ಪಾಟ್ನಾ(ಬಿಹಾರ): ಪ್ರೀತಿಯಲ್ಲಿ ಮೋಸ ಹೋದರೆ, ಕೆಲವರು ಬದುಕುವ ಭರವಸೆ ಬಿಟ್ಟು ಬಿಡ್ತಾರೆ. ಜತೆಗೆ ಖಿನ್ನತೆಗೊಳಗಾಗುವ ಅಥವಾ ದೇವದಾಸ್ನಂತೆ ಉಳಿದು ಬಿಡುವ ಪ್ರಕರಣ ನಮ್ಮ ಕಣ್ಮುಂದೆ ಇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಹಾರದಲ್ಲಿ ಹೊಸ ಬ್ರ್ಯಾಂಡ್ ಕ್ರಿಯೆಟ್ ಮಾಡಿದ್ದಾನೆ.
ಪ್ರೀತಿಯಲ್ಲಿ ಮೋಸ ಹೋಗಿ ಜೀವನ ಹಾಳು ಮಾಡಿಕೊಳ್ಳುವ ಬದಲು ಪಾಟ್ನಾದ ಸಂದೀಪ್, ಹೊಸ ಉತ್ಸಾಹದೊಂದಿಗೆ ಮಾರುಕಟ್ಟೆಗೆ ಇಳಿದು ಹಣ ಸಂಪಾದಿಸುತ್ತಿದ್ದು, ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.
2015ರಲ್ಲಿ ಹುಡುಗಿ ಭೇಟಿಯಾದ ಸಂದೀಪ್ ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿ ಮಾಡಿದ್ದಾರೆ. ಈ ವೇಳೆ ವೃತ್ತಿ ಜೀವನದ ಬಗ್ಗೆ ಅಸಡ್ಡೆ ತೋರಿಸಿದ್ದಾನೆ. ಆದರೆ, 2019ರಲ್ಲಿ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಈ ವೇಳೆ ಮನನೊಂದ ಆತನಿಗೆ ಸ್ನೇಹಿತರಾದ ರಾಹುಲ್ ಹಾಗೂ ಕುನಾಲ್ ಸಾಂತ್ವನದ ಜತೆ ಆತ್ಮವಿಶ್ವಾಸ ತುಂಬಿದ್ದಾರೆ. ಇದಾದ ಬಳಿಕ ಭವಿಷ್ಯದ ಬಗ್ಗೆ ವಿಚಾರ ಮಾಡಿ ಚಹಾ ಅಂಗಡಿ ತೆರೆಯಲು ನಿರ್ಧರಿಸಿದ್ದಾರೆ.
![bewafa chai wala](https://etvbharatimages.akamaized.net/etvbharat/prod-images/bh-pat-02-vis-bewafa-chaywala-pkg-bh10018_25032021165419_2503f_1616671459_986.jpg)
ಪಾಟ್ನಾದಲ್ಲಿ ಮೋಸದ ಚಹಾ ಅಂಗಡಿ (ಬೇವಫಾ ಚೈವಾಲಾ) ಎಂಬ ಹೆಸರಿನಲ್ಲಿ ಶಾಪ್ ಓಪನ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚು ಗ್ರಾಹಕರು ಅಂಗಡಿಯತ್ತ ಬರುತ್ತಿದ್ದಂತೆ ಇದೀಗ ಮಿಥಾಪುರ ಬಸ್ ನಿಲ್ದಾಣದ ಬಳಿ ಮತ್ತೊಂದು ಶಾಖೆ ಓಪನ್ ಮಾಡಿದ್ದು, ಇದೀಗ ಇನ್ನೊಂದು ಅಂಗಡಿ ಓಪನ್ ಮಾಡುವ ಇರಾದೆಯಲ್ಲಿದ್ದಾರೆ.
![bewafa chai wala](https://etvbharatimages.akamaized.net/etvbharat/prod-images/bh-pat-02-vis-bewafa-chaywala-pkg-bh10018_25032021165419_2503f_1616671459_480.jpg)
ಚಹಾದ ದರ ವಿಭಿನ್ನವಾಗಿದ್ದು, ಕೇವಲ 10 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಆದ್ರೆ ಪ್ರೀತಿಯಲ್ಲಿ ಮೋಸ ಹೋದವರಿಗೆ ಮಾತ್ರ. ಲವರ್ಸ್ಗಳೊಂದಿಗೆ ಬರುವವರಿಗೆ 15 ರೂ ರೇಟ್ ಫಿಕ್ಸ್ ಮಾಡಲಾಗಿದೆ. ಅನೇಕ ಪ್ರೇಮಿಗಳು ಈ ಸ್ಥಳಕ್ಕೆ ಬಂದು ಒಂದು ಕಪ್ ಚಹಾ ಸೇವಿಸಿ ಹೋಗುತ್ತಾರೆ. ಜತೆಗೆ ಅಂಗಡಿ ಹೆಸರು ವಿಭಿನ್ನವಾಗಿರುವ ಕಾರಣ ನೋಡಿದ ತಕ್ಷಣವೇ ಆಕರ್ಷಣೆ ಮೂಡುತ್ತದೆ ಎಂದು ಅನೇಕರು ಹೇಳಿಕೊಂಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಅನೇಕ ಯುವಕರು, ಪ್ರೇಮಿಗಳು, ಹಾಗೂ ವಯಸ್ಕರರು ಇಲ್ಲಿಗೆ ಬಂದು ಚಹಾ ಸೇವನೆ ಮಾಡಿ ಹೋಗ್ತಾರಂತೆ.