ETV Bharat / bharat

ಕೃಷಿಗಾಗಿ ಸರ್ಕಾರಿ ಉದ್ಯೋಗಕ್ಕೇ ಗುಡ್​ ಬೈ.. Dragon Fruit​ ಬೆಳೆದ ರೈತನ ಯಶೋಗಾಥೆ - Dragon fruit 2021

ಸರ್ಕಾರಿ ಕೆಲಸವನ್ನು ತ್ಯಜಿಸಿ ಕೃಷಿ ಕ್ಷೇತ್ರದತ್ತ ಒಲವು ತೋರಿದ ವಿನಪಲ್ಲಿ ಶ್ರೀನಿವಾಸ ರೆಡ್ಡಿ ಎಂಬವರು ಡ್ರ್ಯಾಗನ್​ ಹಣ್ಣಿನ ಬೆಳೆಯಲ್ಲಿ ಯಶಸ್ಸು ಕಂಡಿದ್ದಾರೆ. ಸುಮಾರು ಆರು ವರ್ಷಗಳಿಂದ ಈ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

Telangana
ಡ್ರ್ಯಾಗನ್ ಫ್ರೂಟ್​ ಬೆಳೆಯಲ್ಲಿ ಯಶಸ್ಸು ಕಂಡ ಶ್ರೀನಿವಾಸ್​
author img

By

Published : Jul 4, 2021, 9:36 AM IST

ಹೈದರಾಬಾದ್(ತೆಲಂಗಾಣ)​: ಖಾಸಗಿಯಾಗಲಿ, ಸರ್ಕಾರಿ ಯಾವುದಾದರೂ ಒಂದು ಉದ್ಯೋಗ ಸಿಕ್ಕರೆ ಸಾಕು. ಈ ಕೃಷಿಯಲ್ಲಿ ಲಾಭವಿಲ್ಲ, ಹಾಕಿದ ಬಂಡವಾಳ ಕೈಗೆ ಸಿಗಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತವರೇ ಹೆಚ್ಚು. ಆದ್ರೆ ಇಲ್ಲೋರ್ವ ರೈತ ಸರ್ಕಾರಿ ಉದ್ಯೋಗವನ್ನೇ ತ್ಯಜಿಸಿ ಕೃಷಿಯತ್ತ ಮುಖಮಾಡಿದ್ದಾರೆ.

ಹೌದು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಅರಿತ ವ್ಯಕ್ತಿವೋರ್ವ ತನಗಿದ್ದ ಸರ್ಕಾರಿ ಉದ್ಯೋಗ ತ್ಯಜಿಸಿ ಭೂತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡ್ರ್ಯಾಗನ್​ ಹಣ್ಣಿನ ಬೆಳೆ ಬೆಳೆದು ಅದರಲ್ಲೇ ಯಶಸ್ಸು ಕಂಡಿದ್ದಾರೆ.

6 ವರ್ಷಗಳಿಂದ ಡ್ರ್ಯಾಗನ್​ ಬೆಳೆ..

ಸುಮಾರು ಆರು ವರ್ಷಗಳಿಂದ ಈ ಡ್ರ್ಯಾಗನ್​ ಫ್ರೂಟ್​ ಬೆಳೆಯಲು ಮುಂದಾಗಿರುವ ಈ ರೈತನ ಹೆಸರು ವಿನಪಲ್ಲಿ ಶ್ರೀನಿವಾಸ ರೆಡ್ಡಿ. ಇವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅರುತ್ಲಾ ಗ್ರಾಮದ ಮಂಚಲಾ ಮಂಡಲದವರು.

ಸಂಶೋಧನೆ ಬಳಿಕ ಡ್ರ್ಯಾಗನ್​ ಬೆಳೆಗೆ ಸಜ್ಜು..

ಡ್ರ್ಯಾಗನ್​ ಹಣ್ಣನ್ನು ವಿದೇಶದಿಂದಲೇ ಏಕೆ ಆಮದು ಮಾಡಬೇಕು. ನಮ್ಮ ರಾಜ್ಯದಲ್ಲೂ ಬೆಳೆಯಬಹುದಲ್ಲವೇ ಎಂದು ಯೋಚಿಸಿದ ಶ್ರೀನಿವಾಸ್​, ಈ ಹಣ್ಣಿನ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಲಾರಂಭಿಸಿದರು. ಅಂತಿಮವಾಗಿ ಅವರು ಯೋಚಿಸಿದಂತೆ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಸುವ ಗುರಿಯಲ್ಲಿ ಯಶಸ್ವಿಯಾದರು. ಶ್ರೀನಿವಾಸ್ ರೆಡ್ಡಿ, ತಮ್ಮ ಸರ್ಕಾರಿ ಕೆಲಸವನ್ನು ತ್ಯಜಿಸಿ ಕೃಷಿ ಕ್ಷೇತ್ರದತ್ತ ಒಲವು ತೋರಿರುವುದು ಮಾದರಿ ವಿಷಯ. ಈ ಕೃಷಿಯ ಯಶಸ್ಸಿನ ಪಾಠಗಳನ್ನು ಇತರ ರೈತರೊಂದಿಗೂ ಸಹ ಹಂಚಿಕೊಳ್ಳುತ್ತಾರೆ.

ಇದನ್ನು ಓದಿ: Bigg Boss Season 8: ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ಎಲಿಮನೇಟ್​ ಇವರೇ!

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯಬಹುದಾಗಿದೆ. 10 ರಿಂದ 40 ಡಿಗ್ರಿ ತಾಪಮಾನವಿರುವ ಪ್ರದೇಶಗಳಲ್ಲಿಯೂ ಇದನ್ನು ಬೆಳೆಯಬಹುದು. ಹಣ್ಣುಗಳ ಮಾರುಕಟ್ಟೆ ಬೆಲೆ ಪ್ರತಿ ಕೆಜಿಗೆ 150 ರಿಂದ 200 ರೂ. ಇದೆ. ಈ ಬೆಳೆಗೆ ಎಕರೆಗೆ 4 ರಿಂದ 5 ಲಕ್ಷ ರೂ. ಖರ್ಚಾಗುತ್ತದೆ. ಒಂದು ವರ್ಷದ ನಂತರ ಲಾಭ ಬರುತ್ತದೆ ಎಂದು ಶ್ರೀನಿವಾಸ್​ ಹೇಳಿದ್ದಾರೆ.

ಇತರೆ ರೈತರಿಗೂ ಮನವಿ..

ಇದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸುವ ಅಗತ್ಯವಿಲ್ಲ. ಈ ಕೃಷಿಯನ್ನು ಸಾವಯವವಾಗಿ ಮಾಡಬಹುದು. ಸಸ್ಯ ಬೆಳೆದ ಒಂದು ವರ್ಷಕ್ಕೆ ಹಣ್ಣುಗಳು ಬರುತ್ತವೆ. ಅನೇಕ ಪೋಷಕಾಂಶಗಳು, ಔಷಧೀಯ ಗುಣಗಳನ್ನು ಹೊಂದಿರುವ ಮತ್ತು ಉತ್ತಮ ಲಾಭವನ್ನು ತರುವ ಈ ಡ್ರ್ಯಾಗನ್ ಹಣ್ಣನ್ನು ಬೆಳೆಸಲು ರೈತರು ಮುಂದೆ ಬರಬೇಕೆಂದು ಶ್ರೀನಿವಾಸ್​ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.