ಕೃಷ್ಣ, ಆಂಧ್ರಪ್ರದೇಶ: ಜಿಲ್ಲೆಯಲ್ಲಿ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಯುವತಿಯನ್ನು ವಿವಸ್ತ್ರವಾಗಿ ವಿಡಿಯೋ ಚಿತ್ರೀಕರಿಸಿ ಆಕೆಗೆ ನಿಶ್ಚಿಯವಾಗಿದ್ದ ಮದುವೆಯನ್ನು ಹಾಳು ಮಾಡಲು ಫೇಸ್‌ಬುಕ್ ಗೆಳೆಯನೊಬ್ಬ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ಹೊರಬೀಳುತ್ತಿದ್ದಂತೆ ಮದುವೆ ರದ್ದುಗೊಂಡಿದೆ.
ಇನ್ನು ವಿಡಿಯೋ ವೈರಲ್ ಮಾಡಿದ ವ್ಯಕ್ತಿ, ಯುವತಿಯನ್ನು ಮದುವೆಯಾಗಲು ಸಿದ್ಧವಾಗಿದ್ದ ಯುವಕ ಹಾಗೂ ಮದುವೆಯ ಹಿರಿಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಹೆಚ್ಚಿನ ವಿಷಯಗಳು ಹೊರಬಿದ್ದಿವೆ ಎಂದು ಕೃಷ್ಣಾ ಜಿಲ್ಲೆಯ ಗುಡಿವಾಡ ಟೂಟೌನ್ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕರ್ರಾ ನ್ಯೂಟನ್‌ಬಾಬು ಅವರು ಗುಡಿವಾಡ ಪಟ್ಟಣದ ಯುವತಿಯೊಬ್ಬಳನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ಯುವತಿಯೊಂದಿಗೆ ನ್ಯೂಟನ್‌ಬಾಬು ಆತ್ಮೀಯತೆ ಹೆಚ್ಚಾಗಿದೆ. ಒಂದು ದಿನ ಯುವತಿಗೆ ನ್ಯೂಟನ್‌ಬಾಬು ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆತನ ಕೋರಿಕೆಯಂತೆ ಯುವತಿ ಬೆತ್ತಲೆ ವಿಡಿಯೋ ಕಾಲ್ ಮಾಡಿದ್ದಾಳೆ. ಇದನ್ನು ನ್ಯೂಟನ್‌ಬಾಬು ತನ್ನ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿದ್ದಾನೆ.
ಇನ್ನು ಯುವತಿಗೆ ಏಲೂರು ಜಿಲ್ಲೆ ಮಂಡವಳ್ಳಿಯ ಗುರ್ರಂ ಪರಮಜ್ಯೋತಿ ಎಂಬುವವರೊಂದಿಗೆ ನಿಶ್ಚಿತಾರ್ಥ ಆಗಿದೆ. ಇದರಿಂದ ಯುವತಿ ತನ್ನ ಭಾವಿ ಪತಿಗೆ ದೈಹಿಕವಾಗಿ ಹತ್ತಿರವಾಗಿದ್ದಾರೆ. ಎಲ್ಲ ಸರಿಯಾಗಿ ಇದ್ದಿದ್ರೆ ಇವರಿಬ್ಬರ ಮದುವೆ ಇದೇ ತಿಂಗಳ 14ರಂದು ನಡೆಯಬೇಕಾಗಿತ್ತು. ಆದರೆ ನ್ಯೂಟನ್ ಬಾಬು ಯುವತಿಯ ಜೀವನಕ್ಕೆ ವಿಲನ್ ಆಗಿದ್ದಾನೆ. ಆಕೆಯೊಂದಿಗೆ ಮಾತನಾಡಿರುವ ನ್ಯೂಡ್ ವಿಡಿಯೋವನ್ನು ನ್ಯೂಟನ್‌ಬಾಬು ಮದುಮಗ ಪರಮ ಜ್ಯೋತಿಗೆ ಕಳುಹಿಸಿದ್ದಾನೆ.
ಈ ವಿಡಿಯೋ ನೋಡಿದ ಪರಮಜ್ಯೋತಿಗೆ ಶಾಕ್ ಆಗಿದೆ. ಕೂಡಲೇ ಪರಮಜ್ಯೋತಿ ಮದುವೆ ನಿಶ್ಚಯಿಸಿದ ಹಿರಿಯರಿಗೆ ವಿಡಿಯೋ ಕಳುಹಿಸಿದ್ದಾನೆ. ಬಳಿಕ ನಾನು ಈ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದಾನೆ. ಮದುವೆಯ ಮಧ್ಯವರ್ತಿ ಗುರ್ರಂ ಜೋಶುವಾ ಜ್ಯೋತಿಗೆ ಈ ನಗ್ನ ವಿಡಿಯೋವನ್ನು ಕಳುಹಿಸಿ ನಮ್ಮ ಮಗ ಈ ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಜೋಶುವಾ ಜ್ಯೋತಿ ಅವರು ಯುವತಿಯ ಮನೆಯವರಿಗೆ ಆ ವಿಡಿಯೋ ಕಳುಹಿಸಿ ವರ ನಿಮ್ಮ ಮಗಳನ್ನು ಮದುವೆ ಆಗಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ನ್ಯೂಟನ್ ಬಾಬು ಅವರ ಸಂಬಂಧಿಕರಾದ ಬಾಪಟ್ಲ ಕೋಟೇಶ್ವರ ರಾವ್ ಮತ್ತು ಕೊಂಡ್ರು ರಣಧೀರ್ ಕೂಡ ನಗ್ನವಿಡಿಯೋವನ್ನು ಇತರರಿಗೆ ಕಳುಹಿಸಿರುವುದು ಪೊಲೀಸರು ತನಿಖೆ ಮೂಲಕ ಕಂಡುಕೊಂಡಿದ್ದಾರೆ. ಹೀಗೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ವಿಡಿಯೋ ಕಳುಹಿಸಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಐ ಬಿ.ತುಳಸೀಧರ್ ತಂತ್ರಜ್ಞಾನದ ಸಹಾಯದಿಂದ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಯವತಿಗೆ ಬೆದರಿಸಿ ನಗ್ನ ವಿಡಿಯೋ ಚಿತ್ರೀಕರಿಸಿದ ನ್ಯೂಟನ್ ಬಾಬು ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ, ಪರಮಜ್ಯೋತಿ ಮೇಲೆ ಅತ್ಯಾಚಾರ ಪ್ರಕರಣ, ಜೋಶುವಾ ಜ್ಯೋತಿ, ಕೋಟೇಶ್ವರ ರಾವ್ ಮತ್ತು ರಣಧೀರ್ ವಿರುದ್ಧ ಐಟಿ ಕಾಯ್ದೆಯ 109, 120 (ಬಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇವರೆಲ್ಲರನ್ನೂ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರೊಬ್ಬರ ಖಾಸಗಿ ನಗ್ನ ವಿಡಿಯೋಗಳನ್ನು ಡಿಲಿಟ್ ಮಾಡದೇ ಅಥವಾ ಇನ್ನೊಬ್ಬರಿಗೆ ನಗ್ನ ವಿಡಿಯೋಗಳನ್ನು ಕಳುಹಿಸಿದರೆ ಅವರು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಿಐ ತುಳಸೀಧರ್ ಎಚ್ಚರಿಸಿದ್ದಾರೆ.
ಓದಿ: ಮಹಿಳಾ ಹಾಸ್ಟೆಲ್‌ನಲ್ಲಿ ನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಶಂಕಿತ ಆರೋಪಿ ಆತ್ಮಹತ್ಯೆ