ವನಪರ್ತಿ(ತೆಲಂಗಾಣ): ಮದುವೆಯ ಹೆಸರಿನಲ್ಲಿ ಒಬ್ಬರ ನಂತರ ಮತ್ತೊಬ್ಬರಿಗೆ ಮೋಸ. ಹೀಗೆ, ಒಟ್ಟು ಐವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡು, ವಂಚನೆ ಮಾಡಿರುವ ಪ್ರಕರಣವೊಂದು ತೆಲಂಗಾಣದಲ್ಲಿ ನಡೆದಿದೆ. ಪ್ರಕರಣ ನಾಲ್ಕನೇ ಪತ್ನಿ ನೀಡಿರುವ ದೂರಿನಿಂದಾಗಿ ಬೆಳಕಿಗೆ ಬಂದಿದೆ. ವನಪರ್ತಿ ಪಾನಗಲ್ ಮಂಡಲದ ಮಂಗಲಪಲ್ಲಿ ನಿವಾಸಿ ಮಧು ವಂಚನೆ ಮಾಡಿರುವ ಆರೋಪಿ.
ಕಳೆದ ಆರು ತಿಂಗಳ ಹಿಂದೆ ಐದನೇ ಮದುವೆ ಮಾಡಿಕೊಂಡಿರುವ ಮಧು, ಅದಕ್ಕೂ ಮುಂಚಿತವಾಗಿ ಒಟ್ಟು ನಾಲ್ಕು ಮದುವೆ ಮಾಡಿಕೊಂಡಿದ್ದನು. ನಾಲ್ಕನೇ ಹೆಂಡ್ತಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದು, ಗರ್ಭಿಣಿಯಾಗಿದ್ದರಿಂದ ತವರು ಮನೆಯಲ್ಲಿಯೇ ಬಿಟ್ಟು ಬಂದಿದ್ದನು. ಆಕೆ, ಈಗಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಗೆ ಕರೆತಂದಿಲ್ಲ. ಇದರ ನಡುವೆ ಗಂಡನಿಗೋಸ್ಕರ ಹುಡುಕಾಟ ನಡೆಸಿದಾಗ, ಮತ್ತೊಂದು ಮದುವೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: 'Proud of you Bhagwant' : ಪಂಜಾಬ್ ಆರೋಗ್ಯ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್ ಮೆಚ್ಚುಗೆ!
ಜನನವಾಗಿರುವ ಗಂಡು ಮಗುವಿನ ಹೃದಯದಲ್ಲಿ ರಂಧ್ರವಿದ್ದು, ಚಿಕಿತ್ಸೆಗೋಸ್ಕರ ಹಣದ ಅವಶ್ಯಕತೆ ಇದೆ. ಆದರೆ, ಆಸ್ಪತ್ರೆಯಲ್ಲಿ ಖರ್ಚು ಮಾಡುವಷ್ಟು ಹಣ ತಮ್ಮ ಬಳಿ ಇಲ್ಲ ಎಂದು ಆರೋಪಿಸಿರುವ 4ನೇ ಹೆಂಡತಿ, ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಮೂವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡು ಮೋಸ ಮಾಡಿರುವ ಪ್ರಕರಣ ಸಹ ಗೊತ್ತಾಗಿದೆ. ಆದರೆ, ನಾಲ್ಕನೇ ಹೆಂಡತಿ ದೂರು ನೀಡಿದ ಮೇಲೆ ಈ ಎಲ್ಲ ಪ್ರಕರಣ ಬೆಳಕಿಗೆ ಬಂದಿವೆ.