ಹರಿಯಾಣ: ಯಮುನಾನಗರದಲ್ಲಿ ದಸರಾ ಮಹೋತ್ಸವದ ವೇಳೆ ನೆರೆದಿದ್ದ ಜನರ ಮೇಲೆ ರಾವಣನ ಪ್ರತಿಕೃತಿ ಬಿದ್ದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಕೆಲವರಿಗೆ ಗಾಯಗಳಾಗಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ದೆಹಲಿ: ರಾಮ್ ಲೀಲಾ ಮೈದಾನದಲ್ಲಿ ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ದೆಹಲಿಯ ಲೆಫ್ಟಿನೆಂಟ್ ಗರ್ವನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಭಾಗವಹಿಸಿದರು.
ನವರಾತ್ರಿ ಆಚರಣೆಯ ಅಂತಿಮ ದಿನದಂದು ಕೆಂಪು ಕೋಟೆಯಲ್ಲಿ ರಾಮಾಯಣ ಪ್ರದರ್ಶಿಸಲಾಯಿತು. ಈ ವೇಳೆ ತೆಲುಗು ನಟ ಪ್ರಭಾಸ್, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದರು.
ಉತ್ತರ ಪ್ರದೇಶ: ಕಾನ್ಪುರದಲ್ಲಿ ಇಂದು ಭಾರಿ ಮಳೆಯಾಗುತ್ತಿದೆ. ಪರಿಣಾಮ ನವರಾತ್ರಿ ಆಚರಣೆಯ ಅಂತಿಮ ದಿನದಂದು ದಹಿಸಲಾಗಿದ್ದ ರಾವಣನ ಪ್ರತಿಕೃತಿಗಳು ಹಾಳಾದವು. ಹೀಗಾಗಿ ಭಕ್ತರು ನಿರಾಸೆಗೊಳಗಾದರೂ, ಆದರೂ ಜನ ಹಬ್ಬದ ಸಂಭ್ರಮ ಸವಿದರು.
ಲಡಾಖ್: ದಸರಾ ಪ್ರಯುಕ್ತ ಲೇಹ್‌ನ ಪೋಲೋ ಮೈದಾನದಲ್ಲಿ 'ರಾವಣ ದಹನ್' ಪ್ರದರ್ಶನಗೊಂಡಿತು.
ಓದಿ: ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ