ETV Bharat / bharat

ಪೊಲೀಸರ ವಿರುದ್ಧ ಅಸಮಾಧಾನ.. ಆತ್ಮಹತ್ಯೆ ಮಾಡಿಕೊಳ್ಳಲು ಸರಸರನೇ  ಟವರ್​ ಏರಿದ ಭೂಪ..! ಮುಂದೆ...? - ಇಂದೋರ್​ನಲ್ಲಿ ಮೊಬೈಲ್​ ಟವರ್​ ಹತ್ತಿದ ಯುವಕ

ಶುಕ್ರವಾರ ಮದ್ಯದ ಅಮಲಿನಲ್ಲಿ ಮತ್ತು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಯುವಕನೊಬ್ಬ ಮೊಬೈಲ್ ಟವರ್ ಮೇಲೆ ಏರಿ ಹೈ ಡ್ರಾಮ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

man climbed mobile tower  man climbed mobile tower in Indor  Madhya Pradesh crime news  ಮೊಬೈಲ್​ ಟವರ್​ ಹತ್ತಿದ ಯುವಕ  ಇಂದೋರ್​ನಲ್ಲಿ ಮೊಬೈಲ್​ ಟವರ್​ ಹತ್ತಿದ ಯುವಕ  ಮಧ್ಯಪ್ರದೇಶ ಅಪರಾಧ ಸುದ್ದಿ
ಆತ್ಮಹತ್ಯೆ ಮಾಡಿಕೊಳ್ಳಲು ಟವರ್​ ಏರಿದ ಭೂಪ! ಮುಂದೆ
author img

By

Published : Jan 22, 2022, 8:03 AM IST

ಇಂದೋರ್‌(ಮಧ್ಯಪ್ರದೇಶ): ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಮೇಲೆ ಏರಿ ಡ್ರಾಮ ಸೃಷ್ಟಿಸಿರುವ ಘಟನೆ ಇಲ್ಲಿನ ವಿಜಯ್ ನಗರದಲ್ಲಿ ನಡೆದಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಯುವಕನೊಬ್ಬ ಏಕಾಏಕಿ ಮೊಬೈಲ್ ಟವರ್ ಏರಿದ್ದು, ಸ್ಥಳದಲ್ಲಿ ಜನ ಜಮಾಯಿಸಿದ್ದರು.

ಓದಿ: ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ನುಗ್ಗಿದ ಖದೀಮರು: ಹಾಡಹಗಲೇ ಕೋಟ್ಯಂತರ ರೂ. ಚಿನ್ನಾಭರಣ ಕಳ್ಳತನ

ಸ್ಥಳೀಯರು ಈ ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಕೆಳಗಿಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಯುವಕ ಕೆಳಗಿಳಿಯಲಿಲ್ಲ. ಈ ವೇಳೆ ಯುವಕ ಪೊಲೀಸರ ಮೇಲೆ ಆರೋಪ ಮಾಡಿದ್ದಾನೆ. ಪೊಲೀಸರು ತಮ್ಮ ವಿರುದ್ಧ ನಿರಂತರವಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದು, ಇದರಿಂದ ಸಾಮಾಜಿಕವಾಗಿ ಮಾನಹಾನಿಯಾಗುತ್ತಿದೆ ಎಂದು ದೂರಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳಲು ಟವರ್​ ಏರಿದ ಭೂಪ! ಮುಂದೆ

ಪೊಲೀಸರ ವಿರುದ್ಧ ಯುವಕ ಉನ್ನತ ಅಧಿಕಾರಿಗಳಿಗೂ ದೂರು ನೀಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತೀವ್ರವಾಗಿ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಸಾಹಸ ಪಟ್ಟು ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಕೆಲ ಭರವಸೆಗಳನ್ನು ನೀಡಿದ ಬಳಿಕ ಟವರ್​​​ನಿಂದ ಇಳಿದು ಬಂದಿದ್ದಾನೆ. ಈ ಮೂಲಕ ಸ್ಥಳದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಯಿತು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.