ETV Bharat / bharat

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಪರೀಕ್ಷೆ ಬರೆಯಲು ಬಂದ ಯುವತಿ.. ವಿಡಿಯೋ - ಉದ್ಯೋಗ ಬಡ್ತಿಗಾಗಿ ಅರ್ಹತಾ ಪರೀಕ್ಷೆ

ವಿಶಾಖಪಟ್ಟಣಂ ಮತ್ತು ವಿಜಯನಗರಂ ಜಿಲ್ಲೆ ನಡುವೆ ಬರುವ ಚಂಪಾವತಿ ನದಿಯಲ್ಲಿ ಯುವತಿ ತನ್ನ ಸಹೋದರರ ನೆರವಿನೊಂದಿಗೆ ನದಿಯಲ್ಲಿ ಈಜಿ ಮತ್ತೊಂದು ದಡ ಸೇರಿದ್ದಾರೆ.

a-girl-who-swam-in-the-river-and-wrote-the-exam-in-visakhapatnam
ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಪರೀಕ್ಷೆ ಬರೆಯಲು ಬಂದ ಯುವತಿ
author img

By

Published : Sep 10, 2022, 8:23 PM IST

ವಿಶಾಖಪಟ್ಟಣಂ (ಆಂಧ್ರಪದೇಶ): ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಯುವತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿಕೊಂಡು ಬಂದ ಸಾಹಸಮಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಶಾಖಪಟ್ಟಣಂ ಮತ್ತು ವಿಜಯನಗರಂ ಜಿಲ್ಲೆ ನಡುವೆ ಬರುವ ಚಂಪಾವತಿ ನದಿಯಲ್ಲಿ ಯುವತಿ ತನ್ನ ಸಹೋದರರ ನೆರವಿನೊಂದಿಗೆ ನದಿಯಲ್ಲಿ ಈಜಿ ಮತ್ತೊಂದು ದಡ ಸೇರಿದ್ದಾರೆ.

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜಿ ಪರೀಕ್ಷೆ ಬರೆಯಲು ಬಂದ ಯುವತಿ

ವಿಜಯನಗರಂ ಜಿಲ್ಲೆಯ ಮರಿವಲಸ ಗ್ರಾಮದ ಯುವತಿ ವಿಶಾಖಪಟ್ಟಣಂನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಉದ್ಯೋಗ ಬಡ್ತಿಗಾಗಿ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಚಂಪಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೋಣಿಗಳ ಸೇವೆಯನ್ನು ನಿಲ್ಲಿಸಲಾಗಿದೆ. ಪರೀಕ್ಷೆಗೆ ಹೋಗಲೇಕೆಂಬ ಛಲದಿಂದ ಯುವತಿ ನದಿಯಲ್ಲಿ ಈಜಿ ಬರುವ ನಿರ್ಧಾರಕ್ಕೆ ಬಂದಿದ್ದಾರೆ.

ಅಂತೆಯೇ, ಪರೀಕ್ಷೆಗೂ ಒಂದು ದಿನ ಮುಂಚೆಯೇ ಅಂದರೆ ಶುಕ್ರವಾರ ಸಹೋದರರ ಸಹಾಯದಿಂದ ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ಯುವತಿ ನದಿ ದಾಟಿದ್ದಾರೆ. ಕಳೆದ ಎರಡು ದಿನಗಳಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದರೂ, ಅಪಾಯಕಾರಿ ಪರಿಸ್ಥಿತಿಯಲ್ಲೂ ನದಿ ಮೂಲಕವೇ ಬಂದು ಯುವತಿ ಪರೀಕ್ಷೆಗೆ ಹೋಗಿದ್ದಾರೆ. ಸಹೋದರರ ಸಹಾಯದೊಂದಿಗೆ ನದಿಯಲ್ಲಿ ಬರುತ್ತಿರುವ ದೃಶ್ಯಗಳು ಮೊಬೈಲ್​​ನಲ್ಲಿ​ ಸೆರೆಯಾಗಿವೆ.

ಇದನ್ನೂ ಓದಿ: ಮುಖಾಮುಖಿ ಡಿಕ್ಕಿ ಹೊಡೆದ ಎರಡು ಟ್ರಕ್​ಗಳು.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.