ಹಾಲಿನ ಬಾಟಲ್ ಹಿಡಿಯುವ ಕೈಯಲ್ಲಿ ಕ್ರಿಕೆಟ್ ಬ್ಯಾಟ್..ವಿರಾಟ್ ಕೊಹ್ಲಿ ಆಗ್ತಾನಂತೆ ಈ ಪೋರ - ಕ್ರಿಕೆಟ್ ಬ್ಯಾಟಿಂಗ್
ಜಯಂತ್ ಮಾತನಾಡಲು ಆರಂಭಿಸಿದಾಗ ಆತನ ಬಾಯಿಂದ ಬರುತ್ತಿದ್ದದ್ದು, ಬರಿ ಬ್ಯಾಟ್, ಬಾಲ್ ಕ್ರಿಕೆಟ್ ಎಂಬ ಶಬ್ದಗಳಂತೆ. ಹೀಗಾಗಿ ಮಗನಿಗೆ ಚಿಕ್ಕವನಿರುವಾಗಲೇ ಬ್ಯಾಟ್, ಬಾಲ್, ಪ್ಯಾಡ್, ಹೆಲ್ಮೆಟ್ ಹೀಗೆ ನಾನಾ ಆಟಿಕೆ ನೀಡಿದ್ದರಂತೆ.
ರಾಂಚಿ (ಜಾರ್ಖಂಡ್): ತೊಟ್ಟಿಲಿಂದ ಕೆಳಗಿಳಿದು ಇನ್ನೂ ಮನೆ ಹೊಸಿಲು ದಾಟುವ ವರ್ಷ ಅಷ್ಟೇ, ಈ ಪೋರ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾನೆ. ಅಷ್ಟಕ್ಕೂ ಈ ಎರಡೂವರೆ ವರ್ಷದ ಈ ಪುಟಾಣಿ ಬ್ಯಾಟ್ ಹಿಡಿದು ನಿಂತರೆ ನೋಡುಗರು ಒಮ್ಮೆ ಹುಬ್ಬೇರಿಸುವುದಂತು ನಿಜ. ಬಹುಶಃ ಈ ವಯಸ್ಸಲ್ಲಿ ಬ್ಯಾಟ್ ಹಿಡಿಯುವುದನ್ನೇ ಕಲಿಯಲು ಸಾಧ್ಯವಿಲ್ಲ.
ಆದ್ರೆ ಈ ಪೋರ ಜಯಂತ್ ಬ್ಯಾಟ್ ಹಿಡಿದು ಭರ್ಜರಿ ಹೊಡೆತಗಳಿಗೆ ಮುಂದಾಗುತ್ತಾನೆ. ಇಷ್ಟೇ ಅಲ್ಲ ಈ ಹುಡುಗನಿಗೆ ಈಗಲೇ ಕ್ರಿಕೆಟ್ ಉಪಕರಣಗಳ ಹೆಸರು ಸಹ ತಿಳಿದಿದೆ. ಕ್ರಿಕೆಟ್ ಆಡಲು ಏನೆಲ್ಲ ಬೇಕು ಎಂಬ ಬಗ್ಗೆಯೂ ತಿಳಿದುಕೊಂಡಿದ್ದಾನೆ.
ಜಯಂತ್ 9ನೇ ತಿಂಗಳಲ್ಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದನಂತೆ. ಟಿವಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಿ ತೊದಲು ನುಡಿಯಲ್ಲೇ ಬ್ಯಾಟ್ ಕೊಡಿಸಿ ಅಂತ ತಂದೆ ಬಳಿ ಹೇಳಿದ್ದನಂತೆ. ಅಲ್ಲಿಂದ ಈವರೆಗೆ ಬ್ಯಾಟ್ ಹಿಡಿದು ಅಭ್ಯಾಸ ಮಾಡುತ್ತಾ ಬಂದಿದ್ದಾನೆ. ಈಗ ನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಕ್ರಿಕೆಟ್ ಆಡಲು ಮನೆ ಹೊರಗೆ ಬರುತ್ತಾನೆ.
ಜಯಂತ್ ಜನಿಸಿದಾಗ ಆತನ ಕಾಲುಗಳು ಶಕ್ತಿ ಕಳೆದುಕೊಂಡಿದ್ದವಂತೆ. ಆದರೆ, ಸತತ ತಿಂಗಳ ಚಿಕಿತ್ಸೆ ಬಳಿಕ ಎಂದಿನಂತೆ ಕಾಲುಗಳು ಶಕ್ತಿ ಪಡೆದುಕೊಂಡು ಸಾಮಾನ್ಯರಂತಾಯಿತು ಎನ್ನುತ್ತಾರೆ ಜಯಂತ್ ತಂದೆ.
ಜಯಂತ್ ಮಾತನಾಡಲು ಆರಂಭಿಸಿದಾಗ ಆತನ ಬಾಯಿಂದ ಬರುತ್ತಿದ್ದದ್ದು, ಬರಿ ಬ್ಯಾಟ್, ಬಾಲ್ ಕ್ರಿಕೆಟ್ ಎಂಬ ಶಬ್ದಗಳಂತೆ. ಹೀಗಾಗಿ ಮಗನಿಗೆ ಚಿಕ್ಕವನಿರುವಾಗಲೇ ಬ್ಯಾಟ್, ಬಾಲ್, ಪ್ಯಾಡ್, ಹೆಲ್ಮೆಟ್ ಹೀಗೆ ನಾನಾ ಆಟಿಕೆ ನೀಡಿದ್ದರಂತೆ.
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯೋ ಕಾಲದಲ್ಲಿ ಈ ಪೋರ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಭವಿಷ್ಯದಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿರಿಸಿ ದೊಡ್ಡ ಹೆಸರು ಮಾಡಿದರೂ ಅಚ್ಚರಿಯೇನಿಲ್ಲ.