ETV Bharat / bharat

ಐವರು ಸಹಪಾಠಿಗಳಿಂದ ವಿದ್ಯಾರ್ಥಿನಿ ಮೇಲೆ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ! - ಬಾಲಕಿ ಮೇಲೆ ಐವರು ಸಹಪಾಠಿಗಳು ಅತ್ಯಾಚಾರ

ಐವರು ವಿದ್ಯಾರ್ಥಿಗಳಿಂದ ವಿದ್ಯಾರ್ಥಿನಿ ಮೇಲೆ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿರುವ ಅಮಾನುಷ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

girl student was gang raped  student was gang raped twice by her classmates  girl gang raped in Telangana  ವಿದ್ಯಾರ್ಥಿನಿ ಮೇಲೆ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ  ಐವರು ಸಹಪಾಠಿಗಳಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​ ಹಯಾತ್‌ನಗರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ  ಬಾಲಕಿ ಮೇಲೆ ಐವರು ಸಹಪಾಠಿಗಳು ಅತ್ಯಾಚಾರ  ವಿಡಿಯೋ ಅಪ್ಲೋಡ್ ಮಾಡುವುದಾಗಿ ಬಾಲಕಿಗೆ ಬೆದರಿಕೆ
ಐವರು ಸಹಪಾಠಿಗಳಿಂದ ವಿದ್ಯಾರ್ಥಿನಿ ಮೇಲೆ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರ
author img

By

Published : Nov 29, 2022, 11:36 AM IST

ಹೈದರಾಬಾದ್‌(ತೆಲಂಗಾಣ): ಹಯತ್‌ನಗರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವೊಂದು ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಐವರು ಸಹ ವಿದ್ಯಾರ್ಥಿಗಳು ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.

ಸುಮಾರು 10 ದಿನಗಳ ಹಿಂದೆ ಬಾಲಕಿ ಮೇಲೆ ಐವರು ಸಹಪಾಠಿಗಳು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಈ ಕೃತ್ಯವನ್ನು ವಿದ್ಯಾರ್ಥಿಗಳು ಚಿತ್ರೀಕರಿಸಿ, ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದರಂತೆ.

ಹತ್ತು ದಿನಗಳ ನಂತರ ಮತ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪ ಪ್ರಕರಣ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ, ಅತ್ಯಾಚಾರದ ವಿಡಿಯೋವನ್ನು ಸಹ ಬೇರೆ ಸ್ನೇಹಿತರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಆಕೆಯ ಕುಟುಂಬಸ್ಥರಿಗೆ ಅನುಮಾನ ಮೂಡಿದೆ. ಆಗ ಬಾಲಕಿ ನಡೆದ ಘಟನೆ ಬಗ್ಗೆ ಪೋಷಕರ ಮುಂದೆ ವಿವರಿಸಿದ್ದಾಳೆ. ಕೂಡಲೇ ಬಾಲಕಿಯ ಕುಟುಂಬಸ್ಥರು ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಓದಿ: Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.