ಪೂರ್ವ ಗೋದಾವರಿ(ಆಂಧ್ರಪ್ರದೇಶ): ಕೊರೊನಾ ವೈರಸ್ ಹರಡುವ ಭೀತಿಗೆ ಒಳಗಾಗಿದ್ದ ಕುಟುಂಬವೊಂದು ಬರೋಬ್ಬರಿ ಒಂದೂವರೆ ವರ್ಷದಿಂದ ನಿರ್ಬಂಧ ವಿಧಿಸಿಕೊಂಡು ಕ್ವಾರಂಟೈನ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಪೂರ್ವ ಗೋದಾವರಿ ಜಿಲ್ಲೆಯ ರಾಜೋಲು ಮಂಡಲದ ಕುಟುಂಬವೊಂದು ಈ ರೀತಿ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವುದು ತಿಳಿದು ಬಂದಿದೆ. ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಕುಟುಂಬದಲ್ಲಿದ್ದು, ತಂದೆಯ ವಿಕಲಚೇತನ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ತುರ್ತು ಸ್ಥಿತಿಯಲ್ಲಿ ತಂದೆ ಹಾಗೂ ಮಗ ಮಾತ್ರ ಮನೆಯಿಂದ ಹೊರ ಬರುತ್ತಿದ್ದರಂತೆ.
ಇತ್ತೀಚಿಗೆ ಅವರಿಗೆ ಸರ್ಕಾರಿ ಮನೆ ಮಂಜೂರಾಗಿದ್ದು, ಈ ಹಿನ್ನೆಲೆ ಮಹಿಳೆಯ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ತೆಗೆದುಕೊಳ್ಳಲು ತೆರಳಿದ್ದ ಅಧಿಕಾರಿಗಳಿಗೆ ಹತ್ತಿರ ಬಾರದಂತೆ ಸೂಚಿಸಿದಲ್ಲದೇ, ಮನೆಯಿಂದ ಹೊರ ಬರಲು ನಿರಾಕರಿಸಿದ್ದರು.
ಬಳಿಕ ಗ್ರಾಮದ ಮುಖ್ಯಸ್ಥರ ಮೂಲಕ ಪೊಲೀಸರು ಮಾಹಿತಿ ಪಡೆದು, ಅವರನ್ನು ಮನೆಯಿಂದ ಆಚೆ ಕರೆ ತರಲಾಯಿತು. ಅಲ್ಲದೇ ಮೂವರು ಮಹಿಳೆಯರು ಮಾನಸಿಕ ಸ್ಥಿಮಿತ ಕಳೆದು ಕೊಂಡಿರುವ ಜೊತೆಗೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಐ ಕೃಷ್ಣಮಾಚಾರಿ ಹೇಳಿದ್ದಾರೆ.