ETV Bharat / bharat

ಬೇಡ ಬೇಡ ಎಂದು ಎಷ್ಟೇ ಕೂಗಿಕೊಂಡರು ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ - mount thottabetta

ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತ ಘಟನೆ ಪ್ರವಾಸಿಗರ ಮುಂದೆಯೇ ನಡೆದಿದೆ.

ಬೇಡ ಬೇಡ ಎಂದು ಎಷ್ಟೇ ಕೂಗಿಕೊಂಡರು ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ

author img

By

Published : Aug 28, 2022, 9:49 PM IST

ನೀಲಗಿರಿ(ತಮಿಳುನಾಡು): 500 ಅಡಿಗೂ ಹೆಚ್ಚು ಎತ್ತರವಿರುವ ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆಯನ್ನು ಕಣ್ಣಾರೆ ಕಂಡಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ ಕ್ಯಾಮರಾ ಮೂಲಕ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದಾರೆ. ವೃದ್ಧೆ ಪರ್ವತದಿಂದ ಜಿಗಿಯಲು ಪ್ರಯತ್ನಿಸುತ್ತಿರುವಾಗ, ಅಲ್ಲಿ ಸುತ್ತುವರೆದಿದ್ದ ಪ್ರವಾಸಿಗರು ಕಿರುಚುತ್ತ ಆ ರೀತಿ ಮಾಡಿಕೊಳ್ಳದಂತೆ ಕೂಗಾಡಿದರು. ಆದರೆ ಆ ಅಜ್ಜಿ ಯಾರ ಮಾತುಗಳನ್ನು ಕೇಳದೆ ಕಮರಿಗೆ ಜಿಗಿದಿದ್ದಾರೆ. ಈ ಎಲ್ಲಾ ದೃಶ್ಯಗಳು ಪ್ರವಾಸಿಗರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿವೆ.

ಬೇಡ ಬೇಡ ಎಂದು ಎಷ್ಟೇ ಕೂಗಿಕೊಂಡರು ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ 2 ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯ ಶವವನ್ನು ಮೇಲಕ್ಕೆ ಹೊತ್ತು ತಂದಿದ್ದಾರೆ.

ಮಹಿಳೆ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಆ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ಪೊಲೀಸ್ ಇಲಾಖೆಯು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಇದನ್ನೂ ಓದಿ : ಸಚಿವರ ಅಧಿಕೃತ ನಿವಾಸದಲ್ಲಿ ಆಫೀಸ್ ಬಾಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.