ಪುಣೆ: ಮನುಷ್ಯ ಹೇಗೆಲ್ಲಾ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಮಗಳಿಗೆ ನಾಯಿಯೊಂದು ಕಚ್ಚಿತು ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬಳು ಬೀದಿನಾಯಿ ಕಂಡರೆ ಸಾಕು ಅವುಗಳನ್ನು ಕೊಲೆ ಮಾಡುತ್ತಿದ್ದಾಳಂತೆ. ಕೈಯಲ್ಲಿ ಕೋಲು ಹಿಡಿದು ಸುತ್ತಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಂಬೈನ ಪುಣೆಯಲ್ಲಿ ಈ ಘಟನೆ ನಡೆದಿದೆ. ಅನಿತಾ ಖಟ್ಟೆ, ನಾಯಿಗಳನ್ನು ಹರಣ ಮಾಡುತ್ತಿರುವ ಮಹಿಳೆ. ಕೆಲವು ದಿನಗಳ ಹಿಂದೆ ತನ್ನ ಮಗಳು ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ನಾಯಿ ಕಚ್ಚಿದೆಯಂತೆ. ಇದರಿಂದ ರೊಚ್ಚಿಗೆದ್ದ ಈ ಮಹಾತಾಯಿ ನಾಯಿ ಕಂಡರೆ ಸಾಕು ರೌದ್ರಿಯಂತೆ ಕೋಲು ಹಿಡಿದು ನಾಯಿಗಳನ್ನು ಬಡಿದು ಕೊಲೆ ಮಾಡುತ್ತಿದ್ದಾಳೆ.
ರಾತ್ರಿ ವೇಳೆಯೂ ಈಕೆ ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆ ಕೂಡ ಈ ಮಹಿಳೆಯ ಕೋಪಾಗ್ನಿಗೆ ಎರಡು 2 ನಾಯಿ ಮರಿಗಳು ಜೀವ ಕಳೆದುಕೊಂಡಿವೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಿರಿಯಣ್ಣನ ಮಕ್ಕಳು ಸೇರಿ ಐವರ ಕೊಲೆಗೈದು ಪಶ್ಚಾತ್ತಾಪದಿಂದ ಪೊಲೀಸರಿಗೆ ಶರಣಾದ!