ಹೈದರಾಬಾದ್(ತೆಲಂಗಾಣ): ಐಎಎಸ್ ಅಧಿಕಾರಿ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಅವರ ಮನೆಗೆ ಮಧ್ಯರಾತ್ರಿ ಆಗಂತುಕನೊಬ್ಬ ನುಗ್ಗಿದ ಘಟನೆ ನಡೆದಿದೆ. ಈ ಬಗ್ಗೆ ಮಹಿಳಾ ಅಧಿಕಾರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೊಂದು ಕರಾಳ ರಾತ್ರಿಯಾಗಿದ್ದು, ಸಮಯಪ್ರಜ್ಞೆಯಿಂದ ಬದುಕುಳಿದೆ ಎಂದು ತಿಳಿಸಿದ್ದಾರೆ. ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್ ಇದು ರಾಜ್ಯದ ಆಡಳಿತ ದುರವಸ್ಥೆ. ಮಹಿಳಾ ಐಎಎಸ್ ಅಧಿಕಾರಿಗೇ ರಕ್ಷಣೆ ಇಲ್ಲವಾದರೆ, ಮಹಿಳೆಯರಿಗೆ ರಕ್ಷಣೆ ಸಿಗುತ್ತಾ ಎಂದು ಪ್ರಶ್ನಿಸಿದೆ.
-
Had this most harrowing experience, a night back when an intruder broke into my house. I had the presence of mind to deal and save my life.
— Smita Sabharwal (@SmitaSabharwal) January 22, 2023 " class="align-text-top noRightClick twitterSection" data="
Lessons: no matter how secure you think you are- always check the doors/ locks personally.#Dial100 in emergency
">Had this most harrowing experience, a night back when an intruder broke into my house. I had the presence of mind to deal and save my life.
— Smita Sabharwal (@SmitaSabharwal) January 22, 2023
Lessons: no matter how secure you think you are- always check the doors/ locks personally.#Dial100 in emergencyHad this most harrowing experience, a night back when an intruder broke into my house. I had the presence of mind to deal and save my life.
— Smita Sabharwal (@SmitaSabharwal) January 22, 2023
Lessons: no matter how secure you think you are- always check the doors/ locks personally.#Dial100 in emergency
ಘಟನೆಯ ವಿವರ: ಎರಡು ದಿನಗಳ ಹಿಂದೆ ಇದು ಸಂಭವಿಸಿದೆ. ಉಪತಹಸೀಲ್ದಾರ್ ಆನಂದ್ರೆಡ್ಡಿ (48) ಎಂಬಾತ ಅಧಿಕಾರಣಿ ಸ್ಮಿತಾ ಅವರ ಮನೆಗೆ ಬಂದಿದ್ದಾನೆ. ಕಾವಲು ಸಿಬ್ಬಂದಿಗೆ ಅಧಿಕಾರಿಯನ್ನು ಭೇಟಿಯಾಗಬೇಕು ಎಂದು ಹೇಳಿ ಮನೆಯೊಳಗೆ ಬಂದಿದ್ದಾನೆ. ಮುಂಬಾಗಿಲು ಚಿಲಕ ಹಾಕದೇ ಇದ್ದ ಕಾರಣ ಆತ, ಸೀದಾ ಶಯನಗೃಹಕ್ಕೆ ಧಾವಿಸಿದ್ದಾನೆ. ಬಾಗಿಲು ಬಡಿದಾಗ ಆತಂಕದಿಂದಲೇ ಮಹಿಳಾ ಅಧಿಕಾರಿ ಯಾರೆಂದು ಕೇಳಿದ್ದಾರೆ. ತನ್ನನ್ನು ಉಪ ತಹಶೀಲ್ದಾರ್ ಎಂದು ಪರಿಚಯಿಸಿಕೊಂಡ ಆತ, ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿದ್ದಾನೆ.
ರಾತ್ರಿ 11.30 ರ ಸುಮಾರಿಗೆ ವ್ಯಕ್ತಿಯೊಬ್ಬ ತಮ್ಮ ಮನೆಗೆ ಪೂರ್ವಾನುಮತಿ ಇಲ್ಲದೇ ನುಗ್ಗಿದ್ದು, ಆತಂಕ ಉಂಟು ಮಾಡಿದೆ. ಬಾಗಿಲು ತೆರೆದು ಅಧಿಕಾರಿ ಏರಿದ ಧ್ವನಿಯಲ್ಲೇ ಮಾತನಾಡಿದ್ದಾರೆ. ಯಾರು ನೀವು, ಇಲ್ಲಿಗ್ಯಾಕೆ ಬಂದಿರಿ ಎಂದು ಕೇಳಿದ್ದಾರೆ. ಆತ, ಸಬೂಬು ನೀಡಿದ್ದಾನೆ. ಇದರಿಂದ ಹೆದರಿದ ಅಧಿಕಾರಿ ಜೋರು ಧ್ವನಿಯಲ್ಲಿ ಕಿರುಚಿದಾಗ ಕಾವಲು ಸಿಬ್ಬಂದಿ ಓಡಿಬಂದು ಆತನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಅವರಿಗೆ ಒಪ್ಪಿಸಿದ್ದಾರೆ.
ನಡೆದ ಘಟನೆಯನ್ನು ಅವರು ಟ್ವೀಟ್ನಲ್ಲಿ ಹಂಚಿಕೊಂಡಿದ್ದು, ಮಧ್ಯರಾತ್ರಿಯಲ್ಲಿ ತಮ್ಮ ಮನೆಗೆ ಅತಿಕ್ರಮಣ ಮಾಡಿರುವುದು ತುಂಬಾ ನೋವಿನ ಸಂಗತಿ. ಸಮಯಪ್ರಜ್ಞೆಯಿಂದ ನಡೆದುಕೊಂಡ ಕಾರಣ ಜೀವಂತವಾಗಿ ಉಳಿದುಕೊಂಡೆ. ನಾವು ಎಷ್ಟೇ ಸುರಕ್ಷಿತ ಎಂದು ಭಾವಿಸಿದರೂ, ಬಾಗಿಲು ಮತ್ತು ಬೀಗಗಳನ್ನು ಸರಿಯಾಗಿ ಪರಿಶೀಲಿಸುವ ಪರಿಪಾಠವನ್ನು ನಾವು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ, ತುರ್ತು ಸಂದರ್ಭದಲ್ಲಿ 100 ಸಹಾಯವಾಣಿಗೆ ಕರೆ ಮಾಡಿ ಎಂದು ಸ್ಮಿತಾ ಸಬರ್ವಾಲ್ ಹೇಳಿದ್ದಾರೆ.
-
కేసీఆర్ పాలనలో మినిమమ్ గవర్నెన్స్ మ్యాగ్జిమమ్ పాలిటిక్స్ ఫలితం ఇది.
— Revanth Reddy (@revanth_anumula) January 22, 2023 " class="align-text-top noRightClick twitterSection" data="
సింగరేణి కాలనీలో ఆరేళ్ల పసిబిడ్డకే కాదు… ముఖ్యమంత్రి కార్యాలయంలో పని చేసే మహిళా ఉన్నతాధికారిణికీ భద్రత లేని పాలనలో ఉన్నాం.
ఆడబిడ్డలూ… తస్మాత్ జాగ్రత్త!@TelanganaCMO @hydcitypolice @TelanganaDGP https://t.co/UjrESVzb7G
">కేసీఆర్ పాలనలో మినిమమ్ గవర్నెన్స్ మ్యాగ్జిమమ్ పాలిటిక్స్ ఫలితం ఇది.
— Revanth Reddy (@revanth_anumula) January 22, 2023
సింగరేణి కాలనీలో ఆరేళ్ల పసిబిడ్డకే కాదు… ముఖ్యమంత్రి కార్యాలయంలో పని చేసే మహిళా ఉన్నతాధికారిణికీ భద్రత లేని పాలనలో ఉన్నాం.
ఆడబిడ్డలూ… తస్మాత్ జాగ్రత్త!@TelanganaCMO @hydcitypolice @TelanganaDGP https://t.co/UjrESVzb7Gకేసీఆర్ పాలనలో మినిమమ్ గవర్నెన్స్ మ్యాగ్జిమమ్ పాలిటిక్స్ ఫలితం ఇది.
— Revanth Reddy (@revanth_anumula) January 22, 2023
సింగరేణి కాలనీలో ఆరేళ్ల పసిబిడ్డకే కాదు… ముఖ్యమంత్రి కార్యాలయంలో పని చేసే మహిళా ఉన్నతాధికారిణికీ భద్రత లేని పాలనలో ఉన్నాం.
ఆడబిడ్డలూ… తస్మాత్ జాగ్రత్త!@TelanganaCMO @hydcitypolice @TelanganaDGP https://t.co/UjrESVzb7G
ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದೇ ತೆಲಂಗಾಣ ಮಾದರಿ?: ಮಹಿಳಾ ಅಧಿಕಾರಿಗೆ ಮುಜುಗರ ಉಂಟು ಮಾಡಿದ ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್, ಇದು ತೆಲಂಗಾಣದ ರಾಜ್ಯದ ಪರಿಸ್ಥಿತಿಯಾಗಿದೆ. ರಾಜ್ಯದಲ್ಲಿ ರಾಜಕೀಯ ಗರಿಷ್ಠವಾಗಿದೆ. ಆಡಳಿತ ಕನಿಷ್ಠವಾಗಿದೆ ಎಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರೇವಂತ್ ರೆಡ್ಡಿ, ಮಹಿಳಾ ಅಧಿಕಾರಿ ಸ್ಮಿತಾ ಸಬರ್ವಾಲ್ ಅವರ ಟ್ವೀಟ್ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ಕಾರ್ಯದರ್ಶಿಗೇ ಭದ್ರತೆ ಇಲ್ಲ ಎಂದಾದರೆ, ಉಳಿದವರ ಗತಿ ಏನು?. ಮಹಿಳೆಯರಿಗೆ ರಕ್ಷಣೆ ನೀಡದಿರುವುದೇ ತೆಲಂಗಾಣ ಮಾದರಿಯೇ ಎಂದು ಕುಟುಕಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದೂ ಆರೋಪಿಸಿದ್ದಾರೆ.
ಓದಿ: ಹುಡುಗಿಯರ ಹಾಸ್ಟೆಲ್ಗೆ ನುಗ್ಗಿದ ಖದೀಮ.. ಪರಾರಿಯಾಗುವಾಗ ಬಾವಿಗೆ ಬಿದ್ದು ಫಜೀತಿ - ವಿಡಿಯೋ