ಟುಟಿಕೋರಿನ್(ತಮಿಳುನಾಡು) : ಪತಿಯಿಂದ ಬೇರ್ಪಟ್ಟು ಕಷ್ಟದಿಂದಲೇ ಮಕ್ಕಳಿಗೆ ಜೀವನ ರೂಪಿಸಿಕೊಡುತ್ತಿದ್ದವಳು ಮಗಳ ಪ್ರೀತಿಯ ವ್ಯಾಮೋಹಕ್ಕೆ ಬಲಿಯಾಗಿದ್ದಾಳೆ. ಸ್ವತಃ ಮಗಳೇ ತನ್ನ ಗೆಳೆಯನ ಸಹಾಯದಿಂದ ತಾಯಿಯನ್ನು ಹತ್ಯೆ ಮಾಡಿದ್ದಾಳೆ.
ಮುನಿಯಲಕ್ಷ್ಮಿ ಎಂಬುವರು ಹತ್ಯೆಯಾದವರು. ಈಕೆ ತನ್ನ 4 ಮಕ್ಕಳೊಂದಿಗೆ (3 ಹುಡುಗಿಯರು, 1 ಗಂಡು) ವಾಸಿಸುತ್ತಿದ್ದಳು. ಟುಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಾತ್ಕಾಲಿಕ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಸಂಸಾರದ ಬಂಡಿ ನೂಕುತ್ತಿದ್ದಳು. ಇದರ ನಡುವೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ಹಿರಿಯ ಮಗಳು (17) ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲೇ ಇದ್ದಳು. ಈ ವೇಳೆ ಆಕೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.
ಇದನ್ನೂ ಓದಿ: ಕಾನೂನಾತ್ಮಕವಾಗಿ ಆಸ್ತಿ ವಿವರ ಕೇಳಿರುತ್ತಾರೆ, ಸಲ್ಲಿಸಿದರಾಯಿತು: ತಾಯಿಗೆ ಐಟಿ ನೋಟಿಸ್ ಬಗ್ಗೆ ಹೆಚ್‌ಡಿಕೆ
ಘಟನೆ ತಿಳಿದ ಮುನಿಯಲಕ್ಷ್ಮಿ ಮಗಳ ನಡೆತೆಯಿಂದ ಕೋಪಗೊಂಡು ಆಕೆಗೆ ನಿರ್ಬಂಧ ಹೇರಿದ್ದರು. ಇದರಿಂದ ಆಕ್ರೋಶಿತಳಾದ ಮಗಳು ಇಂದು ತನ್ನ ತಾಯಿ ಮಲಗಿದ್ದಾಗ ತನ್ನ ಪ್ರಿಯಕರನ ಬೆಂಬಲದಿಂದ ಕೊಂದಿದ್ದಾಳೆ. ಈ ವಿಷಯ ತಿಳಿದ ತೆನ್ಪಾಗಂ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮುನಿಯಲಕ್ಷ್ಮಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸುಳ್ಳು ಕಥೆ ಕಟ್ಟಿದ ಕಿರಾತಕಿ : ತನ್ನ ತಾಯಿ ತನ್ನನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇದರಿಂದ ಕೆಲ ಕಾಲ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ಸಂಬಂಧ ಕಾನೂನು ಕ್ರಮ ಕೈಗೊಂಡಿದ್ದಾರೆ.