ETV Bharat / bharat

'ಏಕರೂಪ ನಾಗರಿಕ ಸಂಹಿತೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲಿಸುತ್ತದೆ, ಆದರೆ..'

ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಇರಬೇಕು ಎಂದು ಸಂವಿಧಾನದ ಆರ್ಟಿಕಲ್ 44 ಹೇಳುವಂತೆ ನಾವು ತಾತ್ವಿಕವಾಗಿ ಬೆಂಬಲಿಸುತ್ತೇವೆ ಎಂದು ಎಎಪಿ ಹೇಳಿದೆ.

ಅರವಿಂದ್​ ಕೇಜ್ರಿವಾಲ್​
ಅರವಿಂದ್​ ಕೇಜ್ರಿವಾಲ್​
author img

By

Published : Jun 28, 2023, 9:54 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿಯನ್ನು ಪ್ರಬಲವಾಗಿ ಸಮರ್ಥಿಸಿ ಮಾತನಾಡಿದ ಒಂದು ದಿನದ ನಂತರ, ಆಮ್ ಆದ್ಮಿ ಪಕ್ಷವು ಬುಧವಾರ ಅದರ ಅನುಷ್ಠಾನವನ್ನು ತಾತ್ವಿಕವಾಗಿ ಬೆಂಬಲಿಸುತ್ತದೆ, ಆದರೆ ಅದರ ಸುತ್ತಲೂ ಒಮ್ಮತ ರೂಪಿಸಬೇಕು ಎಂದು ಹೇಳಿದೆ.

"ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಸಂವಿಧಾನದ ಪರಿಚ್ಛೇದ 44 ಹೇಳುವಂತೆ ನಾವು ಏಕರೂಪ ನಾಗರಿಕ ಸಂಹಿತೆಯನ್ನು ತಾತ್ವಿಕವಾಗಿ ಬೆಂಬಲಿಸುತ್ತೇವೆ. ಆದರೆ ಎಲ್ಲ ಧರ್ಮಗಳು, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಯಬೇಕು. ಒಮ್ಮತವನ್ನು ಮೂಡಿಸಬೇಕು" ಎಂದು ಎಎಪಿ ಮುಖಂಡ ಸಂದೀಪ್ ಪ್ರತಿಕ್ರಿಯಿಸಿದ್ದಾರೆ.

"ಕೆಲವು ವಿಷಯಗಳು ಬಹಳ ಮುಖ್ಯ. ಭವಿಷ್ಯದಲ್ಲಿ ಅನಿವಾರ್ಯ. ಆದರೆ ಅದನ್ನು ಸರ್ವಾಧಿಕಾರಿ ರೀತಿಯಲ್ಲಿ ಜಾರಿಗೊಳಿಸಲು ಪ್ರಯತ್ನಿಸುವುದು ಸರಿಯಲ್ಲ. ವ್ಯಾಪಕ ಸಮಾಲೋಚನೆ ನಡೆಯಲಿ" ಎಂದು ಅವರು ತಿಳಿಸಿದರು. ಒಮ್ಮತವಿಲ್ಲದೆ ನೀವು ಈ ರೀತಿಯ ಯಾವುದನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ಜನರನ್ನು ನಿರಾಶೆಗೊಳಿಸುತ್ತದೆ. ಇದರ ಅನುಷ್ಠಾನದಲ್ಲಿ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆಯುವುದನ್ನು ತಪ್ಪಿಸಬೇಕು'' ಎಂದರು.

ದೇಶ 2 ಕಾನೂನುಗಳೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಯುಸಿಸಿಯ ಅಗತ್ಯವನ್ನು ಒತ್ತಿ ಹೇಳಿದ್ದರು. ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ. ಆದರೆ ದೇಶವು "ಎರಡು ಕಾನೂನು" ಗಳೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕುತೂಹಲಕಾರಿಯಾಗಿ, ಈ ವಿಷಯದಲ್ಲಿ ಎಎಪಿ ಬಿಜೆಪಿಯನ್ನು ಬೆಂಬಲಿಸಿದರೆ, ಇತರ ಪ್ರಮುಖ ವಿರೋಧ ಪಕ್ಷಗಳು ಇದನ್ನು "ವೋಟ್ ಬ್ಯಾಂಕ್" ರಾಜಕೀಯ ಎಂದು ಕರೆದಿವೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ "ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಿತ್ತೊಗೆಯಲು ಸರ್ಕಾರ ಪರಿಗಣಿಸುತ್ತಿದೆಯೇ" ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಮಾಲೋಚನೆ ಪ್ರಕ್ರಿಯೆ ಪ್ರಾರಂಭ

ಪ್ರಧಾನಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ- ಕಾಂಗ್ರೆಸ್: ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, "ಪ್ರಧಾನಿ ಇತರ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಮೊದಲು ದೇಶದಲ್ಲಿ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಉತ್ತರಿಸಬೇಕು. ಅವರು ಎಂದಿಗೂ ಮಣಿಪುರ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಇಡೀ ರಾಜ್ಯವು ಉರಿಯುತ್ತಿದೆ" ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಮೋದಿ ಮಾತು; ತಡರಾತ್ರಿ ಸಭೆ ನಡೆಸಿದ ಮುಸ್ಲಿಂ ಕಾನೂನು ಮಂಡಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.