ETV Bharat / bharat

ಸಾಲದ ಆ್ಯಪ್​ ಕಿರುಕುಳ: ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ - A married woman committed forced death due to the harassment of loan app collection agent

ಸಾಲ ತೀರಿಸಿ ಇಲ್ಲವಾದರೆ ನಿಮ್ಮ ಫೋಟೋವನ್ನು ನಗ್ನವಾಗಿ ಎಡಿಟ್​ ಮಾಡಿ, ಅದನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸುತ್ತೇವೆ ಎಂದು ಆ್ಯಪ್​ ಕಡೆಯಿಂದ ಮಹಿಳೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಸಾಲದ ಆ್ಯಪ್​ ಕಿರುಕುಳ
ಸಾಲದ ಆ್ಯಪ್​ ಕಿರುಕುಳ
author img

By

Published : Jul 12, 2022, 3:40 PM IST

Updated : Jul 12, 2022, 4:40 PM IST

ಗುಂಟೂರು(ಆಂಧ್ರ) : ಸಾಲದ ಆ್ಯಪ್ ಕಿರುಕುಳ ತಾರಕಕ್ಕೆ ಏರುತ್ತಿದೆ ಎನ್ನಬಹುದು, ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಇದಕ್ಕೆ ಬಲಿಯಾಗುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಮಹಿಳೆ ಸಾವಿಗೀಡಾಗಿದ್ದಾರೆ.

ಕಲೆಕ್ಷನ್ ಏಜೆಂಟ್‌ಗಳ ಕಿರುಕುಳದಿಂದ ವಿವಾಹಿತ ಮಹಿಳೆ ಸಾವಿಗೆ ಶರಣಾಗಿದ್ದಾರೆ. ಗುಂಟೂರು ಜಿಲ್ಲೆಯ ಚೈನಾ ಕಾಕನಿಯದ ವಿವಾಹಿತ ಮಹಿಳೆ ಪ್ರತ್ಯೂಷಾ ಎಂಬುವರು ಎಕ್ಸ್‌ಎಂ ಆ್ಯಪ್‌ನಲ್ಲಿ 20 ಸಾವಿರ ಸಾಲ ಪಡೆದು ಅದರಲ್ಲಿ ರೂ.12 ಸಾವಿರ ಪಾವತಿಸಿದ್ದಾರೆ. ಈ ಬಗ್ಗೆ ಸಾಯುವ ಮುನ್ನ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.

ಸೋಮವಾರ ಬೆಳಗ್ಗೆ 7 ಗಂಟೆಯೊಳಗೆ ಉಳಿದ ಹಣವನ್ನು ಪಾವತಿಸದಿದ್ದರೆ ಎಡಿಟ್​ ಮಾಡಲಾದ ನಗ್ನ ಫೋಟೋಗಳನ್ನು ಫೋನ್‌ನ ಸಂಪರ್ಕ ಪಟ್ಟಿಯಲ್ಲಿರುವ ಜನರಿಗೆ ಕಳುಹಿಸುವುದಾಗಿ ಏಜೆಂಟ್​ಗಳು ಬೆದರಿಕೆ ಹಾಕಿದ್ದರಂತೆ. ಇದಕ್ಕೆ ಹೆದರಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ತಂದೆ ಅಮೃತರಾವ್ ದೂರಿನ ಮೇರೆಗೆ ಮಂಗಳಗಿರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿರಡಿಯಲ್ಲಿ ಸಾಯಿಬಾಬಾರ 115 ನೇ ಗುರು ಪೂರ್ಣಿಮೆ ಅದ್ಧೂರಿ ಆಚರಣೆ

Last Updated : Jul 12, 2022, 4:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.