ETV Bharat / bharat

Video: ದಿಢೀರ್​ ಕಾರ್​​ನ ಬಾಗಿಲು ತೆರೆದ ಚಾಲಕ.. ಟ್ರಕ್​ನಡಿ ಸಿಲುಕಿ ಸ್ಥಳದಲ್ಲೇ ಹಾರಿಹೋಯ್ತು ಬೈಕ್ ಸವಾರನ ಪ್ರಾಣ - ಕಾರು ಬೈಕ್​ ಡಿಕ್ಕಿ

ಕಾರ್​ನ ಚಾಲಕ ಇದ್ದಕ್ಕಿದ್ದಂತೆ ಬಾಗಿಲು ತೆರೆದ ಕಾರಣ ಭೀಕರ ರಸ್ತೆ ಅಪಘಾತ(road accident) ಸಂಭವಿಸಿ ಯುವಕ ಮೃತಪಟಟ್ಟ ಘಟನೆ ಪುಣೆಯ ಪಿಂಪ್ರಿ ಚಿಂಚ್‌ವಾಡ್​ನಲ್ಲಿ ನಡೆದಿದೆ.

A young man died by accident at Pune
ಭೀಕರ ರಸ್ತೆ ಅಪಘಾತ
author img

By

Published : Nov 17, 2021, 12:19 PM IST

Updated : Nov 17, 2021, 12:35 PM IST

ಪಿಂಪ್ರಿ ಚಿಂಚ್‌ವಾಡ್ (ಮಹಾರಾಷ್ಟ್ರ): ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರ ಚಾಲಕ ಇದ್ದಕ್ಕಿದ್ದಂತೆ ವಾಹನದ ಬಾಗಿಲು ತೆರೆದಿದ್ದಾನೆ. ಆಗ ಅಲ್ಲೇ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ಯುವಕನಿಗೆ ಡೋರ್​ ಬಡಿದು ಕೆಳಗೆ ಬಿದ್ದು, ಟ್ರಕ್​ನಡಿ ಸಿಲುಕಿ​ ಮೃತಪಟ್ಟಿರುವ ಘಟನೆ ಪುಣೆಯ ಪಿಂಪ್ರಿ ಚಿಂಚ್‌ವಾಡ್​ನಲ್ಲಿ ಸಂಭವಿಸಿದೆ.

ಭೀಕರ ರಸ್ತೆ ಅಪಘಾತ - ಸಿಸಿಟಿವಿ ವಿಡಿಯೋ

ಈ ಘಟನೆ ನವೆಂಬರ್ 11ರ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಮ್ ಬಾಳಾಸಾಹೇಬ ಬಾಗಲ್ (24) ಮೃತ ಯುವಕ. ಈ ಸಂಬಂಧ ಟ್ರಕ್​​​ ಚಾಲಕ, ಕಾರು ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹದಗೆಟ್ಟ ವಾಯು ಗುಣಮಟ್ಟ.. ಮುಂದಿನ ಆದೇಶದವರೆಗೆ ದೆಹಲಿಯಲ್ಲಿ ಶಾಲಾ-ಕಾಲೇಜುಗಳು ಬಂದ್

ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ಅಪಘಾತ ಕುರಿತು ಮಾಹಿತಿ ನೀಡಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಚಾಲಕ ಇದ್ದಕ್ಕಿದ್ದಂತೆ ಬಾಗಿಲು ತೆರೆದನು. ದ್ವಿಚಕ್ರ ವಾಹನದಲ್ಲಿ ಇಬ್ಬರು ತೆರಳುತ್ತಿದ್ದು, ಯುವಕ ರಾಮ್ ಬಾಳಾಸಾಹೇಬ ಬಾಗಲ್ ರಸ್ತೆಗೆ ಬಿದ್ದಿದ್ದಾನೆ. ತುಂಬಿದ್ದ ಟ್ರಕ್​ನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

Last Updated : Nov 17, 2021, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.