ETV Bharat / bharat

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ 'ಐಎನ್​​ಡಿಐಎ' ಮೈತ್ರಿಕೂಟ ನಾಯಕರ ಸಭೆ.. ಮುಂಬರುವ ಚುನಾವಣೆ ಕುರಿತು ಚರ್ಚೆ

author img

By ETV Bharat Karnataka Team

Published : Sep 5, 2023, 10:51 PM IST

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಐಎನ್​​ಡಿಐಎ ಪಕ್ಷದ ನಾಯಕರ ಸಭೆ ನಡೆದಿದೆ. ಇಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ತಂತ್ರದ ಬಗ್ಗೆ ಚರ್ಚಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ 'ಐಎನ್​​ಡಿಐಎ' ಮೈತ್ರಿಕೂಟ ನಾಯಕರ ಸಭೆ

ನವದೆಹಲಿ : ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಎಎನ್​​ಡಿಐಎ ಮೈತ್ರಿಕೂಟದ ನಾಯಕರು ಸಭೆ ನಡೆಸಿದ್ದಾರೆ. ವಿರೋಧಪಕ್ಷದ ನಾಯಕರ ಒಕ್ಕೂಟವಾದ 'ಇಂಡಿಯಾ' ( ಇಂಡಿಯನ್​ ನ್ಯಾಷನಲ್​ ಡೆವಲಪ್​ಮೆಂಟ್​ ಇನ್​ಕ್ಲ್ಯೂಸಿವ್​ ಅಲೆಯನ್ಸ್​) ನಾಯಕರು ಇಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ತಂತ್ರಗಳ ಬಗ್ಗೆ ನಾಯಕರು ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂಬರುವ ಲೋಕಸಭೆ ಚುನಾವಣೆಯ ಬಗ್ಗೆಯೂ ಚರ್ಚಿಸಿದ್ದಾರೆ ಎಂಬುದು ತಿಳಿದುಬಂದಿದೆ.

  • #WATCH | A meeting of Floor leaders of the INDIA alliance's parties is underway at the residence of Congress president and LoP in Rajya Sabha Mallikarjun Kharge, in Delhi

    (Source: AICC) pic.twitter.com/MGLjWhv1S9

    — ANI (@ANI) September 5, 2023 " class="align-text-top noRightClick twitterSection" data=" ">

ವಿರೋಧಪಕ್ಷದ ನಾಯಕರು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ತಮ್ಮ ಮೂರನೇ ಸಭೆ ನಡೆಸಿದರು. ಅಲ್ಲಿ ಅವರು ಮುಂಬರುವ 2024ರ ಲೋಕಸಭೆಯ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಣಯ ಕೈಗೊಂಡಿದ್ದರು. ಮೊದಲ ಸಭೆ ಜೂನ್ 23ರಂದು ಪಾಟ್ನಾದಲ್ಲಿ ನಡೆದಿತ್ತು. ಅದರಂತೆ ಜುಲೈ 17-18 ರಂದು ಬೆಂಗಳೂರಿನಲ್ಲಿ ಎರಡನೆ ಮೀಟಿಂಗ್​ ನಡೆದಿತ್ತು.

  • #WATCH | DMK MPs TR Baalu and Tiruchi Siva speak to the media after a meeting of the Floor leaders of INDIA alliance, in Delhi.

    On reference to 'Bharat' in G20 Summit invitation cards, TR Baalu says, "...We have discussed the matter. They are taking up each and every matter… pic.twitter.com/DVRnxg2v7j

ಈ ಬಗ್ಗೆ ಕಾಂಗ್ರೆಸ್​ ಸಂಸದ ಸಯ್ಯದ್​ ನಸೀರ್​ ಹುಸೇನ್​​ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಚರ್ಚೆ 5 ದಿನದ ವಿಶೇಷ ಅಧಿವೇಶನದ ಸುತ್ತ ನಡೆಯಲಿದೆ. ನಮ್ಮ ಸಮಸ್ಯೆಗಳು ಏನು?. ಜನರ ಸಮಸ್ಯೆಗಳು ಏನು? ಇವತ್ತು ದೇಶ ಯಾವ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಾವು ಪಟ್ಟಿಮಾಡಿದ್ದೇವೆ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಒಕ್ಕೂಟದ ನಾಯಕರು ಚರ್ಚೆ ನಡೆಸಿದ್ದೇವೆ. ಮುಂದಿನ ಐದು ದಿನದ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ನಾವು ಪ್ರಶ್ನೆಗಳನ್ನು ಎತ್ತಲಿದ್ದೇವೆ ಎಂದು ತಿಳಿಸಿದ್ದಾರೆ.

  • #WATCH | After the INDIA alliance's meeting at the residence of Congress chief Mallikarjun Kharge, Congress MP Pramod Tiwari says, "...Have you ever seen such a government which does not have a dialogue with the opposition?.. I want to know the topic of this special session. Why… pic.twitter.com/JwLUntoiPX

ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಳೆ ಮುಖಗಳನ್ನು ಬಿಟ್ಟು, ಹೊಸ ಮುಖಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಸೇರಿಸಿದ್ದಾರೆ. ಈ ವರ್ಷ ಜರುಗುವ ವಿಧಾನಸಭಾ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಚುನಾವಣಾ ಸಮಿತಿಗೆ 16 ಸದಸ್ಯರನ್ನು ನೇಮಿಸಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳ ಪ್ರಮುಖ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಂಬಿಕಾ ಸೋನಿ, ಅಧೀರ್ ರಾಜನ್ ಚೌಧರಿ, ಸಲ್ಮಾನ್ ಖುರ್ಷಿದ್, ಮಧುಸೂದನ್ ಮಿಸ್ತ್ರಿ, ಎನ್ ಉತ್ತಮ್ ಕುಮಾರ್ ರೆಡ್ಡಿ, ಟಿಎಸ್ ಸಿಂಗ್ ಇದ್ದಾರೆ. ದೇವು, ಕೆ ಜೆ ಜಾರ್ಜ್, ಪ್ರೀತಮ್ ಸಿಂಗ್, ಮೊಹಮ್ಮದ್ ಜಾವೇದ್, ಅಮೀ ಯಾಜ್ನಿಕ್, ಪಿಎಲ್ ಪುನಿಯಾ, ಓಂಕಾರ್ ಮಾರ್ಕಮ್, ಕೆ ಸಿ ವೇಣುಗೋಪಾಲ್ ಇರಲಿದ್ದಾರೆ.

ಹೊಸ ಮುಖಗಳೊಂದಿಗೆ ಉತ್ತರಾಖಂಡದ ಮಾಜಿ ಕಾಂಗ್ರೆಸ್​ ಮುಖಂಡ ಪ್ರೀತಮ್ ಸಿಂಗ್​, ಪಶ್ಚಿಮ ಬಂಗಾಳದ ಅಧೀರ್​ ರಾಜನ್​ ಚೌದರಿ, ಬಿಹಾರದ ಸಂಸದ ಮಹಮ್ಮದ್​ ಜಾವೇದ್​ ಮತ್ತು ಗುಜರಾತ್ ಸಂಸದ ಅಮೀ ಯಜ್ನಿಕ್​, ಉತ್ತರ ಪ್ರದೇಶದ ಮಾಜಿ ಸಂಸದ ಪಿ ಎಲ್​ ಪುನಿಯಾ ಮತ್ತು ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ​ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಮಾಜಿ ಸದಸ್ಯ ಮಧುಸೂಧನ್​ ಮಿಸ್ಟ್ರಿ, ಮತ್ತು ಲೋಕಸಭಾ ಸಂಸದ ಉತ್ತಮ್ ಕುಮಾರ್ ರೆಡ್ಡಿ ಕೂಡಾ ಈ ಸಮಿತಿಯಲ್ಲಿ ಇದ್ದಾರೆ.

ಇದನ್ನೂ ಓದಿ: 13 ಸದಸ್ಯರ 'ಇಂಡಿಯಾ' ಸಮನ್ವಯ ಸಮಿತಿ ರಚನೆ: ಲೋಕಸಭೆಗೆ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.