ETV Bharat / bharat

ಮಹಿಳೆಯ ಥಳಿಸಿ, ಚಪ್ಪಲಿ ಹಾರ ಹಾಕಿ ಪುರುಷನ ಭುಜದ ಮೇಲೆ ಹೊರಿಸಿದ ಜನರು! - ಮಹಿಳೆ ಥಳಿಸಿದ ವಿಡಿಯೋ

ಮಧ್ಯಪ್ರದೇಶದಲ್ಲಿ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ.

ಮಹಿಳೆಯ ಥಳಿಸಿ, ಚಪ್ಪಲಿ ಹಾರ ಹಾಕಿ ಪುರುಷನ ಭುಜದ ಮೇಲೆ ಹೊರಿಸಿದ ಜನರು!

author img

By

Published : Jul 5, 2022, 8:28 AM IST

ದೇವಾಸ್​(ಮಧ್ಯಪ್ರದೇಶ): ಮಹಿಳೆಯನ್ನು ಅಮಾನವೀಯವಾಗಿ ನಡೆಸಿಕೊಂಡ ವಿಡಿಯೋವೊಂದು ಮಧ್ಯಪ್ರದೇಶದಿಂದ ಹೊರಬಿದ್ದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಮಹಿಳೆಯನ್ನು ಥಳಿಸಿ, ಕೊರಳಿಗೆ ಚಪ್ಪಲಿ, ಶೂಗಳ ಮಾಲೆ ಹಾಕಿದ್ದಲ್ಲದೇ, ಗಂಡನನ್ನು ಭುಜದ ಮೇಲೆ ಹೊರಿಸಲಾಗಿದೆ.

ಆಕೆ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಬೆಳೆಸಿದ್ದಾಳೆ ಎಂಬ ಶಂಕೆಯ ಮೇಲೆ ಈ ರೀತಿಯ ಘೋರ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗಿದೆ. ಪುರುಷರ ಗುಂಪೊಂದು ಮಹಿಳೆಯೊಂದಿಗೆ ಹೀನಾಯವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂರ್ನಾಲ್ಕು ದಿನಗಳಿಂದ ಆಕೆ ಕಾಣೆಯಾಗಿದ್ದಳು. ಬಳಿಕ ಪರಪುರುಷನ ಜೊತೆ ಪತ್ತೆಯಾಗಿದ್ದಳಂತೆ. ಇದರಿಂದ ಆಕೆಯ ಪತಿ ಮತ್ತು ಸಮುದಾಯದ ಸದಸ್ಯರು ಕೋಪಗೊಂಡು ಥಳಿಸಿದ್ದಲ್ಲದೇ, ಗಂಡನನ್ನು ಹೊತ್ತು ನಡೆಯುವ ಶಿಕ್ಷೆ ನೀಡಿದ್ದಾರೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. "ತನಗೆ 15ನೇ ವಯಸ್ಸಿನಲ್ಲಿ ತನಗೆ ಮದುವೆಯಾಗಿದ್ದು, ಪತಿಯ ಕಿರುಕುಳದಿಂದ ಸ್ನೇಹಿತನ ಜೊತೆ ಹೋಗಿದ್ದೆ" ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪತಿ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ. ಹಲ್ಲೆ, ಗಲಭೆ, ಮಹಿಳೆಯ ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಬುರ್ಕಿನಾ ಫಾಸೋದಲ್ಲಿ ಜಿಹಾದಿ ದಾಳಿಗೆ 22 ಮಂದಿ ಬಲಿ, ನಿಲ್ಲದ ರಕ್ತದೋಕುಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.