ETV Bharat / bharat

ಟ್ಯೂಷನ್​ಗೆ​ ಹೋದ ವಿದ್ಯಾರ್ಥಿನಿಗೆ ಥಳಿಸಿ, ಬಲವಂತದಿಂದ ಮದ್ಯ ಕುಡಿಸಿದ ಶಿಕ್ಷಕ - ವಿದ್ಯಾರ್ಥಿನಿಗೆ ಥಳಿಸಿ ಮದ್ಯ ಕುಡಿಸಿದ ಶಿಕ್ಷಕ

ವಿದ್ಯಾರ್ಥಿನಿಯೊಬ್ಬಳಿಗೆ ಥಳಿಸಿ, ತನ್ನೊಂದಿಗೆ ಮದ್ಯ ಸೇವಿಸುವಂತೆ ಬಲವಂತವಾಗಿ ಆಕೆಗೆ ಮದ್ಯ ಕುಡಿಸಿದ ಟ್ಯೂಷನ್​ ಶಿಕ್ಷಕನನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ.

a-teacher-arrested-for-assaulting-girl-student-forcing-her-to-drink-alcohol
ಟ್ಯೂಷನ್​ಗೆ​ ಹೋದ ವಿದ್ಯಾರ್ಥಿನಿಗೆ ಥಳಿಸಿ, ಬಲವಂತದಿಂದ ಮದ್ಯ ಕುಡಿಸಿದ ಶಿಕ್ಷಕ
author img

By

Published : Aug 5, 2022, 3:40 PM IST

Updated : Aug 5, 2022, 3:48 PM IST

ವಡೋದರ (ಗುಜರಾತ್​): ಟ್ಯೂಷನ್​ ಶಿಕ್ಷಕನೋರ್ವ 10ನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿ, ಆಕೆಗೆ ಮದ್ಯ ಕುಡಿಸಿದ ಗಂಭೀರ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್​ನ ವಡೋದರದಲ್ಲಿ ನಡೆದಿದೆ. ಪ್ರಶಾಂತ್​ ಖೋಸ್ಲಾ ಎಂಬಾತನೇ ಬಂಧಿತ ಶಿಕ್ಷಕನಾಗಿದ್ದು, ಇಲ್ಲಿನ ನಜೀಮ್​ಪುರ ಪ್ರದೇಶದಲ್ಲಿ ಟ್ಯೂಷನ್​ ನಡೆಸುತ್ತಿದ್ದ.

ಬುಧವಾರ ಟ್ಯೂಷನ್​ಗೆಂದು 10ನೇ ತರಗತಿ ವಿದ್ಯಾರ್ಥಿನಿ ಬಂದಿದ್ದಳು. ಈ ವೇಳೆ ಪ್ರಶಾಂತ್​ ಖೋಸ್ಲಾ ಮದ್ಯ ಸೇವಿಸಿ, ವಿದ್ಯಾರ್ಥಿನಿಗೂ ಬಲವಂತದಿಂದ ಮದ್ಯ ಕುಡಿಸಿದ್ದಾನೆ. ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡ ನಂತರ ರಾತ್ರಿ 9.30ರ ಸುಮಾರಿಗೆ ತಾನೇ ಮನೆಯವರೆಗೆ ಕರೆತಂದು ಬಿಟ್ಟು ಹೋಗಿದ್ದಾನೆ. ಬಳಿಕ ಪೋಷಕರು ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಫತೇಹ್​ಗಂಜ್​ ಇನ್ಸ್​ಪೆಕ್ಟರ್​​ ಕೆ.ಪಿ.ಪರ್ಮಾರ್​ ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಪ್ರಜ್ಞೆ ಬಂದ ನಂತರ ಮಹಿಳಾ ಪೊಲೀಸ್ ಸಬ್​ ಇನ್ಸ್‌ಪೆಕ್ಟರ್ ಎ.ಕೆ.ವಾಲ್ವಿ ಆಕೆಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಬಂಧನಕ್ಕೂ ಮುನ್ನ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಬಂಧಿತನ ವಿರುದ್ಧ ಮದ್ಯ ನಿಷೇಧ ಕಾಯ್ದೆ, ಬಾಲಾಪರಾಧಿ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದೂ ಇನ್ಸ್​ಪೆಕ್ಟರ್ ತಿಳಿಸಿದ್ದಾರೆ.

2 ವರ್ಷದ ಮಗುವಿಗೆ ಮದ್ಯ ಕುಡಿಸಿದ ಜಮೀನುದಾರ: ಗುಜರಾತ್​ನ ರಾಜ್​ಕೋಟ್​ ಜಿಲ್ಲೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೀರಾ ಉದ್ಯೋಗನಗರ ಪ್ರದೇಶದಲ್ಲಿ ಜಮೀನುದಾರನೊಬ್ಬ ಪಕ್ಷದ ಮನೆಯ ಎರಡು ವರ್ಷದ ಮಗುವಿಗೆ ಮದ್ಯ ಕುಡಿಸಿ ವಿಕೃತಿ ಮರೆದಿದ್ದಾನೆ. ಅದೃಷ್ಟವಷಾತ್​ ಮದ್ಯ ಕುಡಿಸುವ ಸಂದರ್ಭದಲ್ಲೇ ಪೋಷಕರು ನೋಡಿ ಮಗುವನ್ನು ಕರೆದೊಯ್ದಿದ್ದಾರೆ. ಆದರೆ, ಇದಾದ ಸ್ವಲ್ಪ ಹೊತ್ತಿನಲ್ಲಿ ಆ ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಪಾಲಕರು ಮಗುವನ್ನು ರಾಜ್​ಕೋಟ್​​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಇದನ್ನೂ ಓದಿ: ಬೆಂಗಳೂರು: ಬಿಲ್ಡಿಂಗ್​​​​​ನಿಂದ ಕಂದಮ್ಮನನ್ನ ಕೆಳಕ್ಕೆ ಎಸೆದು ಹತ್ಯೆ ಮಾಡಿದ ತಾಯಿ!

Last Updated : Aug 5, 2022, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.