ETV Bharat / bharat

3 ವರ್ಷದಿಂದ ಕೂಡಿಟ್ಟ 1 ರೂ.ನಾಣ್ಯಗಳನ್ನೇ ನೀಡಿ ₹2.6 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ಯುವಕ!

author img

By

Published : Mar 28, 2022, 4:07 PM IST

Updated : Mar 28, 2022, 4:13 PM IST

ತನ್ನ ಕನಸಿನ ಬೈಕ್ ಖರೀದಿಸಬೇಕೆಂಬ ಮಹದಾಸೆಯಿಂದ ಕಳೆದ ಮೂರು ವರ್ಷದಿಂದಲೂ ಜತನದಿಂದ ಕೂಡಿಟ್ಟ 1 ರೂಪಾಯಿ ಚಿಲ್ಲರೆ ಹಣದಿಂದಲೇ ಇಲ್ಲೊಬ್ಬ ಯುವಕ ಹೊಸ ಬೈಕ್ ಖರೀದಿಸಿದ ಖುಷಿಯಲ್ಲಿದ್ದಾನೆ.

Tamil Nadu youth collects Re 1 coins
Tamil Nadu youth collects Re 1 coins

ಸೇಲಂ(ತಮಿಳುನಾಡು): ಹೊಸ ಬೈಕ್​ ಖರೀದಿ ಮಾಡಬೇಕೆನ್ನುವುದು ಬಹುತೇಕ ಯುವಕರ ಕನಸು. ಅದಕ್ಕಾಗಿ ಸಾಲ, ಮನೆಯಲ್ಲಿ ಜಗಳ ನಡೆಯುವುದೆಲ್ಲಾ ಸಾಮಾನ್ಯ. ಕೊನೆಗೂ ಸಾಕಷ್ಟು ಕಸರತ್ತು ಮಾಡಿ ತಮ್ಮಿಷ್ಟದ ಬೈಕ್​ ಖರೀದಿಸಿ ಸವಾರಿಯ ಮಜಾ ಅನುಭವಿಸುತ್ತಾರೆ.

ಆದರೆ, ಇಲ್ಲೊಬ್ಬ ಯುವಕ ಎಲ್ಲರಿಗಿಂತಲೂ ವಿಭಿನ್ನವಾದ ಹಾದಿ ತುಳಿದಿದ್ದಾನೆ. ಈತ ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟಿದ್ದ 1 ರೂಪಾಯಿ ನಾಣ್ಯಗಳಿಂದಲೇ 2.6 ಲಕ್ಷ ರೂ. ಸಂಗ್ರಹಿಸಿ, ಹೊಚ್ಚ ಹೊಸ ಬೈಕ್ ತೆಗೆದುಕೊಂಡಿದ್ದಾನೆ.

1 ರೂ.ನಾಣ್ಯಗಳನ್ನೇ ನೀಡಿ ₹2.6 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ಯುವಕ!

ತಮಿಳುನಾಡಿನ ಸೇಲಂ ನಿವಾಸಿಯಾಗಿರುವ ಯುವಕ ಒಂದು ರೂಪಾಯಿ ನಾಣ್ಯಗಳನ್ನೇ ನೀಡಿ, 2.6 ಲಕ್ಷ ರೂ, ಮೌಲ್ಯದ ಬೈಕ್ ಖರೀದಿಸಿದ. ಈತ ನೀಡಿರುವ ಚಿಲ್ಲರೆ ಹಣ ಎಣಿಸಲು ಶೋ ರೂಂನವರು ಸರಿಸುಮಾರು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸೇಲಂನ ವಿ. ಭೂಪತಿ ಎಂಬಾತ ಈ ಬೈಕ್ ಖರೀದಿಸಿದ ಯುವಕ. ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟ 1 ರೂಪಾಯಿ ನಾಣ್ಯಗಳಿಂದ ಶೋರೂಂಗೆ ತೆರಳಿ ನ್ಯೂ ಬಜಾಜ್ ಡಾಮಿನರ್ ಖರೀದಿಸಿದ್ದಾನೆ.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ಪೈಸ್​ ಜೆಟ್​​ ವಿಮಾನದ ರೆಕ್ಕೆ!

ಭೂಪತಿ ಬಿಎಸ್ಸಿ ಪದವೀಧರ. ಕಳೆದ ಕೆಲ ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಬೈಕ್ ಖರೀದಿಸುವ ಕನಸು ಕಂಡಿದ್ದು ಆತನ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ, ಪ್ರತಿದಿನ ಒಂದೊಂದು ರೂಪಾಯಿ ಸಂಗ್ರಹಿಸಲು ಶುರು ಮಾಡಿದ್ದಾನೆ. ಹೀಗೆ ಮೂರು ವರ್ಷಗಳ ನಂತರ ತನ್ನಿಷ್ಟದ ಬೈಕ್ ಖರೀದಿ ಮಾಡುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಭೂಪತಿ ಯೂಟ್ಯೂಬ್​ ಚಾನಲ್​ ಕೂಡಾ ನಡೆಸುತ್ತಿದ್ದಾನೆ.

Last Updated : Mar 28, 2022, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.