ETV Bharat / bharat

ಇಡಿ ಇಲಾಖೆ ಅಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ : ಮಹಿಳಾ SI ಆತ್ಮಹತ್ಯೆಗೆ ಯತ್ನ

author img

By

Published : Aug 5, 2021, 6:53 PM IST

ವಿಶೇಷ ಜಾರಿ ನಿರ್ದೇಶನಾಲಯ ಇಲಾಖೆಯ ಮಹಿಳಾ ಎಸ್‌ಐ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಅವರು ಕೆಲಸ ಮಾಡುತ್ತಿರುವ ಇಲಾಖೆ ಅಧಿಕಾರಿಯ ಲೈಂಗಿಕ ಕಿರುಕುಳದಿಂದ ಬೇಸತ್ತು ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Lady SI In Special Enforcement Department Tried To Commit Suicide
ಮಹಿಳಾ ಎಸ್​ಐ ಆತ್ಮಹತ್ಯೆಗೆ ಯತ್ನ

ವಿಶಾಖಪಟ್ಟಣ( ಆಂಧ್ರಪ್ರದೇಶ): ತನ್ನದೇ ಇಲಾಖೆಯ ಅಧಿಕಾರಿಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಶೇಷ ಜಾರಿ ನಿರ್ದೇಶನಾಲಯ ಇಲಾಖೆಯ ಮಹಿಳಾ ಎಸ್‌ಐ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಶಾಖಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ವಿಶೇಷ ಜಾರಿ ನಿರ್ದೇಶನಾಲಯ ಇಲಾಖೆಯ ಇಎಸ್ ಎನ್ ಬಾಲಕೃಷ್ಣನ್ ಎಂಬ ಅಧಿಕಾರಿಯು ವ್ಯಾಪಾರಿವೊಬ್ಬನಿಂದ ಮೊಬೈಲ್​ ಫೋನ್​​ ಅನ್ನು ವಶಕ್ಕೆ ಪಡೆದಿದದ್ದರು. ಅದರಲ್ಲಿ ಅಶ್ಲೀಲ ವಿಡಿಯೋ ಸೇರಿದಂತೆ ಅಸಭ್ಯವಾಗಿ ಮಾತನಾಡಿದ ಆಡಿಯೋಗಳಿದ್ದವು. ಇವುಗಳನ್ನು ಡೌನ್​ಲೋಡ್​ ಮಾಡಿ ಸಿಡಿಗೆ ವರ್ಗಾಯಿಸುವಂತೆ ಮಹಿಳಾ ಎಸ್​ಐಗೆ ಆದೇಶಿಸಿದ್ದರಂತೆ.

ಇದು ಅಶ್ಲೀಲ ಕೆಲಸ, ನಾನು ಮಾಡುವುದಿಲ್ಲ ಎಂದು ಎಸ್​ಐ ನಿರಾಕರಿಸಿದ್ದರು. ಆದರೆ ಬಾಲಕೃಷ್ಣನ್ ಆಕೆಯ ಮೇಲೆ ಸಾಕಷ್ಟು ಒತ್ತಡ ಹೇರಿದ್ದರಿಂದ ನೊಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ.

ಪ್ರಕರಣ ಸಂಬಂಧ ಸಂತ್ರಸ್ತ ಎಸ್​ಐ ಪತಿ, ಡಿಜಿಪಿ ಗೌತಮ್ ಸವಾಂಗ್‌ ಅವರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಡಿಜಿಪಿ ಗೌತಮ್ ಸವಾಂಗ್ ಇಎಸ್ ಎನ್ ಬಾಲಕೃಷ್ಣನ್ ವಿರುದ್ಧ ಆಂತರಿಕ ತನಿಖೆಗೆ ನಡೆಸಿ 10 ದಿನಗಳ ಒಳಗೆ ಉತ್ತರಿಸಲು ಆದೇಶಿಸಿದ್ದಾರೆ.

ಓದಿ: ಕಾಸ್ಟಿಂಗ್ ಸೋಡಾ ಮಿಕ್ಸ್ ಮಾಡುವಾಗ ಸ್ಫೋಟ.. ಐವರು ಕಾರ್ಮಿಕರಿಗೆ ಗಾಯ

ಎಲ್ಲಾ ಆರೋಪಗಳು ಸಾಬೀತಾದ ಬೆನ್ನಲ್ಲೇ ಬಾಲಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಮೇಲೆ ರಾಜ್ಯ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.