ETV Bharat / bharat

ಲಸಿಕೆ ತೆಗೆದುಕೊಂಡ್ರೂ ಆ ರೂಪಾಂತರಿಯಿಂದ ಅಪಾಯ: ICMR ಎಚ್ಚರಿಕೆ

ಐಸಿಎಂಆರ್ ಇದೇ ಮೊದಲ ಬಾರಿಗೆ ಅಧ್ಯಯನವೊಂದನ್ನು ನಡೆಸಿದ್ದು, ಲಸಿಕೆ ಪಡೆದ ನಂತರ ಕೋವಿಡ್‌ ಸೋಂಕು ಪತ್ತೆಯಾಗಿದ್ದ ಹೆಚ್ಚಿನವರಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಕಂಡು ಬಂದಿದೆ ಎಂದು ಹೇಳಿದೆ. ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡ 677 ಜನರ ಬಗ್ಗೆ ಐಸಿಎಂಆರ್ ಅಧ್ಯಯನ ನಡೆಸಿದೆ. ಆಸ್ಪತ್ರೆಗೆ ದಾಖಲಾಗುವುದು ಮತ್ತು ಮರಣದ ಪ್ರಮಾಣವನ್ನು ವ್ಯಾಕ್ಸಿನೇಷನ್‌ ಕಡಿಮೆ ಮಾಡುತ್ತದೆ ಎಂತಲೂ ಹೇಳಿದೆ.

a study conducted by the indian council of medical research icmr on variants responsible for the second wave of covid-19
ಲಸಿಕೆ ತೆಗೆದುಕೊಂಡ್ರೂ ಆ ರೂಪಾಂತರಿಯಿಂದ ಅಪಾಯ..!
author img

By

Published : Jul 16, 2021, 5:35 PM IST

ನವದೆಹಲಿ: ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡ ನಂತರ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಶೇಕಡಾ 86.09 ರಷ್ಟು ಜನರು ಡೆಲ್ಟಾ ರೂಪಾಂತರ ಸೋಂಕಿಗೆ ಒಳಗಾಗಿದ್ದಾರೆ ಎಂದು ಐಸಿಎಂಆರ್‌ ಅಧ್ಯಯನ ಹೇಳಿದೆ.

ಲಸಿಕೆ ಪಡೆದ ಜನರಲ್ಲಿ ಕೋವಿಡ್‌ ಸೋಂಕಿನ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಡೆಸಿದ ಅಧ್ಯಯನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಐಸಿಎಂಆರ್‌ ಅಧ್ಯಯನ ನಡೆಸಿದ್ದು, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದ 677 ಮಂದಿ ಸೋಂಕಿತರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಈ ಮಾದರಿಗಳನ್ನು ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಲಾಗಿದೆ.

ಕೋವಿಡ್‌ ಸೋಂಕಿತ ಒಟ್ಟು 677 ಜನರಲ್ಲಿ 85 ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದರೆ ಪಡೆದರೆ, 592 ಜನರು ಎರಡು ಡೋಸ್‌ಗಳನ್ನು ತೆಗೆದುಕೊಂಡಿದ್ದರು. ಈ ಪೈಕಿ 604 ಜನರಿಗೆ ಕೋವಿಶೀಲ್ಡ್, 71 ಮಂದಿ ಕೋವ್ಯಾಕ್ಸಿನ್‌ ಹಾಗೂ ಇಬ್ಬರಿಗೆ ಚೀನಾದ ಸಿನೊಫಾರ್ಮ್ ಲಸಿಕೆ ನೀಡಲಾಗಿತ್ತು. ಇವರು ಒಟ್ಟು 71 ಪ್ರತಿಶತದಷ್ಟು ರೋಗಲಕ್ಷಣಗಳನ್ನು ಹೊಂದಿದ್ದರು. 29 ಮಂದಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಲಿಲ್ಲ. ಲಸಿಕೆ ಪೆಡಿದ್ದ ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ಡೆಲ್ಟಾ ರೂಪಾಂತರಿ ಕಂಟಕ: ವೈರಸ್​​​ ಜೊತೆ ಬದಲಾಗುತ್ತಿದೆ ರೋಗಲಕ್ಷಣಗಳು..

ಲಸಿಕೆ ಪಡೆದ ಅಧಿಕ ಮಂದಿಯಲ್ಲಿ ಡೆಲ್ಟಾ ರೂಪಾಂತರಿ ವೈರಸ್‌ ಪತ್ತೆಯಾಗಿದೆ. ಶೇ 9.8ರಷ್ಟು ಅಂದರೆ 67 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅವಶ್ಯಕತೆ ಇತ್ತು. ಶೇ 0.4ರಷ್ಟು ಅಂದರೆ ಮೂವರು ಮೃತಪಟ್ಟಿದ್ದಾರೆ. ಹೊಸ ಅಧ್ಯಯನದ ಪ್ರಕಾರದ ಡೆಲ್ಟಾ ಎವೈ 1 ಮತ್ತು ಡೆಲ್ಟಾ ಎವೈ 2 ಎಂಬ ಹೊಸ ರೂಪಾಂತರಿಗಳನ್ನು ಗುರುತಿಸಲಾಗಿದೆ.

ಉತ್ತರ ಪ್ರದೇಶವನ್ನು ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಡೆಲ್ಟಾ ರೂಪಾಂತರಿ ಪರಿಣಾಮ ಹೆಚ್ಚಿದೆ. ಉತ್ತರ ಪ್ರದೇಶದಲ್ಲಿ ಆಲ್ಫಾ ಮತ್ತು ಕಪ್ಪಾ ರೂಪಾಂತರದ ಪರಿಣಾಮ ಹೆಚ್ಚಿದೆ ಎಂದು ಐಸಿಎಂಆರ್‌ ಹೇಳಿದೆ. ಕೋವಿಡ್ ಹರಡುವುದನ್ನು ತಡೆಗಟ್ಟುವಲ್ಲಿ ವ್ಯಾಕ್ಸಿನೇಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪ್ರಸ್ತಾಪಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.