ಕೋಲ್ಕತ್ತಾ: ಪ್ರತೀ ವರ್ಷದಂತೆ ಈ ವರ್ಷವೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಯಜ್ಞ ಮಾಡಿಸಿ ಒಡಿಶಾದ ಪುರಿ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಅಭಿಷೇಕ್ ಬ್ಯಾನರ್ಜಿ ಈ ವಿಶೇಷ ಪೂಜೆಯನ್ನು ಅತ್ತೆ ಮಮತಾ ಬ್ಯಾನರ್ಜಿ ಮನೆಯಲ್ಲಿ ಆಯೋಜಿಸಿದ್ದರು. ಪುರಿ ಜಗನ್ನಾಥ ದೇವಾಲಯದಿಂದಲೇ ಅರ್ಚಕರು ಕೋಲ್ಕತ್ತಾಗೆ ಬಂದು ಯಜ್ಞ ನೆರವೇರಿಸಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಇಂಧನ ಬೆಲೆ: ಸ್ಕೂಟರ್ ಏರಿ ದೀದಿ ವಿನೂತನ ಪ್ರತಿಭಟನೆ - ವಿಡಿಯೋ ನೋಡಿ
ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ದಿನಾಂಕವನ್ನು ಭಾರತದ ಚುನಾವಣಾ ಆಯೋಗ ಘೋಷಿಸಲಿರುವ ಹಿನ್ನೆಲೆ ಮಮತಾ ಯಜ್ಞ ಮಾಡಿಸಿದ್ದಾರೆಂದು ಟಿಎಂಸಿ ಮೂಲಗಳು ತಿಳಿಸಿವೆ.