರ್ಡ್‌ಗಳಿಗೆ ಭಾನುವಾರ ಮತದಾನ ನಡೆದಿತ್ತು. ಇದಕ್ಕಾಗಿ ಚುನಾವಣಾ ಆಯೋಗ ದೆಹಲಿಯಲ್ಲಿ 13 ಸಾವಿರದ 638 ಮತಗಟ್ಟೆಗಳನ್ನು ಸ್ಥಾಪಿಸಿತ್ತು. 250 ವಾರ್ಡ್‌ಗಳಲ್ಲಿ 1349 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರ ಭವಿಷ್ಯ ಬುಧವಾರ ನಿರ್ಧಾರವಾಗಿದೆ. 2022 ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 2017 ರ ಮಹಾನಗರ ಪಾಲಿಕೆ ಚುನಾವಣೆಗೆ ಹೋಲಿಸಿದರೆ ಕಡಿಮೆ ಮತದಾನವಾಗಿದೆ.
ಇದನ್ನೂ ಓದಿ: ದೆಹಲಿ ಪಾಲಿಕೆ ಗುದ್ದಾಟದಲ್ಲಿ ಗೆದ್ದು ಬೀಗಿದ ಆಪ್‌ನ ತೃತೀಯಲಿಂಗಿ ಅಭ್ಯರ್ಥಿ ಬಾಬಿ ಕಿನ್ನರ್