ETV Bharat / bharat

ಇಲ್ಲಿ ಮಾತಿಲ್ಲ, ಬರೀ ಮೌನವೇ ಎಲ್ಲ.. ವಾಕ್​, ಶ್ರವಣ ದೋಷವುಳ್ಳವರಿಂದಲೇ ನಡೆಯುತ್ತಿದೆ ಈ ರೆಸ್ಟೋರೆಂಟ್​!

Restaurant workers are deaf and dumb: ತಂದೆ ತಾಯಿಯ ಗೌರವಾರ್ಥ ರೆಸ್ಟೋರೆಂಟ್​ ಸ್ಥಾಪಿಸಿದ ಜಬಲ್​ಪುರದ ಅಕ್ಷಯ್​ ಸೋನಿ. ಹಾಗಾದರೆ ಈ ರೆಸ್ಟೋರೆಂಟ್​ನ ವಿಶೇಷ ಏನು ಬನ್ನಿ ನೋಡಿಕೊಂಡು ಬರೋಣ

A restaurant run by people with speech and hearing impairment in Jabalpur
ವಾಕ್​, ಶ್ರವಣ ದೋಷವುಳ್ಳವರಿಂದಲೇ ನಡೆಯುತ್ತಿದೆ ಈ ರೆಸ್ಟೋರೆಂಟ್​
author img

By ETV Bharat Karnataka Team

Published : Sep 6, 2023, 8:18 PM IST

ಜಬಲ್​ಪುರ (ಮಧ್ಯ ಪ್ರದೇಶ): ಇದೊಂದು ವಿಶೇಷವಾದ ಹಾಗೂ ವಿಭಿನ್ನವಾದ ರೆಸ್ಟೋರೆಂಟ್​​. ಇಲ್ಲಿ ಮಾತೇ ಇಲ್ಲ, ಬರೀ ಮೌನವೇ ಎಲ್ಲ. ಇಲ್ಲಿ ಸನ್ನೆಗಳ ಮೂಲಕ ಎಲ್ಲ ಕೆಲಸಗಳು ನಡೆಯುತ್ತವೆ. ಮಾತುಗಳಿಲ್ಲದೇ ಅಮೌಖಿಕ ಸಂವಹನವನ್ನೇ ಬಳಸಿಕೊಂಡು ನಡೆಯುತ್ತಿದೆ. ಈ ವಿಶಿಷ್ಟವಾದ ರೆಸ್ಟೋರೆಂಟ್​. ಈ ರೆಸ್ಟೋರೆಂಟ್​ ಇರುವುದು ಮಧ್ಯಪ್ರದೇಶದ ಜಬಲ್​ಪುರದಲ್ಲಿ.

ಅಕ್ಷಯ್​ ಸೋನಿ ಎನ್ನುವವರು ಈ ರೆಸ್ಟೋರೆಂಟ್​ ಮಾಲೀಕ. ತಮ್ಮ ಮಾತು ಬಾರದ ಹಾಗೂ ಕಣ್ಣು ಕಾಣದ ಹೆತ್ತವರ ಗೌರವಾರ್ಥವಾಗಿ ಅಕ್ಷಯ್​ ಸೋನಿ ಅವರು ಈ ರೆಸ್ಟೋರೆಂಟ್​ ಅನ್ನು ಪ್ರಾರಂಭಿಸಿದರು. ಇನ್ನೊಂದು ವಿಶೇಷ ಎಂದರೆ ಈ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಲ್ಲ ಸಂಪೂರ್ಣವಾಗಿ ವಾಕ್​ ಹಾಗೂ ಶ್ರವಣದೋಷವುಳ್ಳವರು. ಸಮಾಜದಲ್ಲಿ ಇತಿಹಾಸ ಕಾಲದಿಂದಲೂ ಅಂಚಿನಲ್ಲೇ ಉಳಿದಿರುವ ಇಂತಹವರ ಗೌರವ ಉತ್ತೇಜನಕ್ಕಾಗಿ ಅಕ್ಷಯ್​ ಸೋನಿ ಅವರು ಈ ರೆಸ್ಟೋರೆಂಟ್​ ಅನ್ನು ಸ್ಥಾಪಿಸಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು.

ಕಣ್ಣು ಕಾಣದ ಹಾಗೂ ಮಾತು ಬಾರದ ರಾಕೇಶ್​ ಸೋನಿ ಹಾಗೂ ಜಯವಂತಿ ಸೋನಿ ದಂಪತಿಗೆ ಹುಟ್ಟಿದವರು ಜಬಲ್​ಪುರದ ಅಕ್ಷಯ್​ ಸೋನಿ ಅವರು. ವಾಕ್​ ಹಾಗೂ ಶ್ರವಣ ದೋಷ ಇರುವವರು ತಮ್ಮ ಜೀವನದ ಉದ್ದಕ್ಕೂ ಅನುಭವಿಸಿದ ಅಸಮಾನತೆ, ನೋವನ್ನು ನೋಡುತ್ತಾ ಬೆಳೆದವರು ಅವರು. ಹಾಗಾಗಿ ಇಂಜಿನಿಯರಿಂಗ್​ ಅಧ್ಯಯನವನ್ನು ಪೂರ್ಣಗೊಳಿಸಿ ಕೆಲವು ಸಮಯ ಕಾರ್ಪೋರೇಟ್​ ವಲಯದಲ್ಲಿ ದುಡಿದ ನಂತರ ಅಕ್ಷಯ್​ ಸೋನಿ ಅವರು ವಿಕಲಚೇತನ ಸಮುದಾಯವನ್ನು ಬೆಂಬಲಿಸುವ ಉದ್ದೇಶದಿಂದ ಸಂಸ್ಥೆಯೊಂದನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅಕ್ಷಯ್​ ಅವರು ಕಿವುಡ ಸಮುದಾಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಮಹಾ ಕೌಶಲ್​ ಕಿವುಡ ಸಂಘವನ್ನು ಆರಂಭಿಸಿದರು. ಆದರೆ, ಈಗ ಜಬಲ್​ಪುರದ ಈ ಸಂಸ್ಥೆಯಲ್ಲಿ 1500ಕ್ಕೂ ಹೆಚ್ಚು ವಿಕಲಾಂಗಚೇತನರು ಆಶ್ರಯ ಪಡೆದಿದ್ದಾರೆ.

ರೆಸ್ಟೋರೆಂಟ್​ ಶುರು ಮಾಡಿದ್ದು ಯಾಕೆ ಗೊತ್ತಾ?: ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅಕ್ಷಯ್​ ಕುಮಾರ್​

"ನಾನು ಬಾಲ್ಯದಿಂದಲೂ ನನ್ನ ಹೆತ್ತವರನ್ನು ನೋಡಿದ್ದೇನೆ. ಅವರ ನೋವು ನನಗೆ ಗೊತ್ತಿದೆ. ನನ್ನ ತಂದೆ ತುಂಬಾ ಪ್ರತಿಭಾವಂತರಾಗಿದ್ದರು. ಆದರೆ ಅವರ ಅಂಗವೈಕಲ್ಯ ಅವರನ್ನು ಸವಾಲುಗಳನ್ನು ಎದುರಿಸುವಂತೆ ಮಾಡಿತ್ತು. ಜನರು ಹೇಗೇ ಇರಲಿ, ಅವರು ಗೌರವಯುತ ಜೀವನ ನಡೆಸಬೇಕು ಎಂಬುದು ನನ್ನ ಬಯಕೆ. ಏಕೆಂದರೆ ಅವರೂ ಕೂಡ ಈ ಸಮಾಜದ ಭಾಗ, ಸಾಮಾನ್ಯ ಜನರಿಗಿಂತಲೂ ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಅವರಲ್ಲಿದೆ. ಹಾಗಾಗಿ ಅವರೊಳಗಿನ ಶಕ್ತಿಯ ಬಗ್ಗೆ ಅವರಿಗೇ ಅರಿವು ಮೂಡಿಸುವ ಉದ್ದೇಶದಿಂದ ನಾನು ಈ ರೆಸ್ಟೋರೆಂಟ್​ ಅನ್ನು ಪ್ರಾರಂಭಿಸಿದೆ" ಎಂದು ತಿಳಿಸಿದ್ದಾರೆ.

ಅಕ್ಷಯ್​ ಅವರು ಈ ರೆಸ್ಟೋರೆಂಟ್​ ಸ್ಥಾಪಿಸುವುದಕ್ಕೂ ಮುನ್ನ, ಕಿವಿ ಕೇಳದ ವ್ಯಕ್ತಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ಕೆಲಸವನ್ನೂ ಮಾಡಿದ್ದರು. ಆದರೆ ಅಲ್ಲಿ ಅವರಿಗಿರುವ ಸೀಮಿತ ಅವಕಾಶಗಳ ಬಗ್ಗೆ ಅಕ್ಷಯ್​ ಅವರು ನಿರಾಶೆಗೊಂಡಿದ್ದರು. ಮಾತು ಬಾರದ ಹಾಗೂ ಕಿವಿ ಕೇಳದ ವ್ಯಕ್ತಿಗಳು ಗೌರವಯುತ ಕೆಲಸಗಳಿಗಾಗಿ ಹರಸಾಹಸ ಪಡಬೇಕಾಗಿತ್ತು. ಇದಲ್ಲದೇ ಅಕ್ಷಯ್​ ಅವರ ತಂದೆ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಅವರ ಸುತ್ತಲಿನವರಿಂದ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಅಕ್ಷಯ್​ ಅವರಿಗೆ ಅರಿವಿತ್ತು. ಈ ಅನುಭವಗಳು, ಹೊರ ಸಮಾಜದಲ್ಲಿ ವಿಕಲಾಂಗಚೇತನರು ಪಡುತ್ತಿರುವ ಕಷ್ಟಗಳು ಎರಡೂ ಅಕ್ಷಯ್​ ಅವರು ಹೊಸ ಸಂಕಲ್ಪವೊಂದನ್ನು ಮಾಡುವಂತೆ ಮಾಡಿತ್ತು.

ಗಟ್ಟಿಯಾದ ಸಂಕಲ್ಪವೊಂದನ್ನು ಮಾಡಿದ ಅಕ್ಷಯ್​ ಅವರು, ಒಂಬತ್ತು ವ್ಯಕ್ತಿಗಳ ತಂಡವೊಂದನ್ನು ಒಟ್ಟುಗೂಡಿಸಿ, ಜಬಲ್​ಪುರದ ರಾನಿಟಲ್​ ಚೌಕ್​ನಲ್ಲಿ 'ಪೋಹಾ ಮತ್ತು ಶೇಡ್ಸ್​' ಎನ್ನುವ ರೆಸ್ಟೋರೆಂಟ್​ ಒಂದನ್ನು ಸ್ಥಾಪಿಸಿದರು. ಇಲ್ಲಿ ಸನ್ನೆಗಳ ಮೂಲಕ ಎಲ್ಲಾ ಕೆಲಸಗಳು ನಡೆಯುತ್ತವೆ. ಇಲ್ಲಿ ಮಾತು ಬಾರದ, ಕಿವಿ ಕೇಳದ ಖೇಮ್​ಕರನ್​ ಚಹಾ ತಯಾರಿಸುತ್ತಾರೆ, ಹಿನಾ ಫಾತಿಮಾ ಅಡುಗೆ ಮಾಡುತ್ತಾರೆ.

ಏನೆಲ್ಲ ವಿಶೇಷ ಈ ರೆಸ್ಟೋರೆಂಟ್​ನಲ್ಲಿ: ಪೋಹಾ ಎಂದರೆ ಭಾರತದ ಸಾಂಪ್ರದಾಯಿಕ ಖಾದ್ಯ, ಇದು ಈ ರೆಸ್ಟೋರೆಂಟ್​ನ ಮೆನುವಿನಲ್ಲಿ ಪ್ರಮುಖ ಐಟಂ ಕೂಡ ಹೌದು. ಇದಷ್ಟೇ ಅಲ್ಲದೆ ಅಕ್ಷಯ್​ ಅವರು ಪಕೃತಿ ರಕ್ಷಣೆ ಬಗ್ಗೆಯೂ ಚಿಂತಿಸಿ, ರೆಸ್ಟೋರೆಂಟ್​ನಲ್ಲಿ ಪ್ಲಾಸ್ಟಿಕ್​ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆಹಾರ ಸರ್ವ್​ ಮಾಡಲು ಲೋಹದ ತಟ್ಟೆಗಳು ಹಾಗೂ ಬಿದಿರಿನ ಟ್ರೇಗಳನ್ನು ಬಳಸಲಾಗುತ್ತದೆ.

ಅತ್ಯುತ್ತಮ ಉದ್ದೇಶದಿಂದ ಈ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿರುವ ಅಕ್ಷಯ್​ ಅವರಿಗೆ ಇದನ್ನು ಸಹಕಾರಿ ಸಂಘವಾಗಿ ಪರಿವರ್ತಿಸುವ ಗುರಿ ಹೊಂದಿದ್ದಾರೆ. ಯಾಕೆಂದರೆ ಈಗ ರೆಸ್ಟೋರೆಂಟ್​ನ ಎಲ್ಲಾ ಸಿಬ್ಬಂದಿ ಸಂಬಳ ಪಡೆಯುತ್ತಾರೆ. ಇದು ಸಹಕಾರಿ ಕ್ಷೆತ್ರವಾಗಿ ಪರಿವರ್ತನೆಗೊಂಡರೆ, ಆಗ ಕಾಫಿ ಹೌಸ್​ಗಳಂತೆಯೇ ಲಾಭ ಹಂಚಿಕೆ ಮಾದರಿಯನ್ನೂ ಅನುಸರಿಸಬಹುದು. ಇದು ಇನ್ನೂ ಹೆಚ್ಚು ಶ್ರವಣ ಹಾಗೂ ವಾಕ್​ ದೋಷವುಳ್ಳ ವ್ಯಕ್ತಿಗಳಿಗೆ ಸಹಾಯವಾಗಬಹುದು. ಉದ್ಯೋಗ ಹುಡುಕಲು, ಇನ್ನೂ ಹೆಚ್ಚು ಅವಕಾಶಗಳನ್ನು ಸೃಷ್ಟಿಸಲು ಅನುವು ಮಾಡಿಕೊಡಬಹುದು ಎಂಬುದು ಇವರ ಉದ್ದೇಶ.

ಈ ರೀತಿಯ ರೆಸ್ಟೋರೆಂಟ್ ಇದೇ ಮೊದಲೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್​ ಅವರು,

"ಕೆಲವು ರೆಸ್ಟೋರೆಂಟ್​ಗಳಲ್ಲಿ ದೈಹಿಕ ವಿಕಲಚೇತನರು ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ. ಆದರೆ ನಮ್ಮ ರೆಸ್ಟೋರೆಂಟ್​ನಲ್ಲಿ ಎಲ್ಲವನ್ನೂ ವಿಕಲಾಂಗಚೇತನರೇ ಮಾಡುತ್ತಾರೆ. ಬಿಲ್​ ಸಿದ್ಧಪಡಿಸುವುದರಿಂದ ಹಿಡಿದು, ಟೇಬಲ್​ಗೆ ಸರ್ವ್​ ಮಾಡುವವರೆಗೆ ಇಡೀ ಹೋಟೆಲ್​ನ ಕೆಲಸಗಳನ್ನು ಶ್ರವಣ ಹಾಗೂ ವಾಕ್​ದೋಷವುಳ್ಳವರೇ ನಿರ್ವಹಿಸುತ್ತಾರೆ. ಈ ರೀತಿ ಇದೇ ಮೊದಲು ಎಂದು ನಾನು ಭಾವಿಸುತ್ತೇನೆ." ಎಂದರು.

ಸರ್ಕಾರದ ಯಾವುದೇ ಸಹಾಯವಿಲ್ಲದೆ ಅಕ್ಷಯ್​ ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ವಿಕಲಾಂಗಚೇತನರ ಸ್ವಾವಲಂಬಿ ಜೀವನಕ್ಕೆ ಸಾಥ್​ ನೀಡುತ್ತಿದ್ದಾರೆ. 'ಜಬಲ್​ಪುರದಲ್ಲಿ 300ಕ್ಕೂ ಹೆಚ್ಚು ಶ್ರವಣ ಹಾಗೂ ವಾಕ್​ ದೋಷವಿರುವ ಜನರಿದ್ದಾರೆ. ಅವರೆಲ್ಲರನ್ನು ಒಂದೆ ಮಾಳಿಗೆಯಡಿ ತರುವ ಕನಸು ನನ್ನದು' ಎನ್ನುತ್ತಾರೆ ಅಕ್ಷಯ್​.

ಇದನ್ನೂ ಓದಿ : ಡಿ.ಗುಕೇಶ್ ಭಾರತದ ಅಗ್ರ ಶ್ರೇಯಾಂಕಿತ ಚೆಸ್‌ ಆಟಗಾರ: ವಿಶ್ವನಾಥನ್​ ಆನಂದ್ ಹಿಂದಿಕ್ಕಿ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.