ಚೆನ್ನೈ (ತಮಿಳುನಾಡು): ನೆರೆಯ ತಮಿಳುನಾಡಿನ ಪ್ರಸಿದ್ಧ ಪ್ರವಾಸಿತಾಣ ಕನ್ಯಾಕುಮಾರಿಯಲ್ಲಿ ಇಂದು ವಿಸ್ಮಯ ನಡೆಯಲಿದೆ. ಒಂದೇ ಸ್ಥಳದಲ್ಲಿ ನಿಂತು ಏಕಕಾಲಕ್ಕೆ ಸೂರ್ಯಾಸ್ತ ಮತ್ತು ಚಂದ್ರೋದಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಒಂದೇ ಸಮಯಕ್ಕೆ ಈ ವಿದ್ಯಮಾನ ನಡೆಯುವುದು ಅತಿ ವಿರಳ. ಪ್ರತಿ ತಿಂಗಳು ಹುಣ್ಣಿಮೆ ಬಂದರೂ ಒಂದೇ ವೇಳೆಯಲ್ಲಿ ಸೂರ್ಯ ಅಸ್ತಮಿಸುವುದಿಲ್ಲ ಮತ್ತು ಅದೇ ಸಮಯಕ್ಕೆ ಚಂದ್ರನೂ ಉದಯಿಸಲಾರ. ಆದರೆ, ಈ ವಿಸ್ಮಯವು ತಮಿಳಿನ ಚಿತಿರೈ ತಿಂಗಳಲ್ಲಿ ಮಾತ್ರ ಸಂಭವಿಸುತ್ತದೆ.
ಓದಿ: ಏನಿದು ವಿಸ್ಮಯ : ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯ ಬೀಚ್ಗೆ ಬಂದ ಆಲಿವ್ ರಿಡ್ಲೆ ಆಮೆಗಳು
ಕನ್ಯಾಕುಮಾರಿಯು ವಿಶಿಷ್ಟವಾದ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಭಾರತದ ಬೇರಾವುದೇ ಭಾಗದಲ್ಲೂ ಇಂತಹ ತಾಣವಿಲ್ಲ. ಇಲ್ಲಿ ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರವು ಸಂಗಮಿಸುತ್ತವೆ. ಇಲ್ಲಿಯ ಸಮುದ್ರದ ತೀರದಿಂದ ಸೂರ್ಯಾಸ್ತ ಮತ್ತು ಚಂದ್ರೋದಯವನ್ನು ಒಂದೇ ಸಮಯದಲ್ಲಿ ಕಣ್ತುಂಬಿಕೊಳ್ಳಬಹುದು. ಕನ್ಯಾಕುಮಾರಿ ಜಿಲ್ಲಾ ಪೊಲೀಸರು ಸಹ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.