ETV Bharat / bharat

ದೇವೇಂದ್ರ ಫಡ್ನವೀಸ್ ಮನೆ ಮುಂದೆ ಬಾಂಬ್ ಇಡುವುದಾಗಿ ಬೆದರಿಕೆ ಕರೆ: ಆರೋಪಿ ಅರೆಸ್ಟ್

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾಗ್ಪುರದ ಮನೆ ಮುಂದೆ ಬಾಂಬ್ ಇಡುವುದಾಗಿ ಫೋನ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Devendra Fadnavis
ದೇವೇಂದ್ರ ಫಡ್ನವೀಸ್
author img

By

Published : Mar 28, 2023, 9:55 PM IST

ಮಹಾರಾಷ್ಟ್ರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿ ಕಲ್ಲು ತೂರಾಟ ನಡೆಸಿರುವ ಪ್ರಕರಣ ಮಧ್ಯೆಯೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಾಗ್ಪುರದ ಮನೆ ಮುಂದೆ ಬಾಂಬ್ ಇಡುವುದಾಗಿ ಫೋನ್ ಕರೆಯೊಂದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಎರಡು ಗಂಟೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ದೊರೆತಿರುವ ಮಾಹಿತಿಯ ಪ್ರಕಾರ, ಮಧ್ಯರಾತ್ರಿ 2 ಗಂಟೆಗೆ ವ್ಯಕ್ತಿಯೊಬ್ಬರು ನಾಗ್ಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ದೇವೇಂದ್ರ ಫಡ್ನವೀಸ್ ಅವರ ಮನೆಯ ಹೊರಗೆ ಬಾಂಬ್ ಇಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದರು. ಆ ಬಳಿಕ ಪೊಲೀಸರು ತಕ್ಷಣ ಬಾಂಬ್ ಸ್ಕ್ವಾಡ್ ಅನ್ನು ಫಡ್ನವೀಸ್ ಮನೆಗೆ ಕರೆದೊಯ್ದು ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕರೆ ಮಾಡಿದವನನ್ನೂ ಬಂಧಿಸಲಾಗಿದೆ. ಕರೆ ಮಾಡಿದವರು ನಾಗ್ಪುರದ ಕನ್ಹಾನ್ ಪ್ರದೇಶದ ನಿವಾಸಿಯಾಗಿದ್ದಾರೆ. ಅವರ ಮನೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಕರೆ ಮಾಡಿ ಕೋಪದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ನಿತಿನ್​ ಗಡ್ಕರಿಗೂ ಬೆದರಿಕೆ ಕರೆ: ಇತ್ತೀಚೆಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಹಾಗೂ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದ ಬೆಳಗಾವಿಯ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಇಲಾಖೆಗೆ ಸತತ ಮೂರು ಬಾರಿ ಬೆದರಿಕೆ ಕರೆಗಳು ಬಂದಿದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರ ತಂಡ ಬೆಳಗಾವಿಗೆ ಬಂದು ಹಿಂಡಲಗಾ ಜೈಲಿನಲ್ಲಿ ತನಿಖೆ ನಡೆಸಿದ್ದರು. ಇದೀಗ ನಾಗ್ಪುರ ಪೊಲೀಸ್ ತಂಡ ಬೆಳಗಾವಿಗೆ ತೆರಳಿ ಜೈಲಿನಿದಲ್ಲಿದ್ದ ಆರೋಪಿ ಜಯೇಶ್ ಪೂಜಾರಿಯನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಆರೋಪಿ ಜಯೇಶ್​ ಪೂಜಾರಿ ಇತರ ಕೆಲವು ಆರೋಪಗಳಿಗೆ ಸಂಬಂಧಿಸಿ ಶಿಕ್ಷೆಗೊಳಗಾಗಿ ಇಲ್ಲಿ ಜೈಲಿನಲ್ಲಿದ್ದನು.

ಕಳೆದ ವಾರ ಮಾರ್ಚ್​ 21ರಂದು ನಾಗ್ಪುರದ ಆರೆಂಜ್​ ಸಿಟಿ ಆಸ್ಪತ್ರೆ ಬಳಿ ಇರುವ ನಿತಿನ್​ ಗಡ್ಕರಿ ಕಚೇರಿಗೆ ಜಯೇಶ್​ ಕಾಂತ ಅಲಿಯಾಸ್​ ಜಯೇಶ್​ ಪೂಜಾರಿ ಹೆಸರಿನಲ್ಲಿ ಮೂರು ಕರೆಗಳು ಬಂದಿದ್ದು, ಕರೆಯಲ್ಲಿ ಈತ ತನ್ನ ಹೆಸರು ಹೇಳಿಕೊಂಡಿದ್ದು, 10 ಕೋಟಿ ರೂ. ಹಣಕ್ಕೆ ಬೇಡಿಕೆಯಿಡುವುದರ ಜೊತೆಗೆ ಹಣ ನೀಡುವಲ್ಲಿ ವಿಫಲವಾದಲ್ಲಿ ಪ್ರಾಣಕ್ಕೆ ಅಪಾಯ ಎನ್ನುವ ರೀತಿಯಲ್ಲಿ ಜೀವ ಬೆದರಿಕೆ ಹಾಕಿದ್ದನು. ಈ ಹಿನ್ನೆಲೆ ಪ್ರಕರಣದ ಮರುದಿನವೇ ನಾಗ್ಪುರ ಪೊಲೀಸರು ಬೆಳಗಾವಿಗೆ ಆಗಮಿಸಿ ಹಿಂಡಲಗಾ ಜೈಲಿನಲ್ಲಿರುವ ಜಯೇಶ್​ ಪೂಜಾರಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಕೈದಿಯಿಂದ ಎರಡು ಮೊಬೈಲ್ ಫೋನ್​ಗಳು ಹಾಗೂ ಸಿಮ್​ ಕಾರ್ಡ್​ಗಳನ್ನು ವಶಕ್ಕೆ ಪಡೆದಿದ್ದರು. ಗಡ್ಕರಿಗೆ ಬೆದರಿಕೆ ಹಾಕಲು ಇವುಗಳನ್ನೇ ಬಳಸಲಾಗಿತ್ತು ಎಂದು ವರದಿಯಾಗಿತ್ತು.

ಇದನ್ನೂ ಓದಿ: ತನ್ನ ನಾಲಿಗೆ ಕತ್ತರಿಸಿ ಫತೇಪುರದ ದೇವಿಗೆ ಅರ್ಪಿಸಿದ ಭಕ್ತ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.