ಗುವಾಹಟಿ (ಅಸ್ಸೋಂ): ಕೋವಿಡ್-19 ಸಂಕಷ್ಟದ ಮಧ್ಯೆ, ಮಹಿಳೆಯೊಬ್ಬರು ನವಜಾತ ಶಿಶುಗಳಿಗೆ ಸ್ತನ್ಯಪಾನ ಮಾಡಲು ಹೆಜ್ಜೆ ಇಟ್ಟಿದ್ದಾರೆ. ಅವರು ವೈರಸ್‌ನಿಂದ ತಾಯಂದಿರನ್ನು ಕಳೆದುಕೊಂಡಿರುವ ಮಕ್ಕಳಿಗೆ ಅಥವಾ ಮಾರಕ ವೈರಸ್ನೊಂದಿಗೆ ಹೋರಾಡುತ್ತಿರುವ ತಾಯಂದಿರ ಮಕ್ಕಳಿಗೆ ಸ್ತನ್ಯಪಾನ ಮಾಡಲು ನಿರ್ಧರಿಸಿದ್ದಾರೆ.
ಎರಡು ತಿಂಗಳ ಮಗುವಿನ ತಾಯಿಯಾಗಿರುವ ರೋನಿತಾ ಕೃಷ್ಣ ಶರ್ಮಾ ಅವರು ಪ್ರಸ್ತುತ ಗುವಾಹಟಿಯಲ್ಲಿ ವಾಸಿಸುತ್ತಿದ್ದು, ಅಗತ್ಯವಿರುವ ಮಕ್ಕಳಿಗೆ ಸ್ತನ್ಯಪಾನ ಮಾಡುತ್ತೇನೆ ಎಂದಿದ್ದಾರೆ.
"ನಾನು ಗುವಾಹಟಿಯಲ್ಲಿ ವಾಸಿಸುತ್ತಿರುವುದರಿಂದ, ಇಲ್ಲಿ ಅಗತ್ಯವಿರುವ ಮಕ್ಕಳಿಗೆ ಎದೆ ಹಾಲು ಬೇಕಾದರೆ ನಾನು ಸ್ತನ್ಯಪಾನ ಮಾಡಲು ತಯಾರಿದ್ದೇನೆ." ಎಂದು ಟ್ವೀಟ್ ಮೂಲಕ ಅವರು ತಿಳಿಸಿದ್ದಾರೆ.
ಮುಂಬೈಯಲ್ಲಿ ಟ್ಯಾಲೆಂಟ್ ಮ್ಯಾನೇಜರ್ ಆಗಿರುವ ರೊನಿತಾ ಮಾರ್ಚ್ 10ರಂದು ಮಗುವಿಗೆ ಜನ್ಮ ನೀಡಿದ್ದು, ಆ ಸಂದರ್ಭದಲ್ಲಿ ಅಸ್ಸೋಂನಲ್ಲಿರುವ ತನ್ನ ಮನೆಗೆ ಬಂದಿದ್ದಾರೆ.
ಅವರು ಹೆಚ್ಚಿನ ಮಹಿಳೆಯರನ್ನು ಈ ಕಾರ್ಯದಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ.