ಅಲಿಗಢ(ಉತ್ತರಪ್ರದೇಶ): ಕುಡಿದ ಮತ್ತಿನಲ್ಲಿದ್ದ ಅನ್ಯಧರ್ಮದ ವಿದ್ಯಾರ್ಥಿಯೊಬ್ಬ ಮತ್ತೊಂದು ಧರ್ಮದ ವಿದ್ಯಾರ್ಥಿಗೆ ಗನ್ ಪಾಯಿಂಟ್ನಲ್ಲಿ "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಲು ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಕೊರಳಲ್ಲಿದ್ದ ಧರ್ಮ ಪ್ರತಿನಿಧಿಸುವ ದಾರವನ್ನೂ ಕಳಚಲು ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ (ಎಎಂಯು) ಶುಕ್ರವಾರ ಈ ಪ್ರಕರಣ ನಡೆದಿದೆ ಎನ್ನಲಾಗ್ತಿದೆ. ಕಾಲೇಜಿನ ಹಾಸ್ಟೆಲ್ ಹಾಲ್ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ ಓದುತ್ತಿರುವ ವಿದ್ಯಾರ್ಥಿ ಇದ್ದ ಸ್ಥಳಕ್ಕೆ ಬಂದ ಅನ್ಯ ಧರ್ಮದ ವಿದ್ಯಾರ್ಥಿ ಗಲಾಟೆ ಶುರು ಮಾಡಿದ್ದಾನೆ. ಕೊರಳಲ್ಲಿದ್ದ ದಾರವನ್ನು ಕಿತ್ತೆಸೆಯಲು ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ.
ಬಂದೂಕು ತೋರಿಸಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲು ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಆ ವಿದ್ಯಾರ್ಥಿಯ ಸಹೋದರಿಗೆ ಹಿಜಾಬ್ ಧರಿಸಲೂ ಸೂಚಿಸಿದ್ದಾನೆ. ಇದನ್ನು ಪ್ರತಿರೋಧಿಸಿದ್ದಕ್ಕೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರು ನೀಡಿದ್ದಾನೆ. ಈ ದೂರು ಆಧರಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: PUCಯಲ್ಲಿ ಟಾಪರ್, ಏರೋನಾಟಿಕಲ್ ಇಂಜಿನಿಯರಿಂಗ್ ಕನಸು: ಕೋಪದಲ್ಲಿ ಅಜ್ಜಿ ಕೊಂದು ಹೋಟೆಲ್ ಸಪ್ಲೈಯರ್ ಆದ ಮೊಮ್ಮಗ