ನವದೆಹಲಿ: ದೂರವಾಗಿರುವ ಪತ್ನಿ ಮತ್ತು ಆಕೆಯ ಕುಟುಂಬದವರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಮತ್ತು ಆತನ ತಂದೆ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನಂತರ ಜುಲೈ 21 ರಂದು ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ.
ಇಲ್ಲಿನ ನಜಾಫ್‌ಗಢ ನಿವಾಸಿ ಮತ್ತು ಆತನ ತಂದೆ ಸಲ್ಲಿಸಿರುವ ಮನವಿಯಲ್ಲಿ, ತನ್ನಿಂದ ದೂರವಾಗಿರುವ ಪತ್ನಿ, ಆಕೆಯ ಸಹೋದರಿ, ಸಹೋದರ ಮತ್ತು ಅತ್ತಿಗೆಯಿಂದ ಬೆದರಿಕೆ ಬರುತ್ತಿದೆ. ನಮ್ಮ ಮನೆಯ ಆವರಣಕ್ಕೆ ಹಲವಾರು ಬಾರಿ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ದಂಪತಿ 2006 ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ತಾಯಿಯೊಂದಿಗೆ ಡೆಹ್ರಾಡೂನ್‌ನಲ್ಲಿ ವಾಸಿಸುತ್ತಿದ್ದಾರೆ. ಮಹಿಳೆ ಜುಲೈ 2019 ರಲ್ಲಿ ತನ್ನ ವೈವಾಹಿಕ ಜೀವನಕ್ಕೆ ಫುಲ್ಸ್ಟಾಪ್ ಇಟ್ಟು ಮನೆ ತೊರೆದಿದ್ದರು.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂ ಛೀಮಾರಿ: ಸಾಮಾಜಿಕ ಮಾಧ್ಯಮಗಳಿಗೆ ಲಗಾಮು ಹಾಕುವಂತೆ ನ್ಯಾಯಮೂರ್ತಿ ಸಲಹೆ