ETV Bharat / bharat

ECG ಹೆಸರಲ್ಲಿ ಯವತಿ ನಗ್ನ ವಿಡಿಯೋ: ತನಿಖೆಗಿಳಿದ ಪೊಲೀಸರಿಗೆ ಬಿಗ್​​​​​ ಶಾಕ್​! - ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಸಿಜಿ ಪ್ರಕರಣ

ಆಂಧ್ರ ಪ್ರದೇಶದ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಸಿಜಿ(ECG) ಮಾಡಿಸಲು ಬಂದ ಯುವತಿಯ ಜೊತೆ ಅಲ್ಲಿನ ಸಿಬ್ಬಂದಿ ಅಸಭ್ಯವಾಗಿ ನಡೆದುಕೊಂಡು, ಅವಳನ್ನು ನಗ್ನಗೊಳಿಸಿ ವಿಡಿಯೋ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆದ್ರೆ ಆರೋಪಿಯ ವಿಚಾರಣೆಗಿಳಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು, ಪೊಲೀಸರಿಗೆ ಗೊತ್ತಾಗಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.

a-young-woman-was-sexually-molested-in-ecg-room-in-guntur
ಇಸಿಜಿ ಹೆಸರಲ್ಲಿ ಯವತಿ ನಗ್ನ ವಿಡಿಯೋ
author img

By

Published : Nov 13, 2021, 7:55 PM IST

ಗುಂಟೂರು: ಇಸಿಜಿ(ECG) ಮಾಡಿಸಲು ಆಸ್ಪತ್ರೆಗೆ ಬಂದ ಯುವತಿಯ ಜೊತೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಸರ್ಕಾರಿ ಆಸ್ಪತ್ರೆಯ ಇಸಿಜಿ ಕೊಠಡಿ(ECG room) ಯಲ್ಲಿ ಜರುಗಿದ್ದು, ತನಿಖೆ ನಡೆಸಿದ ಪೊಲೀಸರೇ ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದಾರೆ.

ಗುಂಟೂರು ಜಿಲ್ಲೆಯ ಪಾತಗುಂಟೂರಿನ 19 ವರ್ಷದ ಯುವತಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅವಳನ್ನು ಪರೀಕ್ಷಿಸಿದ ವೈದ್ಯರು ಇಸಿಜಿ ಮಾಡಿಸುವಂತೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಇಸಿಜಿ ಮಾಡಿಸಲು ಯುವತಿ ಬಂದಿದ್ದಳು.

ಇಸಿಜಿ ಕೊಠಡಿಗೆ (ECG room) ಹೋದ ಯುವತಿಗೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರೀಶ್​ ಎನ್ನುವ ಸಿಬ್ಬಂದಿ, ಮೈಮೇಲಿನ ಬಟ್ಟೆಯನ್ನು ತೆಗೆಯುವಂತೆ ಹೇಳಿದ್ದಾನೆ. ಇದಕ್ಕೆ ಯುವತಿ ಸಮ್ಮತಿಸಿಲ್ಲ. ಅಲ್ಲದೆ, ನಿಮ್ಮ ಸಮಸ್ಯೆ ತಿಳಿಬೇಕು ಅಂದ್ರೆ ನೀನು ವಿವಸ್ತ್ರಳಾಗಬೇಕು ಎಂದು ಹೇಳಿದ್ದಾನೆ. ಇದಕ್ಕೆ ಯುವತಿ ಸಂಪೂರ್ಣವಾಗಿ ನಿರಾಕರಿಸಿದ್ದಾಳೆ. ಇದರಿಂದ ಹರೀಶ್​ ಬಲವಂತವಾಗಿ ಅವಳ ಬಟ್ಟೆ ತೆಗೆಯುವಂತೆ ಹೇಳಿ ವಿಡಿಯೋ ಚಿತ್ತೀಕರಿಸಿದ್ದಾನೆ. ಇದರಿಂದ ನೊಂದ ಯುವತಿ ಕೊಠಡಿಯಿಂದ ಹೊರಬಂದು ತನ್ನ ತಂದೆಯೊಂದಿಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಸ್ಥಳಕ್ಕೆ ಬಂದ ಕೊತ್ತಪೇಟ ಪೊಲೀಸರು ಪರಿಶೀಲನೆ ಮುಂದಾದರು.

ತನಿಖೆಗಿಳಿದ ಪೊಲೀಸರಿಗೆ ಬಿಗ್​​​ ಶಾಕ್​​: ಆರೋಪಿಯ ವಿಚಾರಣೆ ಮಾಡಲು ಮುಂದಾದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಇಸಿಜಿ ಕೊಠಡಿಯಲ್ಲಿ ಶಂಕರ್​ ಎಂಬ ಸಿಬ್ಬಂದಿಯ ಬದಲು ಅನ್ಯವ್ಯಕ್ತಿ ಹರೀಶ್​ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ. ವಿಚಿತ್ರ ಅಂದ್ರೆ ಅವನು ಆಸ್ಪತ್ರೆಯ ಸಿಬ್ಬಂದಿಯೇ ಆಗಿರಲಿಲ್ಲ. ಈ ಕುರಿತು ಶಂಕರ್​ಗೆ ಕರೆಮಾಡಿ ವಿಚಾರಿಸಿದಾಗ ಹರೀಶ್​ ಯಾರು ಎಂಬುದು ಗೊತ್ತಿಲ್ಲ. ಆರೋಗ್ಯ ನಿಮಿತ್ತ ನಾನು ರಜೆ ಹಾಕಿದ್ದೇನೆ. ತರಬೇತಿ ಟೆಕ್ನಿಷಿಯನ್​ಗೆ ನಾನು ಇಸಿಜಿ ನೋಡಿಕೊಳ್ಳಲು ಹೇಳಿದ್ದೆ ಎಂದಿದ್ದಾನೆ. ಈ ಕುರಿತು ವಿಚಾರಿಸಿದ ಪೊಲೀಸರಿಗೆ ಅಲ್ಲಿದ್ದ ವಿದ್ಯಾರ್ಥಿಗಳು ಶಂಕರ್​ನನ್ನು ಕರೆತಂದಿದ್ದಾಗಿ ತಿಳಿದಿದೆ. ಸದ್ಯ ಕಾಮುಕ ಹರೀಶ್​ ಪೊಲೀಸರ ವಶದಲ್ಲಿದ್ದು, ಈ ಕುರಿತು ತನಿಖೆ ಮುಂದುವೆರೆದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.