ಮುಜಾಫರ್ಪುರ: 14 ವರ್ಷದ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಬೋಚನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ, ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಪಕ್ಕದ ಹೊಲಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆ ಮೂರ್ಛೆ ಹೋಗುವವರೆಗೂ ಅಂದ್ರೆ ಸುಮಾರು ಐದು ಗಂಟೆಗಳ ಕಾಲ ಬಾಲಕಿಯೊಂದಿಗೆ ಅಮಾನುಷವಾಗಿ ನಡೆದುಕೊಂಡರು ಎಂದು ಸಂತ್ರಸ್ತೆ ದೂರಿನಲ್ಲಿ ನಮೂದಿಸಿದ್ದಾರೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಕೆ ಮೇಲೆ ಅತ್ಯಾಚಾರ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾಲಕಿ ಗಂಟೆಗಟ್ಟಲೆ ನಾಪತ್ತೆಯಾಗಿದ್ದರಿಂದ ಆಕೆಯ ಕುಟುಂಬ ಸದಸ್ಯರು ಹುಡುಕಲು ಪ್ರಾರಂಭಿಸಿದರು. ಬಾಲಕಿ ಹೊಲವೊಂದರಲ್ಲಿ ಪ್ರಜ್ಞಾಹೀನಳ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಆಕೆ ತನ್ನ ತಾಯಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಶೋಧ ನಡೆಯುತ್ತಿದೆ ಎಂದು ಮುಜಾಪುರ್ಫುರ್ ಮಹಿಳಾ ಪೊಲೀಸ್ ಠಾಣೆ ಉಸ್ತುವಾರಿ ರಾಣಿ ಕುಮಾರಿ ತಿಳಿಸಿದ್ದಾರೆ.