ETV Bharat / bharat

ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ ಕೊಂದ ಪಾಗಲ್​ಪ್ರೇಮಿ! - young woman Murder in Kerala

ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ಬೆಳಕಿಗೆ ಬಂದಿದೆ.

a-lover-kill-young-girl-who-refused-love
ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ ಕೊಂದ ಪಾಗಲ್​ಪ್ರೇಮಿ
author img

By

Published : Oct 22, 2022, 8:55 PM IST

ಕಣ್ಣೂರು(ಕೇರಳ): ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೊಬ್ಬ, ಯುವತಿಯನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿದ ಭೀಕರ ಘಟನೆ ಕೇರಳದ ಕಣ್ಣೂರಿನಲ್ಲಿ ಶನಿವಾರ ನಡೆದಿದೆ. ವಿಷ್ಣುಪ್ರಿಯಾ (23) ಮೃತಪಟ್ಟ ಯುವತಿ. ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ.

ಸಾವಿನ ನೋವಲ್ಲಿ ಮತ್ತೊಂದು ಸಾವು: ವಿಷ್ಣುಪ್ರಿಯಾ ಅವರ ಕುಟುಂಬಸ್ಥರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಈಕೆ ಕೂಡ ಅದರಲ್ಲಿ ಭಾಗವಹಿಸಲೆಂದು ಬಟ್ಟೆ ಬದಲಿಸಲು ಮನೆಗೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಪಾಗಲ್​ ಪ್ರೇಮಿ ಮತ್ತು ಆತನ ಸಹಚರರು ಯುವತಿಯ ಕತ್ತು ಸೀಳಿ, ಕೈ ಕಾಲು, ದೇಹಕ್ಕೆ ಚಾಕುವಿನಿಂದ ಇರಿಯಲಾಗಿದೆ.

ತೀವ್ರ ರಕ್ತಸ್ರಾವದಿಂದ ವಿಷ್ಣುಪ್ರಿಯಾ ಮನೆಯಲ್ಲೇ ಮೃತಪಟ್ಟಿದ್ದಾರೆ. ಎಷ್ಟೊತ್ತಾದರೂ ಯುವತಿ ಅಂತ್ಯಕ್ರಿಯೆಗೆ ಬಾರದಿದ್ದಾಗ ಮನೆಗೆ ಬಂದು ಕುಟುಂಬಸ್ಥರು ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ.

ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ವಿಚಾರಣೆ ನಡೆಸಿದಾಗ, ಮಾಸ್ಕ್​ ಧರಿಸಿದ ವ್ಯಕ್ತಿಯೊಬ್ಬ ಮನೆಯ ಬಳಿ ಸುಳಿದಾಡಿದ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಬಳಿಕ ಪ್ರಕರಣದಲ್ಲಿ ಪ್ರೇಮದ ವಿಷಯ ಗೊತ್ತಾಗಿ ಕಣ್ಣೂರಿನ ಕೂತುಪರಂಬ ಮೂಲದ ಶ್ಯಾಮ್​ಜಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಆತ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಓದಿ: ವಿಚಾರಣೆಗಾಗಿ ಚೆನ್ನೈಗೆ ಕರೆತಂದಿದ್ದ ತೆಲಂಗಾಣದ ವ್ಯಕ್ತಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.