ಶ್ರೀನಗರ(ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು- ಕಾಶ್ಮೀರದಲ್ಲಿ ಬಾಲ ಬಿಚ್ಚಿರುವ ಉಗ್ರರು ಪೊಲೀಸ್ ಪೇದೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಅವರು ಹುತಾತ್ಮರಾಗಿದ್ದು, ಏಳು ವರ್ಷದ ಮಗಳು ಗಾಯಗೊಂಡಿದ್ದಾಳೆ. ಹುತಾತ್ಮ ಸಿಬ್ಬಂದಿಯನ್ನ ಸೈಫುಲ್ಲಾ ಖಾದ್ರಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿ ಉಗ್ರರಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆ.
-
The injured police personnel succumbed to his injuries. We pay our rich tributes to the martyr and standby the family at this critical juncture: J&K Police
— ANI (@ANI) May 24, 2022 " class="align-text-top noRightClick twitterSection" data="
">The injured police personnel succumbed to his injuries. We pay our rich tributes to the martyr and standby the family at this critical juncture: J&K Police
— ANI (@ANI) May 24, 2022The injured police personnel succumbed to his injuries. We pay our rich tributes to the martyr and standby the family at this critical juncture: J&K Police
— ANI (@ANI) May 24, 2022
ಘಟನೆಯಲ್ಲಿ ಗಾಯಗೊಂಡಿರುವ 7 ವರ್ಷದ ಮಗಳಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ಲಷ್ಕರ್ - ಇ - ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದ ಐವರು ಹೈಬ್ರೀಡ್ ಉಗ್ರರನ್ನ ಬಂಧನ ಮಾಡಿರುವುದಾಗಿ ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.
ಇದನ್ನೂ ಓದಿ: ತಹಶೀಲ್ದಾರ್ ಕಚೇರಿ ಮೇಲೆ ಉಗ್ರರ ದಾಳಿ: ಕಾಶ್ಮೀರಿ ಪಂಡಿತ ನೌಕರ ಸಾವು
ಕಳೆದ ಕೆಲ ದಿನಗಳ ಹಿಂದೆ ಬದ್ಗಾಮ್ ಜಿಲ್ಲೆಯ ಚದೂರ್ ಪ್ರದೇಶದಲ್ಲಿ ತಹಶೀಲ್ದಾರ್ ಕಚೇರಿ ನೌಕರನ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು, ಓರ್ವ ನೌಕರನ ಸಾವಿಗೆ ಕಾರಣವಾಗಿದ್ದರು. ಈ ಪ್ರಕರಣ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿತ್ತು.