ETV Bharat / bharat

ಮಾಸ್ಕ್ ಹಾಕದೇ ಬ್ಯಾಂಕ್​​ನೊಳಗೆ ನುಗ್ಗಲು ಯತ್ನ.. ಅನುಮತಿ ನಿರಾಕರಿಸಿದ ಸಿಬ್ಬಂದಿಗೆ ಥಳಿಸಿದ ವ್ಯಕ್ತಿ! - ಮಾಸ್ಕ್ ಹಾಕದೇ ಬ್ಯಾಂಕ್​​ನೊಳಗೆ ನುಗ್ಗಲು ಯತ್ನ

ಮಾಸ್ಕ್​ ಹಾಕಿಕೊಳ್ಳದೇ ಬ್ಯಾಂಕ್​​ನೊಳಗೆ ಹೋಗಲು ಯತ್ನಿಸಿದಾಗ ಆತನನ್ನ ತಡೆ ಹಿಡಿಯಲಾಗಿದ್ದು, ಈ ವೇಳೆ ಆಕ್ರೋಶಗೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Bank Guard thrashed in Delhi
Bank Guard thrashed in Delhi
author img

By

Published : Dec 29, 2021, 9:44 PM IST

ಛತ್ತರ್​​ಪುರ(ನವದೆಹಲಿ): ದೇಶದಲ್ಲಿ ಕೊರೊನಾ ಮಹಾಮಾರಿ ಜೊತೆಗೆ ಒಮಿಕ್ರಾನ್ ಸೋಂಕಿತ ಪ್ರಕರಣ ನಿತ್ಯ ಹೆಚ್ಚಳವಾಗ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಮಾಸ್ಕ್​ ಹಾಕಿಕೊಳ್ಳುವಂತೆ ಕಡ್ಡಾಯಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮಾಸ್ಕ್​ ಹಾಕದ ವ್ಯಕ್ತಿಯೊಬ್ಬ ಬ್ಯಾಂಕ್​​​ನೊಳಗೆ ಹೋಗಲು ಅನುಮತಿ ನಿರಾಕರಣೆ ಮಾಡಲಾಗಿದ್ದು, ಇದರಿಂದ ಆಕ್ರೋಶಗೊಂಡ ವ್ಯಕ್ತಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

  • #WATCH | A man thrashed a guard for stopping him from entering a bank without wearing a mask in Chhatarpur. When the staff tried to intervene, the accused called his associates and ransacked the bank & assaulted the staff. A case is being registered in this regard: Delhi Police pic.twitter.com/NARHhUBZ6y

    — ANI (@ANI) December 29, 2021 " class="align-text-top noRightClick twitterSection" data=" ">

ದೆಹಲಿಯ ಛತ್ತರ್​​ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಾಸ್ಕ್​ ಹಾಕದ ಕಾರಣಕ್ಕಾಗಿ ಬ್ಯಾಂಕ್​ ಗಾರ್ಡ್​ ಆತನಿಗೆ ಒಳ ಹೋಗದಂತೆ ಸೂಚನೆ ನೀಡಿದ್ದಾನೆ. ಈ ವೇಳೆ, ತನ್ನ ಸಹಚರರನ್ನ ಕರೆತಂದು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿರಿ: ಝಾನ್ಸಿ ರೈಲ್ವೆ ನಿಲ್ದಾಣದ ಹೆಸರು ಮರುನಾಮಕರಣ ಮಾಡಿದ ಯೋಗಿ ಸರ್ಕಾರ!

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸರು ಆರೋಪಿ ತನನ ಸಹಚರರೊಂದಿಗೆ ಬ್ಯಾಂಕ್​ ದರೋಡೆ ಮಾಡಿದ್ದು, ತದನಂತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಜೊತೆಗೆ ಒಮಿಕ್ರಾನ್ ಭೀತಿ ಹೆಚ್ಚಾಗಿರುವ ಕಾರಣ ಕೆಲವೊಂದಿಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.